Advertisements

ಅರ್ಜುನನ ಗಾಂಡೀವದಿಂದಲೂ ವಿದುರನನ್ನ ಸೋಲಿಸಲು ಸಾಧ್ಯವಿರಲಿಲ್ಲ ! ಯಾರೀ ವಿದುರ ? ಮಹಾಮಂತ್ರಿಯ ಬಗ್ಗೆ ಗೊತ್ತಿಲ್ಲದ ರಹಸ್ಯಗಳು

Adyathma

ನಮಸ್ತೇ ಸ್ನೇಹಿತರೇ, ಮಹಾಭಾರತದ ಪ್ರಮುಖ ಪಾತ್ರ ಹಾಗೂ ಹಸ್ತಿನಾಪುರದ ಸಾಮ್ರಾಜ್ಯದ ಪಿಲ್ಲರ್ ಗಳಲ್ಲಿ ವಿದುರ ಕೂಡ ಒಬ್ಬರು. ಮಹಾ ಮೇಧಾವಿ ಬುದ್ದಿವಂತ ಮಂತ್ರಿಯಾಗಿದ್ದ ವಿದುರ ದಾಸಿ ಪುತ್ರ. ಆದರೂ ಕೂಡ ಧೃತರಾಷ್ಟ್ರ ಮಹಾರಾಜನಿಗೆ ರಾಜ್ಯಭಾರ ನಡೆಸುವಲ್ಲಿ ಸಹಾಯಕನಾಗಿದ್ದ. ಶಕುನಿಯ ಕುಟಿಲ ನೀತಿ ಹಾಗೂ ದುರ್ಯೋಧನನ ಮೋಸದಿಂದಾಗಿ ಕೌರವ ಪಾಂಡವರ ನಡುವೆ ಕುರುಕ್ಷೇತ್ರ ಯು’ದ್ಧ ಏರ್ಪಡುತ್ತದೆ. ಪಿತಾಮಹ ಭೀಷ್ಮ, ಗುರು ದ್ರೋಣಾಚಾರ್ಯ ಆಧಿಯಾಗಿ ಎಲ್ಲರೂ ಈ ಯು’ದ್ಧದಲ್ಲಿ ಪಾಲ್ಗೊಳ್ಳುತ್ತಾರೆ.

ಆದರೆ ಹಸ್ತಿನಾಪುರ ರಾಜ್ಯದ ಮಹಾಮಂತ್ರಿಯಾಗಿದ್ದ ವಿದುರ ಮಾತ್ರ ಈ ಯು’ದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ಈ ಯು’ದ್ದಕ್ಕೂ ಮುಂಚೆ ವಿದುರ ಯಾವುದೇ ಯು’ದ್ಧದಲ್ಲಿ ಪಾಲ್ಗೊಂಡಿರಲಿಲ್ಲವೇ ? ಅವರಲ್ಲಿ ಯಾವೆಲ್ಲಾ ಶಸ್ತ್ರಗಳಿತ್ತು ? ಅಥ್ವಾ ಇವರಿಗೆ ಶಸ್ತ್ರ ವಿಧ್ಯೆಯ ಬಗ್ಗೆ ಗೊತ್ತಿರಲಿಲ್ಲವೇ ? ಹೀಗೆ ಅನೇಕ ಪ್ರಶ್ನೆಗಳು ನಮ್ಮಲ್ಲಿ ಕಾಡುವುದು ಸಹಜ.

Advertisements

ಅಸಲಿಗೆ ವಿದುರನು ಮಹಾನ್ ಪರಾಕ್ರಮಿಯಾಗಿದ್ದ. ನಾರಾಯಣನ ಭಕ್ತನಾಗಿದ್ದ ವಿದುರನ ಬಳಿ ಸಾಕ್ಷಾತ್ ವಿಷ್ಣುವೇ ನೀಡಿದ ಗೋವರ್ಧನ ಎನ್ನುವ ಮಹಾ ಧನಸ್ಸನ್ನ ಹೊಂದಿರುತ್ತಾನೆ. ಸ್ವತಃ ಅರ್ಜುನ ಪಡೆದುಕೊಂಡಿದ್ದ ಗಾಂಡೀವಿ ಧನಸ್ಸು ಕೂಡ ಅದರ ಮುಂದೆ ಏನೂ ಇರಲಿಲ್ಲ. ಭಗವಂತ ವಿಷ್ಣು ಸ್ವಾಮಿಯೇ ಕೊಟ್ಟಿದ್ದ ಗೋವರ್ಧನ ದನಸ್ಸುನ್ನ ಹೊಂದಿದ್ದರೂ ವಿದುರ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ ವಿದುರ ಮಹಾ ಧರ್ಮಿಷ್ಠನಾಗಿದ್ದ. ಇದರ ಬಗ್ಗೆ ತಿಳಿಯಬೇಕಾದಲ್ಲಿ ವಿದುರನ ಪೂರ್ವಜನ್ಮದ ಬಗ್ಗೆ ತಿಳಿಯಲೇಬೇಕು.

