Advertisements

ವಿನೋದ್ ಪ್ರಭಾಕರ್ ಅವರ ಅಪರೂಪದ ಕ್ಷಣಗಳು! ಕುಟುಂಬ ಹೇಗಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ತನ್ನ ಅಭಿನಯ ಮೂಲಕ ಎಲ್ಲರ ಮನಗೆದ್ದು.. ಅಭಿಮಾನಿಗಳಿಂದ ಬಿರುದು ಪಡೆದ ಖ್ಯಾತ ನಟ ಟೈಗರ್ ಪ್ರಭಾಕರ್ ಅವರನ್ನು ಎಂದಿಗೂ ಸಹ ಮರೆಯಲು ಸಾಧ್ಯವಿಲ್ಲ. ಹಾಗೆ ಅವರ ಪ್ರೀತಿಯ ಮಗನಾದ ವಿನೋದ್ ಪ್ರಬಾಕರ್ ಟೈಸನ್ ಎಂದೇ ಖ್ಯಾತಿ ಪಡೆದಿದ್ದಾರೆ.. ತಂದೆಯಂತೆಯೇ ಮಗ ಎನ್ನುವ ರೀತಿಯಲ್ಲಿ ಎತ್ತರದ ನಿಲುವು, ಮುಖದ ಭಾವನೆ ನೋಡುವ ನೋಟ ಉತ್ತಮ ಮೈಕಟ್ಟನ್ನು ಹೊಂದಿರುವ ವಿನೋದ್ ಪ್ರಭಾಕರ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ.

Advertisements

ಇನ್ನೂ ವಿನೋದ್ ಪ್ರಭಾಕರ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನವಗ್ರಹ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ನವಗ್ರಹದಲ್ಲಿನ ಇವರ ಪಾತ್ರ ಎಲ್ಲರ ಗಮನ ಸೆಳೆದು ಜನ ಮೆಚ್ಚುಗೆಯನ್ನು ಪಡೆದು ಕನ್ನಡ ಚಿತ್ರರಂಗದಲ್ಲಿ ಉತ್ತಮವಾದ ಹೆಸರು ತಂದು ಕೊಡುತ್ತದೆ.. ನಂತರ ಶ್ಯಾಡೊ, ಟೈಸನ್, ಮರಿ ಟೈಗರ್, ರಗಡ್ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದರು.. ಇನ್ನೂ ವಿನೋದ್ ಪ್ರಭಾಕರ್ ಅವರು ಇತ್ತೀಚೆಗೆ ರಿಲೀಸ್ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ ಚಿತ್ರದಲ್ಲಿ ನಟಿಸಿದ್ದು ಎಲ್ಲರ ಗಮನ ಸೆಳೆದಿದ್ದಾರೆ..

ಈ ಸಿನಿಮಾದಲ್ಲಿ ರಾಬರ್ಟ್ ಸ್ನೇಹಿತನ ಪಾತ್ರದಲ್ಲಿ ನಟಿಸಿರುವ ವಿನೋದ್ ಪ್ರಭಾಕರ್ ಅವರನ್ನು ನೋಡಿ ಎಲ್ಲರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.. ನವಗ್ರಹದಲ್ಲಿ ಜೊತೆಯಾಗಿ ನಟಿಸಿದ ದರ್ಶನ್ ಮತ್ತು ವಿನೋದ್ ಅವರು ಈಗ ಒಟ್ಟಿಗೆ ರಾಬರ್ಟ್ ಚಿತ್ರದಲ್ಲಿ ಕಾಣಿಸಿ ಕೊಂಡಿರುವುದು ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ. ಇನ್ನೂ ವಿನೋದ್ ಪ್ರಭಾಕರ್ ಅವರು ನಿಶಾ ಎಂಬುವವರನ್ನ ಪ್ರೀತಿಸಿ ಮದುವೆಯಾಗಿದ್ದಾರೆ.. ಸುಮಾರು 15 ವರ್ಷ ಪ್ರೀತಿಯಲ್ಲಿ ಇದ್ದ ಈ ಜೋಡಿ 2014 ರಲ್ಲಿ ಸಪ್ತಪದಿ ತುಳಿದಿದ್ದರು. ನಿಶಾ ಅವರು ಯಾವ ಹೀರೋಯಿನ್ ಗೂ ಕಮ್ಮಿಯಿಲ್ಲ ಅನ್ನುವ ರೀತಿ ಇದ್ದಾರೆ.. ಮೂಲತಃ ಹೈದರಾಬಾದ್ ತೆಲುಗು ಕುಟುಂಬಕ್ಕೆ ಸೇರಿರುವ ನಿಶಾ ಅವರು ಆರ್ಮಿ ಅಧಿಕಾರಿಯ ಮಗಳಾಗಿದ್ದಾರೆ.