Advertisements

ಇವರೆಲ್ಲಾ ಖ್ಯಾತ ವಿಲನ್ ಗಳಾದ್ರೆ ಇವರ ಪತ್ನಿಯರು ಎಷ್ಟು ದೊಡ್ಡ ನಟಿಯರು ಗೊತ್ತಾ.?

Cinema

ನಮಸ್ಕಾರ ಸ್ನೇಹಿತರೇ, ನಾಯಕ ನಟರಂತೆ ವಿಲನ್ ಪಾತ್ರಗಳಲ್ಲಿ ಮಿಂಚಿರುವ ಹಲವಾರು ನಟರಿದ್ದಾರೆ. ಇನ್ನೂ ತಮ್ಮ ನೆಚ್ಚಿನ ನಟರ ವೈಯುಕ್ತಿಕ ಜೀವನದ ಬಗ್ಗೆ ತಿಳಿಯುವ ಕುತೂಹಲ ಹೇಗೆ ಅಭಿಮಾನಿಗಳಲ್ಲಿ ಇರುತ್ತದೆಯೋ ಹಾಗೆಯೆ ಖಳ ನಟರ ಜೀವನದ ಬಗ್ಗೆಯೂ ತಿಳಿಯುವ ಕುತೂಹಲ ಇದ್ದೆ ಇರುತ್ತದೆ. ಇನ್ನು ನೀವು ನಂಬಲೇಬೇಕಾದ ಅಚ್ಚರಿಯ ವಿಷಯ ಏನೆಂದರೆ ಇವರ ಪತ್ನಿಯರೂ ಕೂಡ ಪ್ರಸಿದ್ಧ ನಟಿಯರಾಗಿದ್ದಾರೆ. ಹಾಗಾದ್ರೆ ಅವರು ಯಾರೆಂಬುದನ್ನ ನೋಡೋಣ ಬನ್ನಿ..

ರಘುವರನ್ ಒಂದು ಕಾಲದ ಖ್ಯಾತ ಖಳನಟ. ಪ್ರೇಕ್ಷಕರಲ್ಲಿ ಭಯ ಹುಟ್ಟುಹಾಕುತ್ತಿದ್ದ ಖಡಕ್ ವಿಲನ್ ಆಗಿದ್ದ ನಟ. ಇನ್ನು ಇವರ ಪತ್ನಿಯಾದ ಮೋಹಿನಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ೯೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಫೇಮಸ್ ನಟಿಯಾಗಿದ್ದಾರೆ. ಇನ್ನು ಕನ್ನಡದ ಖ್ಯಾತ ಖಳನಟರಲ್ಲಿ ಅವಿನಾಶ್ ಕೂಡ ಒಬ್ಬರು. ಇನ್ನು ಇವರ ಪತ್ನಿ ಮಾಳವಿಕಾ ಕೂಡ ಖ್ಯಾತ ನಟಿ ಈಗ ರಾಜಕಾರಣಿಯೂ ಹೌದು. ತನ್ನ ನೈಜ ನಟನೆಯ ಮೂಲಕ ಪ್ರೇಕ್ಷಕರನ್ನ ಆಕರ್ಷಿಸಿದ ವಿಲನ್ ಎಂದರೆ ಅತುಲ್ ಕುಲಕರ್ಣಿ. ಇವರ ಪತ್ನಿಯ ಹೆಸರು ಗೀತಾಂಜಲಿ ಕೂಡ ಒಂದು ಕಾಲದ ಖ್ಯಾತ ನಟಿಯಾಗಿದ್ದು ನಾಲ್ಕು ಭಾಷೆಗಳಲ್ಲಿ ಮಿಂಚಿದ ನಟಿಯಾಗಿದ್ದಾರೆ.

Advertisements

ದಕ್ಷಿಣ ಭಾರತ ಸಿನಿಮಾ ರಂಗ ಕಂಡ ಖ್ಯಾತ ಖಳನಟರಲ್ಲಿ ಆಶಿಶ್ ವಿದ್ಯಾರ್ಥಿ ಕೂಡ ಪ್ರಮುಖರಾಗಿದ್ದಾರೆ. ಇವರ ಪತ್ನಿಯ ಹೆಸರು ರಜೋಷಿ ವಿದ್ಯಾರ್ಥಿ ಎಂದು . ಇವರು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದು ಖ್ಯಾತನಾಮರಲ್ಲಿ ಇವರು ಒಬ್ಬರಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನೆಗಟೀವ್ ರೋಲ್ ನಲ್ಲಿ ಮಿಂಚಿದ ನಟ ಬೆಂಜು ಮೆನನ್ . ಇನ್ನು ಇವರ ಪತ್ನಿಯ ಹೆಸರು ಸಂಯುಕ್ತ ವರ್ಮಾ ಕೂಡ ಖ್ಯಾತ ಮಲಯಾಳಂ ನಟಿಯಾಗಿದ್ದು ಎರಡು ರಾಜ್ಯ ಪ್ರಶಸ್ತಿ ಪಡೆದ ಪ್ರಸಿದ್ಧ ನಟಿಯಾಗಿದ್ದಾರೆ.

ತಮ್ಮ ವಿಭಿನ್ನ ಮಾತಿನ ಮೂಲಕ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟನಾಗಿರುವ ಮುರಳಿ ಶರ್ಮಾ ಅವರ ಮಡದಿಯ ಹೆಸರು ಅಶ್ವಿನಿ. ಬಾಲಿವುಡ್ ಚಿತ್ರರಂಗದಲ್ಲಿ ಪ್ರಸಿದ್ಧ ನಟಿಯಾಗಿದ್ದಾರೆ. ತೆಲುಗು, ತಮಿಳು ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ವಿಲನ್ ರೋಲ್ ನಲ್ಲಿ ಮಿಂಚುತ್ತಿರುವ ಖಳನಟ ಅಜಯ್ ಈಗಲೂ ಬಹು ಬೇಡಿಕೆಯ ನಟನಾಗಿದ್ದಾನೆ. ಇನ್ನು ಇವರ ಪತ್ನಿ ಶ್ವೇತಾ ಕೂಡ ಪ್ರಸಿದ್ಧ ನಟಿಯಾಗಿದ್ದು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲಿ ವಿಲನ್ ಆಗಿ ಅಬ್ಬರಿಸಿರುವ ನಟ ಆಶುತೋಷ್ ರಾಣಾ ಅವರ ಪತ್ನಿ ರೇಣುಕಾ ಅವರು ಕೂಡ ಒಂದು ಕಾಲದಲ್ಲಿ ಮಿಂಚಿದ ಪ್ರಸಿದ್ಧ ನಟಿಯಾಗಿದ್ದಾರೆ. ಇನ್ನು ನಿಮ್ಮ ಮನಸ್ಸು ಗೆದ್ದ ಜೋಡಿ ಹಾಗೂ ನೆಚ್ಚಿನ ವಿಲನ್ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ..