Advertisements

ಕಷ್ಟದಲ್ಲಿ ಆಶ್ರಯ ಕೊಟ್ಟ ವ್ಯಕ್ತಿಯ ಜೊತೆ ವಿಜಯಲಕ್ಷ್ಮೀ ಯಾವ ರೀತಿ ನಡೆದುಕೊಂಡ್ರು ಗೊತ್ತಾ? ಈ ರೀತಿ ಮಾಡಿದ್ರೆ ಯಾರು ಸಹಾಯ ಮಾಡಲ್ಲ..

Cinema

ವಿಜಯಲಕ್ಷ್ಮೀ ಒಂದು ಕಾಲದ ಬಹು ಬೇಡಿಕೆಯ ಟಾಪ್ ನಟಿ.. ದೊಡ್ಡ ದೊಡ್ಡಹರೋಗಳ ಜೊತೆ ಅಭಿನಯಿಸಿ ಸೈ ಎನಿಸಿಕೊಂಡು ನಟನಾ ಕೌಶಲ್ಯದಿಂದಲೇ ಎಲ್ಲರ ಮನಗೆದ್ದ ಅದ್ಭುತ ನಟಿ ವಿಜಯಲಕ್ಷ್ಮೀ. ಆಕೆಯ ಮುಖದಲ್ಲಿರುವ ಲಕ್ಷಣ, ಅಂದ ಚಂದಕ್ಕೆ ಮರುಳಾಗದವರಿಲ್ಲ. ಆದ್ರೆ ಇತ್ತೀಚಿಗೆ ಯಾಕೋ ಬರೇ ಗಾ’ಸಿ’ಪ್​ಗಳಿಂದಲೇ ಆಕೆ ಸು’ದ್ದಿ’ಯಾಗ್ತಾಯಿರೋದು ಆಕೆಯ ಅಭಿಮಾನಿಗಳಿಗೆ ಬೇಸರ ತಂದುಕೊಟ್ಟಿದೆ. ಸಹಾಯದ ನಿರೀಕ್ಷೆಯಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಅಳಲು ತೋಡಿಕೊಳ್ಳುವ ವಿಜಯಲಕ್ಷ್ಮೀ. ನೋವನ್ನು ಹಂಚಿಕೊಳ್ಳುತ್ತಿರುವ ರೀತಿಯೇ ಕಿ’ರಿ’ಕಿರಿಯಾಗತ್ತೆ, ಆದ್ರೆ ಒಂದು ಕಾಲದ ಟಾಪ್ ಮೋಸ್ಟ್ ನಟಿ, ಸಖತ್ ಬೇಡಿಕೆಯಿದ್ದ ನಟಿ, ಸ್ಯಾಂಡಲ್​ವುಡ್​ನ್ನು ಆಳಿದ ಹಿರಿಯ ಕಲಾವಿದೆಗೆ ಇಂತಹ ಪರಿಸ್ಥಿತಿ ಬಂತಲ್ಲ ಅಂತ ಅನೇಕರು ಮ’ರು’ಗಿದ್ದಾರೆ, ಆದ್ರೆ ಅದ್ಯಾಕೆ ಹೀಗಾಯ್ತೋ ಗೊತ್ತಿಲ್ಲ.

