Advertisements

ದುಡಿಕಿ ನಿರ್ಧಾರ ತೆಗೆದುಕೊಂಡ ವಿಜಯಲಕ್ಷ್ಮಿ.. ಇನ್ಮುಂದೆ ನಿಮ್ಮ ಕಣ್ಣಿಗೆ ಕಾಣಿಸಲ್ಲ ಅಂಥ ವಿಜಯಲಕ್ಷ್ಮಿ ಏನು ಮಾಡಿದ್ದಾರೆ ಗೊತ್ತಾ?

Kannada Mahiti

ನಟಿ ವಿಜಯಲಕ್ಷ್ಮೀ .. ಒಂದು ಕಾಲದ ಅಂದದ ಚಂದದ ಗೊಂಬೆ.. ಪಡ್ಡೆ ಹುಡುಗರ ಕನಸಿನ ರಾಣಿಯೂ ಹೌದು.. ಎಷ್ಟು ಚೆಂದ.. ಆ ಮುಖದ ಕಾಂತಿಗೆ, ಬಳುಕುವ ನಡೆಗೆ ಆಕೆಯ ನಟನೆಗೆ ಸೋಲದವರುಂಟೆ, ಖಂಡಿತ ಇಲ್ಲ.. ಆ ಕಾಲದಲ್ಲಿ ಡಿಮ್ಯಾಂಡ್ ಇದ್ದಂತಹ ನಟಿಯವರು.. ದೊಡ್ಡ ದೊಡ್ಡ ದಿಗ್ಗಜರ ಜೊತೆ ತೆರೆ ಹಂಚಿಕೊಂಡ ಕಲಾವಿದೆ. ಸಾಹಸಸಿಂಹನ ಜೊತೆ ಹಬ್ಬದಲ್ಲಿ ಜೊತೆಯಾಗಿದ್ದ ವಿಜಯಲಕ್ಷ್ಮೀ ಇಂದು ಸಖತ್ ಟ್ರೋಲಿಗೆ ಗುರಿಯಾಗ್ತಿರುವ ನಟಿ. .. ಟ್ರೋಲಿಗರ ಬಾಯಿಗೆ ಆಹಾರವಾದ್ರೂ ಈಗಲೂ ಅವರ ವರ್ಚಸ್ಸು, ತೇಜಸ್ಸು ಕೊಂಚವೂ ಕಡಿಮೆಯಾಗಿಲ್ಲ, ಈಗಲೂ ಫಿಟ್​​ನೆಸ್ ಕಡೆ ಗಮನ ಕೊಟ್ರೆ, ಹಿರೋಯಿನ್ ಸಹ ಆಗ್ಬಹುದು.. ಇತ್ತೀಚಿಗೆ ಅವರತಾಯಿ ತಿರಿ ಹೋಗಿ ಒಂದಷ್ಟು ಹೈಡ್ರಾಮ ಸೃಷ್ಟಿಯು ಆಗಿದ್ದು ನಿಮಗೆಲ್ಲ ಗೊತ್ತಿರೋ ವಿಚಾರ.. ಯಾವಾಗ್ಲೂ ವಿಡಿಯೋ ಮಾಡಿ ತನ್ನ ನೋವು ಹೇಳಿಕೊಳ್ತಿದ್ದ ವಿಜಯಲಕ್ಷ್ಮೀ ಈ ಭಾರೀ ಒಂದು ಕಠಿಣ ನಿರ್ಧಾರ ಮಾಡಿದ್ದಾರೆ.

