ಮಗಳು ಕೊಟ್ಟು ಮದುವೆ ಮಾಡಿದ ಅತ್ತೆಗೆ ಈ ಅಳಿಯ ಮಾಡಿದ್ದು ಎಂತಹ ಕೆಲಸ ಗೊತ್ತಾ.. ಈಗಿನ ಕಾಲದಲ್ಲಿ ಯಾರನ್ನು ನಂಬಬೇಕೋ ಯಾರನ್ನು ನಂಬಬಾರದು ಆ ದೇವರೇ ಬಲ್ಲ, ನಂಬಿದವರೇ ಮೋಸ ಮಾಡುವಂತಹ ಕಾಲವಿದು. ಅಂದಹಾಗೇ ಅಳಿಯನ ಹೆಸರು ವಿನಯ್ ಕುಮಾರ್.. ಅತ್ತೆ ಸುಮತಿ ಆಚಾರ್ಯ ಸೂರತ್ಕಲ್ ನ ಹೊಸಬೆಟ್ಟು ಗ್ರಾಮದ ಮಿತೊಟ್ಟು ಪ್ರದೇಶದಲ್ಲಿ ವಾಸವಾಗಿದ್ದರು. ಇತ್ತ ಅಳಿಯನೂ ಸೂರತ್ಕಲ್ ನ ಕೃಷ್ಣಾಪುರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಈತ ಅತ್ತೆ ಸುಮತಿ ಆಚಾರ್ಯ ಅವರ ಮನೆಗೆ ಬಂದಾಗ ಬಹಳ ಒಳ್ಳೆಯವನಂತೆ ನಡೆದುಕೊಳ್ಳುತ್ತಿದ್ದು ಈತನಿಗಿಂತ ಒಳ್ಳೆ ಅಳಿಯ ಮತ್ತೊಬ್ಬನಿಲ್ಲ ಎನ್ನುವಂತಿತ್ತು ಇವನ ನಡವಳಿಕೆ.

ಅಳಿಯನ ನಡವಳಿಕೆ ಕಂಡು ಅತ್ತೆಯೂ ಬಹಳ ಸಂತೋಷವಾಗಿದ್ದರು. ಮಗಳನ್ನು ಒಳ್ಳೆಯ ಹುಡಗನಿಗೆ ಕೊಟ್ಟು ಮದುವೆ ಮಾಡಿದೆ ಎಂಬ ಸಮಾಧಾನದಲ್ಲಿದ್ದರು. ಆದರೆ ಯಾರು ಊಹಿಸಿಕೊಳ್ಳಲಾಗದ ಕೆಲಸವನ್ನು ಸುಮತಿ ಆಚಾರ್ಯ ಹಾಗೂ ಸಂಬಂಧಿಕರು ಕನಸಿನಲ್ಲಿಯೂ ನೆನೆಸದ ಕೆಲಸವನ್ನು ವಿನಯ್ ಕುಮಾರ್ ಮಾಡಿದ್ದಾನೆ. ಅತ್ತೆ ಸುಮತಿ ಮನೆಯಲ್ಲಿದ್ದ ಸಮಯ ನೋಡಿಕೊಂಡು ವಿನಯ್ ಕುಮಾರ್ ತನ್ನ ಸ್ನೇಹಿತನ ಮನೆಗೆ ಬಂದು ಮಾಡಿರುವ ಕೆಲಸ ಇದೀಗ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.. ಅಷ್ಟಕ್ಕೂ ಆ ವಿಚಾರ ಏನು ಗೊತ್ತಾ.. ಕಳೆದ ತಿಂಗಳ ಹಿಂದ ಸೂರತ್ಕಲ್ ನ ಮೀತೊಟ್ಟು ಪ್ರದೇಶದಲ್ಲಿ ಈ ಘ’ಟ’ನೆ ನಡದಿದೆ..

ಮಹಿಳೆ ಮನೆಯಲ್ಲಿದ್ದ ಸಮಯದಲ್ಲಿ ಇಬ್ಬರು ಮನೆಗೆ ಬಂದು ಆಕೆಗೆ ಕೈ’ಮಾ’ಡಿ ಆಕೆಯ ಸರವನ್ನು ತೆಗೆದುಕೊಂಡು ಹೊರಟು ಹೋಗಿದ್ದರು. ಆ ಮಹಿಳೆಯೇ ಈ ಸುಮತಿ ಆಚಾರ್ಯ. ತಕ್ಷಣ ಸುಮತಿ ಆಚಾರ್ಯ ಸೂರತ್ಕಲ್ ನ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. ಅದೃಷ್ಟವಶಾತ್ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಘ’ಟ’ನೆ ರೆ’ಕಾ’ರ್ಡ್ ಆಗಿದೆ. ನಂತರ ಯಾರೀತರು ಅಂತ ಕೂಲಕಂಷವಾಗಿ ತ’ನಿ’ಖೆ ನಡೆಸಿದಾಗ ವಿಚಾರ ಗೊತ್ತಾಗುತ್ತೆ, ಅದು ಸುಮತಿಯ ಸ್ವಂತ ಅಳಿಯ ಅಂತ.. ಎಲ್ಲ ಚೆನ್ನಾಗಿರುವಾಗ ಯಾಕಪ್ಪ ಹೀಗೆ ಮಾಡಿದೆ ಅಂತ ಕೇಳಿದ್ರೆ ಈ ಹಿಂದೆ ಇದ್ದ ಮನಸ್ಥಾಪದಿಂದ ಹೀಗೆ ಮಾಡಿದೆ ಅಂತ ಅಳಿಯ ಹೇಳಿದ್ದಾನೆ. ಸದ್ಯ ಅಳಿಯ ಮನೆ ತೊಳಿಯ ಮಾತು ಇಂತವರನ್ನ ನೋಡಿಯೇ ಮಾಡಿರಬಹುದು ಅಂತ ಹೇಳಲಾಗ್ತುದೆ..