Advertisements

ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ವಿನೋದ್ ರಾಜ್ ! ಕಾರಣ ಏನು ಗೊತ್ತಾ ?

Cinema

ನಮಸ್ತೇ ಸ್ನೇಹಿತರೇ, ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಹಿರಿಯ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್ ಕೂಡ ಒಬ್ಬರು. ಚಂದನವನ ಕಂಡ ಅದ್ಭುತ ನೃತ್ಯ ಕಲಾವಿದ. ಡ್ಯಾನ್ಸ್ ರಾಜಾ ಡ್ಯಾನ್ಸ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಈಗ ತಮ್ಮ ಅಭಿನಯದಿಂದ ದೂರವೇ ಇರುವ ವಿನೋದ್ ರಾಜ್ ರವರು ವ್ಯವಸಾಯವನ್ನ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ತಾವಾಯ್ತು ತಮ್ಮ ಕೆಲಸವಾಯ್ತು ಎಂದು ನೆಮ್ಮದಿಯಿಂದ ಇರುವವರನ್ನ ಸಹ ಕೆಲ ಕಿಡಿಗೇಡಿಗಳು ಬಿಡುತ್ತಿಲ್ಲ.

ಹೌದು, ಸಾಮಾಜಿಕ ಜಾಲತಾಣಗಳಿಂದ ಎಷ್ಟು ಒಳ್ಳೆಯದು ಇದೆಯೋ ಅಷ್ಟೇ ಕೆಟ್ಟದ್ದು ಇದೆ ಅದೂ ಇಂತಹ ಕಿ’ಡಿಗೇಡಿಗಳಿಂದ. ಈಗಂತೂ ಎಷ್ಟೋ ನಟರ ಹೆಸರಿನಲ್ಲಿ ಫೇ’ಕ್ ಫೇಸ್ಬುಕ್ ಖಾತೆಗಳನ್ನ ಕ್ರಿಯೇಟ್ ಮಾಡಿ ಬೇರೆ ರೀತಿಯಲ್ಲೇ ಉಪಯೋಗಿಸಿಕೊಂಡು ನಟರು ಮುಜುಗುರಕ್ಕಿಡುವಂತೆ ಮಾಡುತ್ತಿದ್ದಾರೆ. ಹೌದು, ಈಗ ಅದೇ ರೀತಿ ನಟ ವಿನೋದ್ ರಾಜ್ ಅವರ ಹೆಸರಿನಲ್ಲಿ ಫೇ’ಕ್ ಫೇಸ್ಬುಕ್ ಖಾತೆಯನ್ನ ಕ್ರಿಯೇಟ್ ಮಾಡಿದ್ದು ಅ’ಶ್ಲೀಲ ಚಿತ್ರಗಳನ್ನ ಅಪ್ಲೋಡ್ ಮಾಡುತ್ತಿದ್ದಾರೆ.

Advertisements

ಇನ್ನು ಇದರ ಬಗ್ಗೆ ಸ್ವತಃ ವಿನೋದ್ ರಾಜ್ ರವರೆ ಪೊಲೀಸ್ ಠಾಣೆಗೆ ಹೋಗಿ ಪ್ರ’ಕರಣ ದಾಖಲಿಸಿದ್ದಾರೆ. ವಿನೋದ್ ರಾಜ್ ಅವರ ಹೆಸರಿನಲ್ಲಿ ಫೇಸ್ಬುಕ್ ಖಾತೆ ತೆರೆದಿದ್ದು ಅದರಲ್ಲಿ ಅ’ಶ್ಲೀಲ ಚಿತ್ರಗಳ ಜೊತೆಗೆ ಬರಹಗಳನ್ನ ಕೂಡ ಪ್ರಕಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ವಿನೋದ್ ರಾಜ್ ರವರು ಇದರ ಬಗೆ ದೂರು ನೀಡಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ತಮ್ಮ ಪಾಡಿಗೆ ತಾವು ಕೆಲಸಮಾಡಿಕೊಂಡಿರುವ ವಿನೋದ್ ರಾಜ್ ರವರನ್ನ ನೆಮ್ಮದಿಯಿಂದ ಇರಲು ಬಿಡದ ಇಂತಹವರನ್ನ ಬೇಗ ಬಂ’ಧಿಸಿ ಬುದ್ದಿ ಕಲಿಸಬೇಕಾಗಿದೆ.