Advertisements

53 ನೇ ವಯಸ್ಸಿನಲ್ಲಿ ಸಿಹಿ ಸುದ್ದಿ ಕೊಟ್ಟ ವಿನೋದ್ ರಾಜ್! ಸಂತಸದಲ್ಲಿ ಲೀಲಾವತಿ..

Cinema

ನಮಸ್ತೆ ಸ್ನೇಹಿತರೆ, ಹಿರಿಯ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ.. 80 ರ ದಶಕದಲ್ಲಿ ತಮ್ಮ ಡ್ಯಾನ್ಸ್ ಮೂಲಕ ಎಲ್ಲರ ಮನ ಗೆದ್ದಿದ್ದ ವಿನೋದ್ ರಾಜ್ ಅವರು ದ್ವಾರಕೀಶ್ ನಿರ್ದೇಶನದ ಮೊದಲ ಸಿನಿಮಾದ ನಾಯಕ ನಟನಾಗಿ ಕನ್ನಡ ಚಿತ್ರರಂಗದ ಮೈಕೆಲ್ ಜಾಕ್ಸನ್ ಎಂದೇ ಬಿರುದು ಪಡೆದಿದ್ದರು. ಆದರೆ ವರ್ಷಗಳು ಉರುಳಿದಂತೆ ಅನಾರೋಗ್ಯದ ಕಾರಣ ವಿನೋದ್ ರಾಜ್ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡರು‌.. ಅಥವಾ ಚಿತ್ರರಂಗವೇ ಅವರನ್ನು ದೂರ ತಳ್ಳಿತೋ ತಿಳಿಯದ ವಿಷಯ.

Advertisements

ಆದರೆ ತಾಯಿಯ ಜೊತೆ ಈಗಲೂ ಸಹ ಒಬ್ಬಂಟಿಯಾಗಿ ಜೀವನ ಕಳೆಯುತ್ತಿದ್ದಾರೆ. 53 ವರ್ಷ ಪ್ರಾಯದ ವಿನೋದ್ ರಾಜ್ ಅವರ ಬಾಳಲ್ಲಿ ಈಗ ಹೊಸ ಅಧ್ಯಾಯ ಶುರುವಾಗಿದೆ.. ಈ ವಿಷಯದಿಂದ ವಿನೋದ್ ರಾಜ್ ಅವರ ತಾಯಿ ಕೂಡ ಕುಷಿಯಾಗಿದ್ದಾರೆ. ಸಾ’ಯುವ ಕೊನೆ ಸಮಯದಲ್ಲಿ ತನ್ನ ಆಸೆಯನ್ನು ಈಡೇರಿಸು ಎಂದು ಕೇಳಿಕೊಂಡಿದ್ದರು.. ಇದೀಗ ತಾಯಿಯ ಆಸೆಯನ್ನು ನೆರವೇರಿಸಲು ಮುಂದಾಗಿದ್ದಾರೆ ವಿನೋದ್ ರಾಜ್ ಅವರು. ವಿನೋದ್ ರಾಜ್ ಅವರು ಮಾಡಲು ಹೊರಟಿರುವ ಕೆಲಸವಾದ್ರೂ ಎನು. ವಿನೋದ್ ರಾಜ್ ಅವರಿಂದ ಕನ್ನಡಿಗರಿಗೆ ಸಿಕ್ಕ ಸಿಹಿ ಸುದ್ದಿ ಏನು ಗೊತ್ತಾ?

ಕನ್ನಡದಲ್ಲಿ ಡ್ಯಾನ್ಸ್ ಎಂದ ಕೂಡಲೇ ನೆನಪಿಗೆ ಬರೋದು ವಿನೋದ್ ರಾಜ್ ಅವರು.. ಈ ವಯಸ್ಸಿನಲ್ಲೂ ಕೂಡ ಹುಡುಗರು ಬೆರಗಾಗುವಂತೆ ಡ್ಯಾನ್ಸ್ ಮಾಡುತ್ತಾರೆ. ಇವರಿಗೆ ಸಿನಿಮಾದಲ್ಲಂತೂ ಅವಕಾಶ ಸಿಗಲಿಲ್ಲ ಇದರ ಹೊರತು ಡ್ಯಾನ್ಸ್ ಗಂಧ ಗಾಳಿ ಗೊತ್ತಿಲ್ಲದವರನ್ನು ಡ್ಯಾನ್ಸ್ ಕಾರ್ಯಕ್ರಮಗಳಿಗೆ ಡ್ಯಾನ್ಸ್ ಜಡ್ಜ್ ಗಳಾಗಿ ಕೂರಿಸುತ್ತಿದ್ದಾರೆ.‌. ಇದೀಗ 53 ವರ್ಷದ ವಿನೋದ್ ರಾಜ್ ಮತ್ತೆ ಚಿತ್ರರಂಗಕ್ಕೆ ಬರಲಿದ್ದಾರೆ. ಮುಖವಾಡ ಎಂಬ ಚಿತ್ರತಂಡ ವಿನೋದ್ ರಾಜ್ ಅವರನ್ನು ಸಿನಿಮಾಗೆ ಕರೆತರಲು ಪ್ರಯತ್ನ ಮಾಡಿದ್ದೂ.. ಸಿನಿಮಾದ ಒಂದು ಪಾತ್ರವನ್ನು ವಿನೋದ್ ರಾಜ್ ಅವರಿಂದ ಮಾಡಿಸಲಾಗುತ್ತಿದೆ.

ಎಸ್.ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಮುಖವಾಡ ಎಂಬ ಸಿನಿಮಾಗೆ ವಿನೋದ್ ರಾಜ್ ಅವರು ಆಯ್ಕೆಯಾಗಿದ್ದಾರೆ.. ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆ ನೆರವೇರಿದೆ. ಕೊನೆ ಸಮಯದಲ್ಲಿ ವಿನೋದ್ ರಾಜ್ ಅವರನ್ನು ಮತ್ತೆ ತೆರೆಯ ಮೇಲೆ ನೋಡಬೇಕು ಎಂಬುದು ಲೀಲಾವತಿ ಅವರ ಆಸೆಯಾಗಿತ್ತು.‌ ಇವರು ಮತ್ತೆ ಚಿತ್ರರಂಗಕ್ಕೆ ಬರಬೇಕು ಎಂಬುದು ಅಭಿಮಾನಿಗಳ ಆಸೆ ಕೂಡ ಆಗಿತ್ತು.. ಇದೀಗ ವಿನೋದ್ ರಾಜ್ ಅವರು ಎಲ್ಲರಿಗೂ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.