Advertisements

ದಪ್ಪಗೆ ಗುಂಡಮ್ಮನಂತಿದ್ದ ಹಾಸ್ಯ ನಟಿ ಕೆಲವೇ ದಿನಗಳಲ್ಲಿ ಬಳಕುವ ಬಳ್ಳಿಯಂತಾಗಿ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದ್ದಾರೆ !

Cinema

ಸ್ಯಾಂಡಲ್ವುಡ್ ನ ರ್ಯಾಂಬೋ 2 ಚಿತ್ರದಲ್ಲಿ ನಟಿಸಿದ್ದ ಹಾಸ್ಯ ನಟಿ, ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋವೊಂದನ್ನ ಹಂಚಿಕೊಂಡಿದ್ದು, ಫೋಟೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಕನ್ನಡ ಸೇರಿದಂತೆ ತೆಲಗು, ತಮಿಳಿನಲ್ಲೂ ಮಿಂಚುತ್ತಿರುವ ಈ ಹಾಸ್ಯ ನಟಿ ವಿದ್ಯುಲ್ಲೇಖಾ ರಮಣ್ ಈಗ ತಮ್ಮ ಫೋಟೋದಿಂದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ ಆಗಿದ್ದಾರೆ.

Advertisements

ಹೌದು, ದಪ್ಪಗೆ, ದುಂಡಗೆ ಗುಂಡಮ್ಮನ ತರ ಇದ್ದ ಈ ನಟಿ ಈಗ ನಂಬಲಾರದ ಮಟ್ಟಿಗೆ ತೆಳ್ಳಾಗಾಗಿದ್ದಾರೆ. ಲಾಕ್ ಡೌನ್ ಸಮಯವನ್ನ ತುಂಬಾ ಚೆನ್ನಾಗಿಯೇ ಉಪಯೋಗಿಸಿಕೊಂಡಿರುವ ನಟಿ ವಿದ್ಯುಲ್ಲೇಖಾ ರಮಣ್ ತುಂಬಾ ತೆಳ್ಳಗೆ ಆಗಿ ಅಭಿಮಾನಿಗಳ ಮುಂದೆ ಬಂದ್ದಿದ್ದು ತಮ್ಮ ಕಣ್ಣುಗಳನ್ನ ತಾವೇ ನಂಬದೆ ಇರುವ ರೀತಿ ಅಚ್ಚರಿ ಮೂಡಿಸಿದ್ದಾರೆ. ಇನ್ನು ತಾವು ಹೀಗೆ ತೆಳ್ಳಗಾಗಿದ್ದು ಹೇಗೆ ಎಂಬುದರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ನಿಜವಾದ ಆತ್ಮವಿಶ್ವಾಸದ ಬಗ್ಗೆ ಬರೆದುಕೊಂಡಿರುವ ವಿದ್ಯುಲ್ಲೇಖಾ ರಮಣ್, ನಾನು ಮೊದಲಿಗೆ ತುಂಬಾ ದಪ್ಪಗೆ ಇದ್ದಾಗ ಅನೇಕರು ನನ್ನನ್ನ ನೀವೆಷ್ಟು ಆತ್ಮವಿಶ್ವಾಸದಿಂದ ಇದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದರು. ಆಗ ನನಗೆ ಇಡೀ ಜೀವನ ಪರ್ಯಂತ ಇಷ್ಟು ದಪ್ಪಗೆ ಇರಬೇಕಾ ಎಂಬ ಪ್ರಶ್ನೆ ಕಾಡುತಿತ್ತು..ಆದರೆ ಈಗ ನನಗೆ ನಿಜವಾದ ಆತ್ಮವಿಶ್ವಾಸ ಬಂದಿದ್ದು, ನನ್ನ ಇಡೀ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಮನಸಿಟ್ಟರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನ ನಾನು ಈಗ ತಿಳಿದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ತಾವು ತೆಳ್ಳಗಾದ ರಹಸ್ಯದ ಬಗ್ಗೆ ಬಹಿರಂಗ ಮಾಡಿರುವ ವಿದ್ಯುಲ್ಲೇಖಾ ರಮಣ್, ಮೊದಲಿಗೆ ಶಿಸ್ತುಬದ್ದವಾಗಿರುವುದನ್ನ ರೂಡಿಸಿಕೊಳ್ಳಬೇಕು. ಸಮತೋಲನವಾದ ಆಹಾರ ಸೇವಿಸಬೇಕು. ವಾರಕ್ಕೆ ಆರು ಬಾರಿಯಾದರೂ ವರ್ಕ್ ಔಟ್ ಮಾಡಬೇಕು. ಸುಲಾಲ್ಬಹವಾಗಿ ಯಾವುದೇ ಸಿಗುವುದಿಲ್ಲ. ಹಾಗೆಂದು ಯಾವುದೇ ಮದ್ದು ಮಾತ್ರೆ ಸೇವಿಸಬಾರದು.ಕೇವಲ ಹಾರ್ಡ್ ವರ್ಕ್ ಮಾಡಿ ಬೆವರು ಸುರಿಸಿದ್ರೆ ಮಾತ್ರ ಫಲಿತಾಂಶ ಸಿಗಲು ಸಾಧ್ಯ ಎಂದು ಅವರು ಬರೆದುಕೊಂಡಿದ್ದಾರೆ. ಇನ್ನು ಕನ್ನಡದ ರ್ಯಾಂಬೋ ೨೧ ಚಿತ್ರದಲ್ಲಿ ನಟಿಸಿದ್ದ ವಿದ್ಯುಲ್ಲೇಖಾ ರಮಣ್ ಡುಮ್ಮಿ ಪಾತ್ರದ್ಲಲಿ ಸಖತ್ ಆಗಿ ಮಿಂಚಿದ್ದರು.