ಪೂರ್ವಕಾಲದಲ್ಲಿ ಮಾಂಡವ್ಯನೆಂಬ ಮಹಾಋಷಿಯಿದ್ದ. ಆ ಮುನಿ ಅರಣ್ಯದಲ್ಲಿ ತಪಸ್ಸಿನಲ್ಲಿ ಲೀನವಾಗಿರಬೇಕಾದರೆ, ಅದೇ ಸಮಯಕ್ಕೆ ಕೆಲ ಕಳ್ಳರು ತಾವು ದೋಚಿದ್ದನ್ನೆಲ್ಲಾ ಮಾಂಡವ್ಯ ಮುನಿಯ ಆಶ್ರಮದಲ್ಲಿ ಬಚ್ಚಿಡುತ್ತಾರೆ. ಆದರೆ ಕಳ್ಳರ ಹಿಂದೆಯೇ ಬಂದಿದ್ದ ರಾಜಭಟರು ಕಳ್ಳರು ಕದ್ದ ಮಾಲನ್ನೆಲ್ಲಾ ಮುನಿಯ ಆಶ್ರಮದಲ್ಲಿ ಬಚ್ಚಿಟ್ಟಿರುವ ಕಾರಣ ಮುನಿ ಮಾಂಡವ್ಯ ಈ ಕಳ್ಳರ ನಾಯಕನೆಂದು ಅರಿತ ಭಟರು ಕಳ್ಳರ ಜೊತೆಗೆ ಮುನಿಯನ್ನು ಬಂ’ಧನ ಮಾಡಿ ರಾಜನ ಆಸ್ಥಾನಕ್ಕೆ ಕರೆದೊಯ್ಯುತ್ತಾರೆ.

ಕಳ್ಳರಿಗೆ ಮ’ರಣ ಶಿಕ್ಷೆ ವಿಧಿಸಿದ ಆ ರಾಜ ಹಿಂದೂ ಮುಂದು ಯೋಚನೆ ಮಾಡದೆ ಮುನಿ ಮಾಂಡವ್ಯನಿಗೂ ಶೂಲಾರೋಹಣ ಎಂಬ ಶಿಕ್ಷೆಯನ್ನ ವಿಧಿಸಿತ್ತಾನೆ. ಇನ್ನು ಈ ಶೂಲಾರೋಹಣ ಶಿಕ್ಷೆಯೆಂದರೆ ಆರೋಪಿಯನ್ನ ಶೂಲದ ಮೇಲೆ ಕುಳ್ಳರಿಸುವುದು. ಇನ್ನು ಆ ಶೂಲವು ನಿಧಾನವಾಗಿ ಚುಚ್ಚುತ್ತಾ ಮಾಂಡವ್ಯ ಮುನಿಯ ದೇಹದ ಕುತ್ತಿಗೆಯೇವರೆಗೂ ಬರುತ್ತದೆ. ಇಷ್ಟಾದರೂ ಕೂಡ ಆ ಮಹಾಮುನಿ ತನ್ನ ತಪಸ್ಸಿನಲ್ಲೇ ಲೀನನಾಗಿರುತ್ತಾನೆ.

ಇನ್ನು ಅದೇ ಸಮಯದಲ್ಲಿ ತನ್ನ ಅರಮನೆಗೆ ಬಂದ ಋಷಿ ಮುನಿಗಳಿಂದ ಮುನಿ ಮಾಂಡವ್ಯನ ಬಗ್ಗೆ ತಿಳಿದು, ತನ್ನ ಕಡೆಯಿಂದ ಮಹಾಪರಾಧವಾಯಿತು ಎಂದು ತಿಳಿದು ಶೂಲವನ್ನ ಹೊರತೆಗೆಯಲು ಪ್ರಯತ್ನಿಸಿತ್ತಾರೆ. ಆದರೆ ಆ ಶೂಲವು ಮುನಿ ಮಾಂಡವ್ಯನ ದೇಹದಿಂದ ಹೊರಬರದ ಕಾರಣ ಅದನ್ನ ಕಟ್ ಮಾಡಿ ತೆಗೆಯುತ್ತಾರೆ. ಆದರೆ ಶೂಲದ ಸ್ವಲ್ಪ ಭಾಗ ಮಾಂಡವ್ಯನ ದೇಹದಲ್ಲೇ ಉಳಿಯುತ್ತದೆ. ಈ ಘಟನೆ ಆದ ಬಳಿಕ ಮಾಂಡವ್ಯನನ್ನ ಆಣಿ ಮಾಂಡವ್ಯನೆಂದು ಕರೆಯಲಾಗುತ್ತದೆ.

