Advertisements

ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ವಿನಯ್ ಪ್ರಸಾದ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸೀಕ್ರೆಟ್..

Cinema

ನಮಸ್ತೆ ಸ್ನೇಹಿತರೆ, ವಿನಯ್ ಪ್ರಸಾದ್ ಅವರು ಕನ್ನಡ ಚಿತ್ರರಂಗದ ಆಗಿನ ಕಾಲದ ಬಹು ಬೇಡಿಕೆಯ ಹಾಗೂ ಅತಿ ಸುಂದರ ನಟಿ ಅಂದರೆ ತಪ್ಪಾಗಲಾರದು.. ವಿನಯ್ ಪ್ರಸಾದ್ ಮೂಲತಃ ಕರ್ನಾಟಕದ ಉಡುಪಿಯಲ್ಲಿ ಜನಿಸಿದವರು. ಇವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು.. ಕನ್ನಡ ಚಿತ್ರಗಳಲ್ಲಿ ಬಾರಿ ಯಶಸ್ಸನ್ನು ಕಂಡ ನಟಿ ವಿನಯ್ ಪ್ರಸಾದ್ ಮಲಯಾಳಂ, ತೆಲುಗಿನಲ್ಲೂ ಸಹ 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇನ್ನೂ ವಿನಯ್ ಪ್ರಸಾದ್ 1988 ರಲ್ಲಿ ವಿ.ಆರ್.ಕೆ ಪ್ರಸಾದ್ ಅವರನ್ನ ಮದುವೆಯಾಗುತ್ತಾರೆ..

Advertisements

ಇವರು ನಿರ್ದೇಶಕ ಹಾಗೂ ಕನ್ನಡ ಚಲನಚಿತ್ರಗಳ ಸಂಪಾದಕರು ಕೂಡ ಆಗಿದ್ದರು. 1995 ರಲ್ಲಿ ವಿ.ಆರ್.ಕೆ ಪ್ರಸಾದ್ ಅವರು ಇಹಲೋಕವನ್ನ ತ್ಯಜಿಸುತ್ತಾರೆ.. ಇನ್ನೂ ಈ ದಂಪತಿಗೆ ಪ್ರಥಮ ಪ್ರಸಾದ್ ಎಂಬ ಮಗಳು ಕೂಡ ಇದ್ದರು. ಆನಂತರ 2002 ರಲ್ಲಿ ಜ್ಯೋತಿ ಪ್ರಕಾಶ್ ಅವರನ್ನ ಮರುವಿವಾಹ ಆಗುತ್ತಾರೆ. ಅವರು ಸಹ ಮೊದಲೇ ಮದುವೆಯಾಗಿದ್ದರು.. ಜ್ಯೋತಿ ಪ್ರಕಾಶ್ ಮೊದಲ ಪತ್ನಿಯಿಂದ ಜೈಹಾತ್ರ ಎಂಬ ಪುತ್ರನನ್ನು ಕೂಡ ಹೊಂದಿದ್ದರು.

ಇವರು ಸಹ ಚಲನಚಿತ್ರ ನಿರ್ದೇಶನ ಮಾಡುತ್ತಾರೆ.. 1988 ರಲ್ಲಿ ವಿನಯ್ ಪ್ರಸಾದ್ ಅವರು ಮಧ್ವಾಚಾರ್ಯ ಎಂಬ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಚಿಕ್ಕ ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು ಆ ನಂತರ ನಾಯಕಿಯಾಗಿ ಮೊದಲ ಬಾರಿಗೆ ಗಣೇಶನ ಮದುವೆ ಎಂಬ ಸಿನಿಮಾದಲ್ಲಿ ಅನಂತನಾಗ್ ರವರ ಜೊತೆ ನಟಿಸಿದ್ದರು. ಸಧ್ಯ ಈಗ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಎಂಬ ಧಾರವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರವನ್ನು ಮಾಡುವ ಮೂಲಕ ಇಡೀ ಕರ್ನಾಟಕ ಮನವನ್ನು ಗೆದ್ದಿದ್ದಾರೆ.