Advertisements

ಸೀಮೆಂಟ್ ಅಂಗಡಿಯಲ್ಲಿ 600 ರೂಪಾಯಿಗೆ ಕೆಲಸ ಮಾಡುತ್ತಿದ್ದ ಈ ಹುಡುಗ ಇಂದು ದೊಡ್ಡ ಸ್ಟಾರ್ ನಟ..

Cinema

ನಮಸ್ತೆ ಸ್ನೇಹಿತರೆ, ಬದುಕಿನಲ್ಲಿ ಏನಾದ್ರೂ ಸಾಧನೆ ಮಾಡಲು ಹೊರಟಾಗ ಎಷ್ಟೋ ಅವಮಾನಗಳು ಅತಾಶೆಗಳು ತಿರಸ್ಕಾರಗಳು ನೋವುಗಳು ಕಷ್ಟಗಳು ಜೀವನದಲ್ಲಿ ಅಂದುಕೊಂಡಿದ್ದನ್ನು ಶತಾಯ, ಗತಾಯವಾಗಿ ಸಾಧಿಸಬೇಕೆಂಬ ಛಲ ಮೂಡಿಸುತ್ತವೆ.. ಕಷ್ಟಗಳಿಗೆ ಕಲ್ಲಾಗಬೇಕು, ಆಗ ಬದುಕು ತುಂಬಾ ಸರಳವಾಗಿ ಹರಳುತ್ತದೆ. ವಿಜಯ್ ಸೇತುಪತಿ.. ಇಂದು ತಮಿಳಿನ ಬಹು ಬೇಡಿಕೆಯ ನಟ, ತಮಿಳು ಚಿತ್ರರಂಗದ ದೊಡ್ಡ ಸೂಪರ್ ಸ್ಟಾರ್.. ನಟ ವಿಜಯ್ ಸೇತುಪತಿ ಅವರಿಗೆ ಈ ಸ್ಟಾರ್ ಗಿರಿ ಎಂಬುದು ಸುಮ್ಮನೆ ದಕ್ಕಿದ್ದಲ್ಲ ಪ್ರತೀ ಸಾಧಕನ ಸಾಧನೆಯ ಹಿಂದೆ ಒಂದು ಕಷ್ಟದ ಕಥೆ ಇರುವಂತೆ ಇವರ ಬದುಕಿನಲ್ಲು ತನ್ನ ಕನಸನ್ನು ನನಸು ಮಾಡಿಕೊಳ್ಳಲು ಹೊರಟಾಗ ಪಟ್ಟ ಕಷ್ಟದ ಕಣ್ಣೀರಿನ ಕಥೆ ಇದೆ.

[widget id=”custom_html-3″]

Advertisements

ಒಮ್ಮೆ ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಬೇಕು ಎಂಬುವ ಆಸೆಯಿಂದ ತಮಿಳು ಸ್ಟಾರ್ ನಟನ ಸಿನಿಮಾ ಒಂದರಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ನಟಿಸಲು ಆಡಿಷನ್ ಗೆ ಹೋಗಿದ್ದರು.. ಆದರೆ ಅವರು ಆ ಆಡಿಷನ್ ನಲ್ಲಿ ಸೆಲೆಕ್ಟ್ ಆಗಲಿಲ್ಲ. ನೋಡೋಕೆ ನೀನೇನು ಅಷ್ಟೊಂದು ಸುಂದರವಾಗಿಲ್ಲ, ಅದರಲ್ಲೂ ತುಂಬಾ ಕುಳ್ಳಗಿದ್ದೀಯಾ.. ಹೋಗು ಸ್ವಾಮಿ ಬೇರೆ ಯಾವುದಾದ್ರೂ ಕೆಲಸ ಇದ್ರೆ ನೋಡ್ಕೋ ಈ ಸಿನಿಮಾ ಗಿನಿಮಾ ಅಂತಾ ಯಾಕೆ ತಲೆ ಕೆಡಿಸ್ಕೋತಿಯಾ ಎಂದು ನಿರ್ದೇಶಕರು ಗದರಿ ವಾಪಸ್ ಕಳುಹಿಸಿದರು. ಆಗಿನ್ನು ವಿಜಯ್ ಸೇತುಪತಿ ಅವರಿಗೆ ಕೇವಲ 16 ವರ್ಷ.. ವಿಜಯ್ ಸೇತುಪತಿ ನಿರ್ದೇಶ‌ಕನ ಮಾತುಗಳಿಂದ ತುಂಬಾ ನೊಂದರು.