ಇನ್ನು ಒಂದು ದಿನ ಇದೇ ಆಣಿ ಮಾಂಡವ್ಯ ಧರ್ಮದೇವತೆ ಭೇಟಿ ಮಾಡಿ ನನಗೇಕೆ ಈ ಶಿಕ್ಷೆ ಎಂದುಕೇಳುತ್ತಾನೆ. ಆಗ ಧರ್ಮದೇವತೆ ನೀನು ಬಾಲಕನಾಗಿದ್ದಾಗ ಕೀಟವೊಂದಕ್ಕೆ ಸೂಜಿಯಿಂದ ಚು’ಚ್ಚಿ ಹಿಂ’ಸೆ ಕೊಡುತ್ತಿದ್ದೆ, ಹಾಗಾಗಿ ನಿಂಗೆ ಈ ಶಿಕ್ಷೆ ಲಭಿಸಿದೆ ಎಂದು ಹೇಳುತ್ತಾನೆ. ಇದಕ್ಕೆ ಕೋಪಗೊಂಡ ಮಹಾಮುನಿ ಮಾಂಡವ್ಯ ಹನ್ನೆರಡು ವರ್ಷದ ಒಳಗಿನ ಮಕ್ಕಳಿಗೆ ತಾನೇನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಬುದ್ದಿ ಇರುವುದಿಲ್ಲ. ಏನೂ ತಿಳಿಯದಂತಹ ಆ ವಯಸ್ಸಿನಲ್ಲಿ ಮಾಡಿದ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆಯೇ ಎಂದ ಮಾಂಡವ್ಯ ಭೂಲೋಕದಲ್ಲಿ ನೀನು ದಾಸಿ ಪುತ್ರನಾಗಿ ಜನಿಸಿ ಎಂದು ಶಾಪ ಕೊಡುತ್ತಾನೆ. ಹಾಗಾಗಿಯೇ ಧರ್ಮದೇವತೆಯ ಅಂಶವಾಗಿ ಜನಿಸಿದ್ದ ವಿದುರ ಸತ್ಯವನ್ನ ಎಂದೂ ಬಿಟ್ಟಿರುವುದಿಲ್ಲ.

ಪಾಂಡವರು ಧರ್ಮವಂತರಾಗಿದ್ದ ಕಾರಣ ಅವರನ್ನೇ ಬೆಂಬಲಿಸುತ್ತಿದ್ದ ವಿದುರ. ತನ್ನ ಬುದ್ದಿವಂತಿಕೆಯಿಂದ ಹಲವು ಸಂಕಷ್ಟಗಳಿಂದ ಪಾಂಡವರನ್ನ ಪಾರು ಮಾಡಿದ್ದ . ಇನ್ನು ಭೀಷ್ಮ, ದ್ರೋಣರು ಪಾಂಡವರ ಪರವಾಗಿ ಧ್ವನಿಯೆತ್ತಿದ್ದರು ಯುದ್ಧದಲ್ಲಿ ಕೌರವರಿಗೆ ಬೆಂಬಲ ನೀಡಿದ್ದರು. ಇನ್ನು ಕುರುಕ್ಷೇತ್ರ ಯುದ್ಧ ಆಗುವ ಮುಂಚೆ ಕೌರವರ ಪಾಂಡವರ ನಡುವೆ ಸಂಧಿಗಾಗಿ ಹಸ್ತಿನಾಪುರಕ್ಕೆ ಆಗಮಿಸಿದ್ದ ವಾಸುದೇವ ಕೃಷ್ಣ ಧರ್ಮಾತ್ಮ ವಿದುರನ ಮನೆಯಲ್ಲಿ ಉಳಿದುಕೊಂಡು ಅಲ್ಲೇ ಆತಿಥ್ಯ ಪಡೆಯುತ್ತಾನೆ.

