ವಿಜಯಪುರದ ವಿದ್ಯಾರ್ಥಿನಿ ರಕ್ಷಿತಾ ಕೆಲವು ದಿನಗಳ ಹಿಂದೆ ನಡೆದ SSLC ಪೂರ್ವ ಸಿದ್ದತಾ ಪರೀಕ್ಷೆಯ ಆನ್ಸರ್ ಪೇಪರ್ ಎಲ್ಲೆಡೆ ವೈರಲ್ ಆಗಿದೆ. ಈ ವಿದ್ಯಾರ್ಥಿನಿ ಕನ್ನಡ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕವನ್ನು ಪಡೆದೆದಿದ್ದಾಳೆ. ಅಷ್ಟೇ ಅಲ್ಲದೆ ಬರವಣಿಗೆಯಲ್ಲೂ ಸಹ ಬೇಷ್ ಅನಿಸಿಕೊಂಡಿದ್ದಾಳೆ. ಉತ್ತರ ಪತ್ರಿಕೆಯಲ್ಲಿ ಪದಗಳನ್ನು ಮುತ್ತಿನಂತೆ ಪೋಣಿಸಿದ್ದಾಳೆ ಈ ಸುಂದರ ಬರವಣಿಗೆಯ ಮುಖಾಂತರ ಇಡೀ ರಾಜ್ಯದ ಗಮನವನ್ನು ಸೆಳೆದಿದ್ದಾಳೆ.

ಈ ವಿದ್ಯಾರ್ಥಿನಿಯ ಇಂದಿರುವ ಶ್ರಮದ ಬಗ್ಗೆ ಸಾಧನೆ ಬಗ್ಗೆ ಇಲ್ಲಿದೆ ವಿವರ. ರಕ್ಷಿತಾ ಹೇಳುವಂತೆ ಇದಕ್ಕೂ ಮೊದಲು ನನಗೆ ಅಕ್ಷರಗಳು ಹೇಳಿಕೊಳ್ಳುವಷ್ಟು ಚನ್ನಾಗಿ ಇರಲಿಲ್ಲ. ಗುರುಗಳು ಹೇಳಿದ ಹಾಗೆ ಪ್ರ್ಯಾಕ್ಟೀಸ್ ಮಾಡಿ ತನ್ನ ಬರವಣಿಗೆಯಲ್ಲಿ ಸುಧಾರಿಸಿಕೊಂಡಿದ್ದಾಳೆ. ರಕ್ಷಿತಾ ಓದಿನಲ್ಲೂ ಸಹ ಒಂದು ಹೆಜ್ಜೆ ಮುಂದಿರುವ ಈ ವಿದ್ಯಾರ್ಥಿನಿಯ ಅಚ್ಚುಕಟ್ಟಾದ ಬರವಣಿಗೆಯೂ ಸಹ ಅತ್ಯುತ್ತಮ ಅಂಕಗಳನ್ನು ಪಡೆಯಲು ಸಹಾಯ ಮಾಡಿದೆ. ಆಗೆ ಈಕೆ ತನ್ನ ಆಸೆಯನ್ನು ತಿಳಿಸಿದ್ದಾಳೆ.

ತಾನು ಮುಂದೆ ಚೆನ್ನಾಗಿ ಓದಿ ಜಿಲ್ಲಾದಿಕಾರಿಯಾಗಿ ಸಮಾಜ ಸೇವೆ ಮಾಡಬೇಕೆಂಬುದು ನನ್ನ ಮಹಾದಾಸೆ ಎಂದು ತಿಳಿಸಿದ್ದಾಳೆ. ಈ ವಿದ್ಯಾರ್ಥಿನಿಯ ಆನ್ಸರ್ ಪೇಪರ್ ಬಹಳ ವೈರಲ್ ಆಗುತ್ತಿದೆ, ಈಕೆಯ ಮುತ್ತಿನಂತಿರುವ ಅಕ್ಷರಗಳ ಬರವಣಿಗೆಯನ್ನು ಆನ್ಸರ್ ಶೀಟ್ನ್ನ ಒಂದು ಸಲ ನೋಡಿ ಕಣ್ತುಂಬಿಕೊಳ್ಳಿ.

ರಕ್ಷಿತ ಕನ್ನಡದಲ್ಲಿ 100 ಕ್ಕೆ ನೂರು ಅಂಕಗಳಿಸಿ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆನ್ಸರ್ ಶೀಟ್.

ಸಾಮಾನ್ಯವಾಗಿ ವಿದ್ಯಾರ್ಥಿಗಳು ವಿಜ್ನಾನ ಹಾಗೂ ಗಣಿತದಲ್ಲಿ 100 ಕ್ಕೆ 100 ಅಂಕ ಗಳಿಸುತ್ತಾರೆ ಆದರೆ ಈ ಹುಡುಗಿ ಕನ್ನಡದಲ್ಲಿ ತೆಗೆದಿರುವುದು ಹೆಮ್ಮೆಯ ವಿಷಯ.

ವಿಜಯಪುರದ ವಿಕಾಸ ಬಾಲಕ ಹಾಗೂ ಇಂದಿರಾ ಬಾಲಕೀಯರ ಪ್ರೌಡ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ವಿದ್ಯಾರ್ಥಿನಿ.

ಮೊಗ್ಗಿನಂತೆ ಪೋಣಿಸಿರುವ ಅಕ್ಷರಗಳ ಉತ್ತರ ಪತ್ರಿಕೆ ಬಹಳ ವೈರಲ್ ಹಾಗಿದ್ದು. ಎಲ್ಲರ ಗಮನವನ್ನ ಸೆಳೆದಿದೆ.

ಈ ವಿದ್ಯಾರ್ಥಿನಿ ಬರೆದಿರುವ ಉತ್ತರ ಪತ್ರಿಕೆ SSLC ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು. ತಾವು ಹೇಗೆ ಪರೀಕ್ಷೆಗೆ ತಯಾರಿಕೆ ಮಾಡಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದೆ.

ಒಂದು ಚೂರು ಚಿತ್ತಿಲ್ಲದೆ ಬರೆದಿರುವ ಈ ಅಕ್ಷರಗಳ ಉತ್ತರ ಪತ್ರಿಕೆಯನ್ನು ನೋಡಲು ಎರಡು ಕಣ್ಣು ಸಾಲದು.

ಕೆಲವೊಂದು ತಪ್ಪಿದ್ದರೂ. ಮತ್ತಿನಂತೆ ಪೋಣಿಸುರುವ ಅಕ್ಷರಗಳು ಹಾಗೂ ಈ ನೀಟ್ ನೆಸ್ ಗೆ ಬೇಷ್ ಅನ್ನಲೇ ಬೇಕು.

ಅಕ್ಷರಗಳು ಈ ರೀತಿಯಲ್ಲಿದೆ ಇದ್ದರೆ ಮೌಲ್ಯ ಮಾಪಕರನ್ನು ತುಂಬಾ ಇಂಪ್ರೆಸ್ ಮಾಡುತ್ತದೆ.

ಈ ಅಚ್ಚಕಟ್ಟಾಗಿ, ಮುದ್ದಾಗಿರುವ ಅಕ್ಷರಗಳು ಬಾಲಕೀಯ ವಿಶ್ವಾಸವನ್ನು ತೋರಿಸುತ್ತದೆ.