Advertisements


ಹೌದು ತಾಯಿ ಸ’,ತ್ತು ಹೋದ ಸಂದರ್ಭದಲ್ಲಿ ಸಹಾಯಕ್ಕೆ ಬರ್ತೀನಿ ಅಂತ ಹೇಳಿದ್ದ ಯೋಗೀಶ್ ಸಹಾಯದ ನೆಪದಲ್ಲಿ ಜನರು ನನಗೆ ಕೊಟ್ಟ ಎಲ್ಲ ದುಡ್ಡನ್ನು ಹೊಡೆದಿದ್ದಾನೆ ಅಂತ ಆರೋಪಿಸಿದ್ರು. ಈ ಮಧ್ಯೆ ಒಂದಷ್ಟು ಜನ ವಿಜಯಲಕ್ಷ್ಮೀ ವಿರುದ್ಧವೇ ಮಾತಾಡಿದ್ರು. ಆಕೆಗೆ ಧನ್ಯವಾದ ಹೇಳುವ ಮನಸ್ಸಿಲ್ಲ.. ಸಹಾಯ ಮಾಡಿದವನಿಗೆ ಉಲ್ಟಾ ಹೊಡೆದಿದ್ದಾಳೆ ಅಂತೆಲ್ಲ ಮಾತಾಡಿದ್ರು. ಇದರಿಂಧ ರೊಚ್ಚಿಗೆದ್ದು. ವಿಜಯಲಕ್ಷ್ಮೀ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಹೌದು, ಈ ಬಗ್ಗೆ ವಿಡಿಯೋ ಮಾಡಿ ವಿಜಯಲಕ್ಷ್ಮೀ ಮಾಹಿತಿ ನೀಡಿದ್ದಾರೆ. ಕೆಲವರು ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದಾರೆ, ಅವರಿಗೆ ಮನಸ್ಸಿಗೆ ಬಂದಂತೆ ತೇಜೋವಧೆ ಮಾಡಿದ್ದಾರೆ. ಇರಲಿ ತೊಂದರೆಯಿಲ್ಲ, ಮನಸ್ಸಿಗೆ ಬಂದಂತೆ ಹೇಳಲಿ, ಆದ್ರೆ ನಾನು ಇನ್ಮುಂದೆ ನಿಮ್ಮ ಕಣ್ಣಿಗೆ ಕಾಣಿಸಿಕೊಳ್ಳಲ್ಲ.

ನನ್ನನ್ನು ಕೆ’ಟ್ಟ’ವಳಂತೆ ಬಿಂಬಿಸುವ ಸಂಚು ನಡೆದಿದೆ.ಈ ವಿಡಿಯೋ ಮೂಲಕ ನಾನು ಆಣೆ ಮಾಡಿ ಹೇಳುತ್ತೇನೆ. ಯೋಗೇಶ್​ ಖಾತೆಯಲ್ಲಿನ ಹಣ ನನ್ನ ಕೈಸೇರಿಲ್ಲ. ಅದನ್ನು ನಾನು ತೆಗೆದುಕೊಳ್ಳುವುದೂ ಇಲ್ಲ. ದುಡ್ಡಿಗಾಗಿಯೇ ಯೋಗೇಶ್​ ನನಗೆ ಕಿ’ರು’ಕು’ಳು ನೀಡುತ್ತಿದ್ದಾನೆ ಎಂಬುದು ನಿಮಗೆ ಗೊತ್ತಾಗುತ್ತಿದೆ. ನ್ನ ಹೆಸರು ಹೇಳಿಕೊಂಡು ಜನರಿಂದ ಅವರು ಸಂಗ್ರಹಿಸಿದ ಹಣ ನನಗೆ ಬೇಕಿಲ್ಲ. ನನ್ನ ಖಾತೆಗೆ ಎಷ್ಟೋ ದುಡ್ಡು ಬಂದಿದೆ. ಅದು ಸಾಕು. ನನಗೆ ನೆಮ್ಮದಿ ಬೇಕು. ಅಕ್ಕನನ್ನು ಕರೆದುಕೊಂಡು ನಾನು ಎಲ್ಲಾದರೂ ಹೊರಟು ಹೋಗುತ್ತೇನೆ’ ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ಇನ್ಮುಂದೆ ನಾನು ಜನರ ಕಣ್ಣಿಗೆ ಕಾಣಿಸಿಕೊಳ್ಳಲ್ಲ.. ನನ್ನಕ್ಕನ ಕರೆದುಕೊಂಡು ಕರ್ನಾಟಕ ಬಿಟ್ಟು ಹೋಗ್ತೇನೆ ಅಂತ ಹೇಳಿದ್ದಾರೆ..