Advertisements

ಲೀಲಾವತಿ ವಿನೋದ್ ರಾಜ್ ಮನೆಗೆ ಭೇಟಿಕೊಟ್ಟು ಸೆಲ್ಫಿ ತೆಗೆದುಕೊಂಡು ಐ ಲವ್ ಯೂ ಸೋ ಮಚ್ ಎಂದು ಬರೆದುಕೊಂಡ ಈ ನಟಿ ಯಾರು ಗೊತ್ತಾ?

Cinema

ಸಾಮಾನ್ಯವಾಗಿ 90ರ ದಶಕದಲ್ಲಿ ಚಂದನವನಕ್ಕೆ ಎಂಟ್ರಿ ಕೊಟ್ಟವರು ನಟಿ ಅಂಜಲಿ. ಹೌದು ಹಿರಿಯನಟ ಮತ್ತು ನಿರ್ದೇಶಕ ಕಾಶಿನಾಥ್ ಅವರ ಸಿನಿಮಾಗಳ ಮೂಲಕ ನಟಿ ಅಂಜಲಿ ಅವರು ನಟನಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಎರಡನೇ ನಾಯಕಿಯಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದು ಒಳ್ಳೆಯ ಪಾತ್ರಗಳ ಮೂಲಕ ಕನ್ನಡ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ನಟಿ ಅಂಜಲಿ. ಸದ್ಯ ಈಗ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಸದ್ಯ ಇದೀಗ ನಟಿ ಅಂಜಲಿ ಅವರು ಹಿರಿಯನಟಿ ಲೀಲಾವತಿರವರನ್ನು ಭೇಟಿ ಮಾಡಿದ್ದು ಫೋಟೋಸ್ ಗಳನ್ನು ಶೇರ್ ಮಾಡಿದ್ದಾರೆ. ಹೌದು ಅಂಜಲಿ ಅವರು ಹುಟ್ಟಿದ್ದು ಮೇ 22 1979ರಲ್ಲಿ. ಇವರ ಮೊದಲ ಹೆಸರು ಶಾಂತ ಅಂಜಲಿ ಅವರು ಹುಟ್ಟಿದ್ದು ಕನಕಪುರದಲ್ಲಾದರೂ ಬೆಳೆದದ್ದು ಮಾತ್ರ ಬೆಂಗಳೂರಿನಲ್ಲಿ. ಶಾಲಾ ದಿನಗಳಲ್ಲಿ ಒಮ್ಮೆ ಸಿನಿಮಾ ಚಿತ್ರೀಕರಣ ನೋಡಲು ಹೋದಾಗ ನಿರ್ದೇಶಕರು ಇವರನ್ನು ನೋಡಿ ಸಿನಿಮಾದಲ್ಲಿ ನಟನೆ ಮಾಡ್ತಿಯಾ ಅಂತ ಕೇಳಿದ್ದರಂತೆ.

Advertisements

ಆಗಿನಿಂದ ಅಂಜಲಿ ರವರ ಸಿನಿಜರ್ನಿ ಶುರುವಾಗಿದ್ದು ಶಾಂತ ಆಗಿದ್ದವರು ಸಿನಿಮಾ ಇಂಡಸ್ಟ್ರಿಗೆ ಬಂದು ಅಂಜಲಿ ಆದರು. ಹದು ಕಾಶಿನಾಥ್ ಅವರು ಅಂಜಲಿ ಎಂದು ಹೆಸರಿಟ್ಟಿದ್ದು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಸಮಯದಲ್ಲಿ ಸುಮಾರು 87 ಸಿನಿಮಾಗಳಲ್ಲಿ ನಟಿಸಿದ್ದಾರೆ ಅಂಜಲಿ. ಅನಂತನ ಅವಾಂತರ ಉಂಡು ಹೋದ ಕೊಂಡು ಹೋದ ನೀನು ನಕ್ಕರೆ ಹಾಲು ಸಕ್ಕರೆ ಹೀಗೆ ಹಲವು ಸಿನಿಮಾಗಳಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಸದ್ಯ ಇದೀಗ ಹಿರಿಯನಟಿ ಲೀಲಾವತಿ ಅವರನ್ನು ಅವರ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ ನಟಿ ಅಂಜಲಿ. ಹೌದು 90ರ ದಶಕದಲ್ಲಿ ಅಂಜಲಿ ಅವರು ಲೀಲಾವತಿ ಅವರೊಡನೆ ನಟಿಸಿದ್ದಾರೆ. ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಅವರು ಚಿತ್ರರಂಗದಿಂದ ದೂರವಾಗಿ ಊರಿನಲ್ಲಿದ್ದಾರೆ ಎನ್ನುವ ವಿಚಾರ ನಮಗೆ ಗೊತ್ತಿದೆ. ಆಗಾಗ ಕನ್ನಡ ಚಿತ್ರರಂಗದ ಕಲಾವಿದರು ಹೋಗಿ ಲೀಲಾವತಿ ಮತ್ತು ವಿನೋದ್ ರಾಜ್ ಅವರನ್ನು ಭೇಟಿ ಮಾಡಿ ಬರುತ್ತಾರೆ. ಇದೀಗ ಅಂಜಲಿ ಅವರು ಸಹ ಭೇಟಿ ಮಾಡಿ ಬಂದಿದ್ದಾರೆ.ಇಂದು ನನಗೆ ತುಂಬಾ ಸಂತೋಷವಾದ ದಿನ.

ಕೊನೆಗೂ ನಾನು ನಿಮ್ಮನ್ನು ನೋಡುವ ಕ್ಷಣ ಬಂದಿತು ಅಮ್ಮ..ಐ ಲವ್ ಯೂ ಸೋ ಮಚ್ ಲೀಲಾವತಿ ಅಮ್ಮ ಮತ್ತು ವಿನೋದ್ ರಾಜ್ ಎಂದು ಬರೆದುಕೊಂಡಿದ್ದಾರೆ ನಟಿ ಅಂಜಲಿ. ಲೀಲಾವತಿ ಅವರನ್ನು ಭೇಟಿ ಮಾಡಿದ್ದು ಅಂಜಲಿ ಅವರಿಗೆ ಬಹಳ ಸಂತೋಷ ತಂದಿದೆ. ಇನ್ನು ಲೀಲಾವತಿ ಅವರನ್ನು ಭೇಟಿ ಮಾಡಿ ಅವರ ಜೊತೆ ಅವರ ಮನೆಯಲ್ಲಿ ಹಾಗೂ ತೋಟದಲ್ಲಿ ಸಾಕಷ್ಟು ಸಮಯ ಕಾಲ ಕಳೆದಿದ್ದಾರೆ ನಟಿ ಅಂಜಲಿ. ಅಂಜಲಿ ಅವರು ಶೇರ್ ಮಾಡಿಕೊಂಡಿರುವ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.