Advertisements

ಈ ಸುಂದರ ಸೆಲ್ಫಿ ಫೋಟೋ ಹಿಂದಿರುವ ರೋಚಕ ಅಸಲಿ ಕತೇನೇ ಬೇರೆ ! ಗಮನವಿಟ್ಟು ನೋಡಿದ್ರೆ..

Kannada Mahiti

ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಆಗುವ ಕೆಲವೊಂದು ಫೋಟೋಗಳು, ವಿಡಿಯೋಗಳು ಬಹುಬೇಗ ವೈರಲ್ ಆಗಿಬಿಡುತ್ತವೆ. ಇನ್ನು ಕೆಲವು ಫೋಟೋಗಳನ್ನ ನೋಡಿದಾಗ ನೆಟ್ಟಿಗರಲ್ಲಿ ಅಚ್ಚರಿ ಜೊತೆಗೆ ಭಯಾನಕತೆಯನ್ನು ಹುಟ್ಟುಹಾಕುತ್ತವೆ. ಅದರೆ ಅವುಗಳ ಹಿಂದೆ ಇರುವ ಅಸಲಿ ಕತೆಯೇ ಬೇರೆಯದೇ ಆಗಿರುತ್ತದೆ. ಇನ್ನು ಅಂತದೊಂದು ಫೋಟೋದ ಬಗ್ಗೆ ನಾವು ಹೇಳುತ್ತೇವೆ ನೋಡಿ..

Advertisements

ಇದು ಸೆಲ್ಫಿ ಜಮಾನ. ಯುವಕ ಯುವತಿಯಿರಿಂದ ಹಿಡಿದು ದೊಡ್ಡವರೂ ಕೂಡ ಸಿಕ್ಕ ಸಿಕ್ಕ ಕಡೆಯೆಲ್ಲಾ ಸೆಲ್ಫಿ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುತ್ತಾರೆ. ಇದೆ ರೀತಿ ಯುವ ಜೋಡಿಯೆಂದು ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಫೋಟೋ ತುಂಬಾ ವೈರಲ್ ಆಗಿತ್ತು. ಆದರೆ ಯುವ ಜೋಡಿಯ ಈ ಸೆಲ್ಫಿ ಫೋಟೋವನ್ನ ಗಮನವಿಟ್ಟು ನೋಡಿದಾಗ ನಿಮಗೆ ಅಚ್ಚರಿ ಆಗದೆ ಇರೋದಿಲ್ಲ.

ಇನ್ನು ಈ ಫೋಟೋ ನೋಡಿದ ನೆಟ್ಟಿಗರು ಇದು ಹೇಗೆ ಸಧ್ಯ ಎಂದು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳನ್ನ ಮಾಡಿದ್ದಾರೆ. ಕೆಲವರು ಆ ಯುವತಿ ಮನುಷ್ಯಳೋ ಇಲ್ಲ ಭೂತವೋ ಎಂದಿದ್ದಾರೆ, ಇನ್ನು ಕೆಲವರು ಆಕೆ ಭಯಾನಕ ಎಂದಿದ್ದಾರೆ. ಮತ್ತ್ತು ಕೆಲವರು ಇದನ್ನ ಫೋಟೋಷಾಪ್ ಮಾಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾದ್ರೆ ಆ ಫೋಟೋ ಹಿಂದಿರುವ ಅಸಲಿ ಸತ್ಯ ಏನು ಗೊತ್ತಾ ? ಹೌದು, ಈ ಫೋಟೋವನ್ನ ಗಮನವಿಟ್ಟು ನೋಡಿದಾಗ ಯುವ ಜೋಡಿಯ ಹಿಂದೆ ಒಂದು ಕನ್ನಡಿ ಇದೆ. ಇನ್ನು ಇವರು ಸೆಲ್ಫಿ ಫೋಟೋ ಕ್ಲಿಕ್ಕಿಸಿದಾಗ ಪೋಸ್ ಕೊಟ್ಟಿರುವ ಯುವತಿ ಒಂದೇ ಸಮಯದಲ್ಲಿ ಎರಡು ದಿಕ್ಕಿಗೆ ಮುಖ ತೋರಿಸಿದ್ದಾಳೆ.

ಸೆಲ್ಫಿ ತೆಗೆಯುವ ವೇಳೆ ಯುವತಿಯಾ ಮುಖ ಯಾವುದಾದರು ಒಂದು ದಿಕ್ಕಿಗೆ ನೋಡಬೇಕಿತ್ತು. ಆದರೆ ಇವರ ಹಿಂದಿದ್ದ ಕನ್ನಡಿಯಲ್ಲಿ ಯುವತಿ, ಅದೇ ಸಮಯದಲ್ಲಿ ಹಿಂಬದಿಗೆ ನೋಡುವುದೂ ಕಾಣುತ್ತದೆ. ಆದರೆ ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡು ಬದಿ ನೋಡಲು ಸಾಧ್ಯವಿಲ್ಲ. ಹಾಗೂ ಎರಡು ಮುಖವಂತೂ ಇರುವುದೇ ಇಲ್ಲ. ಆದರೆ ಆ ಕನ್ನಡಿಯಲ್ಲಿ ಕಾಣಿಸುತ್ತಿರುವುದೇನಿ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಕಾಡುತ್ತಿದೆ.