ಇದರಿಂದ ಕೆರಳಿದ ಸುಯೋಧನ ನಾವೆಲ್ಲಾ ಇರುವಾಗ ಕೃಷ್ಣನಿಗೆ ಆತಿಥ್ಯ ನೀಡಲು ನೀನ್ಯಾರು ಎಂದು ಅವಮಾನ ಮಾಡುತ್ತಾನೆ. ಹಾಗೂ ಯಾವಾಗಲು ಕುಂತಿ ಮಾತೆ ಸೇರಿದಂತೆ ನಮ್ಮ ಶತ್ರುಗಳಿಗೆ ಆಶ್ರಯ ನೀಡುತ್ತಿರುವೆ. ದಾಸಿಯ ಮಗನಾಗಿದ್ದರೂ ನಿನಗೆ ಹಸ್ತಿನಾಪುರದ ಮಹಾಮಂತ್ರಿ ಸ್ಥಾನ ಕೊಟ್ಟಿದ್ದರೂ ಈಗ ಕೃಷ್ಣನಿಗೆ ನೀನು ಆಶ್ರಯ ಕೊಟ್ಟಿರುವೆ ಎಂದು ವಿದುರನ ಮೇಲೆ ದುರ್ಯೋಧನ ಕೋಪಗೊಳ್ಳುತ್ತಾನೆ.

ಇದರಿಂದ ಕೋಪಗೊಂಡ ವಿದುರ ದುರ್ಯೋಧನ ಮೇಲೆ ಅಸ್ತ್ರ ಪ್ರಯೋಗಕ್ಕೆ ನಿಲ್ಲುತ್ತಾನೆ. ಇನ್ನು ಇದೆ ಸಮಯವನ್ನ ಬಳಸಿಕೊಂಡ ವಾಸುದೇವ ಕೃಷ್ಣ..ದುರ್ಯೋಧನ ಏಕೆ ಹೀಗೆ ಇಲ್ಲ ಸಲ್ಲದ ಭಾಷೆ ಬಳಸಿ ವಿದುರನನ್ನೇಕೆ ಅವಮಾನ ಮಾಡುತ್ತಿರುವೆ. ಇದರಿಂದ ವಿದುರ ಕೋಪಗೊಂಡು ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಳ್ಳದೇ ಈಗಲೇ ತನ್ನ ಧನಸ್ಸನ್ನ ಮುರಿದುಬಿಟ್ಟರೆ ಹೇಗೆ ಎಂದು ಹೇಳುತ್ತಾನೆ. ಇನ್ನು ಕೋಪದಲ್ಲೇ ಇದ್ದ ದುರ್ಯೋಧನ ಇಂತಹ ನಂಬಿಕೆ ದ್ರೋಹಿಯಾದವನು ಯು’ದ್ಧದಲ್ಲಿ ಪಾಲ್ಗೊಂಡರೆಷ್ಟು, ಬಿಟ್ಟರೆಷ್ಟು ಎಂದು ಹೇಳುತ್ತಾನೆ.

ಇದರಿಂದ ಮತ್ತಷ್ಟು ಕೆರಳಿದ ವಿದುರ ಕೃಷ್ಣನಿಗೆ ಹೇಳುತ್ತಾನೆ..ಭಗವಂತ ಸರಿಯಾದ ಸಮಯಕ್ಕೆ ನನಗೆ ಉತ್ತಮವಾದ ಸೂಚನೆ ಕೊಟ್ಟಿರುವೆ ಎಂದು ತನ್ನ ಗೋವರ್ಧನ ಧನಸ್ಸನ್ನ ಅಲ್ಲೇ ಮುರಿದು ಹಾಕಿ ಸಭೆಯಿಂದ ಹೊರಹೋಗುತ್ತಾನೆ. ಹೀಗೆ ಕೃಷ್ಣ ವಿದುರನು ಯು’ದ್ಧದಲ್ಲಿ ಭಾಗವಹಿಸದಂತೆ ಮಾಡುತ್ತಾನೆ. ಒಂದು ವೇಳೆ ವಿದುರ ಕುರಕ್ಷೇತ್ರ ಯುದ್ಧದಲ್ಲಿ ಕೌರವರ ಪರವಾಗಿ ಪಾಲ್ಗೊಂಡಿದ್ದರೆ ಅರ್ಜುನನ್ನ ತನ್ನ ಗೋವರ್ಧನ ಧನಸ್ಸು ಹಾಗೂ ತನ್ನ ಅಸ್ತ್ರಗಳಿಂದ ಸೋಲಿಸಬಹುದಾಗಿತ್ತು.