Advertisements

ಮೊದಲ ಸಲ ವಿಜಯಲಕ್ಷ್ಮೀ ಸಹಾಯ ಕೋರಿದ ಕಿ’ಚ್ಚ ಸು’ದೀ’ಪ್ ಸಹ ಆಸ್ಪತ್ರೆ ಬಿ’ಲ್ ಕಟ್ಟಿ ಸಹಾಯ ಮಾಡಿದ್ರು, ಹೀಗೆ ಸಾಕಷ್ಟು ಜನ ಸಹಾಯ ಮಾಡಿದ್ದಾರೆ. ಇತ್ತೀಚಿಗೆ ದೀಪಾ ತುಕಾರಾಮ್ ಎನ್ನುವವರು ಸಹ ಸಹಾಯದ ಹಸ್ತ ಚಾಚಿದ್ದು , ಆದ್ರೆ ಆ ಸಹಾಯದ ಅಗತ್ಯವಿಲ್ಲ ಅಂತ ವಿಜಯಲಕ್ಷ್ಮೀ ಅವರೇ ಅವರ ಮನೆಯಿಂದ ಆಚೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ. ವಿಜಯಲಕ್ಷ್ಮೀ ಇರಲು ಮನೆಯಿಲ್ಲ, ಸಹಾಯ ಮಾಡಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಕೇಳಿಕೊಂಡಾಗ ದೀಪ ಅವರು ಸ್ಪಂಧಿಸಿದ್ರು. ಹೊನ್ನಾವರದ ಕರ್ಕಿಯಲ್ಲಿ ಇರುವ ತಮ್ಮ ತಂದೆಗೆ ಫೋನ್ ಮಾಡಿ ಒಂದು ಬಾಡಿಗೆ ಮನೆ ಮಾಡುವಂತೆ ತಿಳಿಸಿದ್ದರು.. ಆಗ ತುಕಾರಾಮ್ ಅವರು ನಾಲ್ಕು ಸಾವಿರ ರೂಪಾಯಿಯ ಬಾಡಿಗೆ ಮನೆಯೊಂದನ್ನು ಮಾಡಿದ್ದು ವಿಜಯಲಕ್ಷ್ಮಿ ಅವರು ತಮ್ಮ ಅಕ್ಕ ಹಾಗೂ ತಾಯಿಯ ಜೊತೆಗೆ ಕ’ರ್ಕಿ’ಗೆ ತೆರಳಿದರು.

ಆಶ್ರಯ ನೀಡಿದ ತುಕಾರಾಮ್ ಅವರಿಗೆ ಈ ಮನೆ ಚೆನ್ನಾಗಿಲ್ಲ.. ನನಗೆ ಮಲಗಲು ಮಂಚ ಬೇಕು.. ಈ ಮನೆಯಲ್ಲಿ ಹಲ್ಲಿಗಳು ಇವೆ.. ನನಗೆ ಕೆಲಸದವರನ್ನು ನೇಮಿಸಿ ಎಂದೆಲ್ಲಾ ಬೇಡಿಕೆ ಇಟ್ಟರು.. ಅಷ್ಟೇ ಅಲ್ಲದೇ ದಿನಗಳಿಂದ ವಿಜಯಲಕ್ಷ್ಮಿ ಅವರು ತಮ್ಮ ತಾಯಿ ಹಾಗೂ ಅಕ್ಕನನ್ನು ಸಹ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ.. ತಾಯಿಯ ಶೌಚ ಸ್ವ’ಚ್ಛ ಮಾಡುವುದು ಹಾಗೂ ಅವರಿಗೆ ಊಟ ಮಾಡಿಸುವುದು ಹೀಗೆ ಯಾವುದೇ ಕೆಲಸವನ್ನು ವಿಜಯಲಕ್ಷ್ಮಿ ಮಾಡುತ್ತಿರಲಿಲ್ಲ..

ಬದಲಾಗಿ ತುಕಾರಾಮ್ ಅವರು ಹಾಗೂ ಅವರ ಕುಟುಂಬ ಮತ್ತು ಅವರ ಮನೆ ಕೆಲಸದವರೇ ಮಾಡುತ್ತಿದ್ದರು. ಇಷ್ಟಾದರೂ ಸಹ ವಿಜಯಲಕ್ಷ್ಮೀ ನಾನು ಈ ಮನೆಯಲ್ಲಿರಲ್ಲ, ನಾನು ಬೆಂಗಳೂರಿಗೆ ಹೋಗಬೇಕು ಅಂತ ಹಠ ಹಿಡಿದು ಕುಳಿತಿದ್ರಂತೆ, ಪರಿಣಾಮ ತುಕಾರಾಂ ಅವರೇ ಕಾರು ಮಾಡಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಸಹಾಯ ಮಾಡಲು ಬಂದವರಿಗೂ ಈ ರೀತಿ ಮಾಡಿದ್ರೆ ಯಾರು ಸಹಾಯ ಮಾಡಲು ಮುಂದಾಗ್ತಾರೆ, ವಿಜಯಲಕ್ಷ್ಮೀ ಅವರಿಗೆ ಅದ್ಯಾವ ಸ’ಮ’ಸ್ಯೆಯಿದೆ? ಅದ್ಯಾಕೆ ಅವರು ಹೀಗೆ ಮಾಡ್ತಾಯಿದ್ದಾರೆ? ಮತ್ತೆ ನಟನೆಗೆ ಹಿಂತಿರುಗುತ್ತಾರಾ? ಎಲ್ಲವೂ ಅ’ಸ್ಪ’ಷ್ಟವಾಗಿದೆ..