[widget id=”custom_html-3″]

ನಂತರ ತಮ್ಮನ್ನು ತಾವೇ ಸಮಾಧಾನ ಮಾಡಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡು.. ಇಲ್ಲ ಇಷ್ಟೆಲ್ಲಾ ಆದ್ಮೇಲೆ ಜೀವನದಲ್ಲಿ ಏನಾದ್ರೂ ಮಾಡ್ಲೇ ಬೇಕು ಎಂದು ನಿರ್ಧಾರ ಮಾಡುತ್ತಾರೆ.. ಆದರೆ ಬದುಕಿನ ಬಂಡಿಯನ್ನು ಸಹ ವಿಜಯ್ ಎಳೆಯಬೇಕಿತ್ತು. ಹೊಟ್ಟೆ ಪಾಡಿಗಾಗಿ ಸೀಮೆಂಟ್ ಅಂಗಡಿ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.. ನಂತರ ಬಟ್ಟೆಯ ಅಂಗಡಿ ಒಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿದರು. ಮತ್ತೆ ಟೆಲಿಫೋನ್ ನೋಡಿಕೊಳ್ಳುವ ಕೆಲಸ.. ಈಗೆ ಸಿಕ್ಕ ಸಿಕ್ಕ ಕೆಲಸ ಮಾಡಿದರು. ಕೊನೆಗೆ 12 ಸಾವಿರ ಸಂಬಳಕ್ಕೆ ದುಬೈನಲ್ಲಿ ಕೆಲಸ ಮಾಡಲು ಹೋದರು.. ವಿಜಯ್ ಎಲ್ಲಿಗೆ ಹೋದರು ಏನೆ ಮಾಡಿದರು ವಿಜಯ್ ಒಳ ಮನಸ್ಸು.. ವಿಜಯ್ ನಿನ್ನೊಳಗೊಬ್ಬ ನಟನಿದ್ದಾನೆ. ಅವನನ್ನು ಹೊರಗೆ ತರಲೇಬೇಕು ಮರೆಯಬೇಡ ಎಂದು ಆಗಾಗ ನೆನಪಿಸುತ್ತಲೇ ಇತ್ತು.

[widget id=”custom_html-3″]

ಮತ್ತೆ ವಿಜಯ್ ದುಬೈನಿಂದ ಭಾರತಕ್ಕೆ ವಾಪಸ್ ಆದರು.. ನಂತರ ಚೆನ್ನೈನ ನಟನಾ ತಂಡವೊಂದರಲ್ಲಿ ಅವಕಾಶಕ್ಕಿಳಿದರು. ಆದರೆ ವಿಜಯ್ ಗೆ ಆ ನಟನಾ ತಂಡದವರು ನಟಿಸಲು ಅವಕಾಶ ಸಧ್ಯಕ್ಕೆ ಇಲ್ಲಾ.. ಬೇಕಾದರೆ ನಮ್ಮಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರು.. ಮುಂದೆ ಯಾವುದಾದರೂ ಸಣ್ಣ ಪಾತ್ರ ಕೊಡುತ್ತೇವೆ ಎಂದರು. ಅವರ ಮಾತಿಗೆ ಒಪ್ಪಿಕೊಂಡ ವಿಜಯ್ ಆ ನಟನಾ ತಂಡದಲ್ಲಿ ಅಕೌಂಟೆಂಟ್ ಕೆಲಸ ಮಾಡಿರು.. ನಂತರ ಆಗೊಮ್ಮೆ ಈಗೊಮ್ಮೆ ಎಂಬಂತೆ ಆ ನಟನಾ ತಂಡದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ನಂತರ ಇಂದಿನ ಸ್ಟಾರ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ನಿರ್ದೇಶಿಸಿದ ಕೆಲವು ಕಿರು ಚಿತ್ರಗಳಲ್ಲಿ ನಟಿಸಿದರು..

ವಿಜಯ್ ಸೇತುಪತಿಯ ನಿಜವಾದ ಟಾಲೆಂಟ್ ಏನು ಎಂದು ತಿಳಿದ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ವಿಜಯ್ ಗೆ ತಮ್ಮ ಚೊಚ್ಚಲ ಸಿನಿಮಾ ಬಿಜಾದಲ್ಲಿ ಮೊದಲಬಾರಿಗೆ ನಾಯಕನಾಗಿ ಅವಕಾಶ ನೀಡಿದರು. ಆ ಸಿನಿಮಾ ಶೂ’ಟಿಂ’ಗ್ ಎಲ್ಲಾ ಮಗಿದು ಎರಡು ವರ್ಷವಾದರು ಥಿಯೇಟರ್ ಗೆ ಬರಲೇ ಇಲ್ಲಾ.. ನಂತರದಲ್ಲಿ ಏಗೋ ರಿಲೀಸ್ ಆಯ್ತು. ಲೇಟ್ ಆದ್ರೂ ಲೇಟೆಸ್ಟ್ ಎನ್ನುವಂತೆ ಬಿಜಾ ಸಿನಿಮಾ ಬರ್ಜರಿ ಯಶಸ್ಸು ಕಂಡಿತು.. ನಟ ವಿಜಯ್ ಸೇತುಪತಿ ಕೂಡ ರಾತ್ರೋರಾತ್ರಿ ದೊಡ್ಡ ಸ್ಟಾರ್ ಆದರು. ಇಲ್ಲಿ ಯಾರನ್ನೂ ಸಹ ಕೀಳಾಗಿ ನೊಡ್ಬಾರ್ದು.. ನಮ್ಮ ಬದುಕಿನಲ್ಲಿ ಪ್ರತಿದಿನ ಅದ್ಬುತಗಳು ಅಚ್ಚರಿಗಳು ನಡೆಯುತ್ತಲೇ ಇರುತ್ತವೆ..