Advertisements

ರೈಲ್ವೇ ಪ್ಲಾಟ್ ಫಾರಂ ಮೇಲೆ ಆಟೋ ಓಡಿಸಿ ಸಿಕ್ಕಿಬಿದ್ದ.. ಕಾರಣ ತಿಳಿದಾಗ ಪೊಲೀಸರು ಕೂಡ ಶಾಕ್ ಆದರೂ..

Kannada Mahiti

ನಮಸ್ತೆ ಸ್ನೇಹಿತರೆ, ಒಂದು ರೈಲ್ವೇ ಪ್ಲಾಟ್ ಫಾರ್ಮ್ ಮೇಲೆ ಆಟೋ ಓಡಿಸಿದ ಚಾಲಕ, ಇದರಿಂದ ಆಟೋ ಚಾಲಕನಿಗೆ ಶಿ’ಕ್ಷೆಯಾಗುತ್ತದೆ.. ಶಿ’ಕ್ಷೆಯಾದರೂ ಸಹ ಆ ಚಾಲಕ ತುಂಬಾ ಖುಷಿಯಿಂದ ಇದ್ದಾನೆ, ಅಸಲಿಗೆ ರೈಲ್ವೆ ಪ್ಲಾಟ್ ಫಾರ್ಮ್ ಮೇಲೆ ಆಟೋ ಓಡಿಸಲು ಕಾರಣವಾದರೂ ಏನು? ಆತ ಮಾಡಿದ ಕೆಲಸ ಏನು, ಅವರಿಗೆ ಸಿಕ್ಕ ಶಿಕ್ಷೆಯಾದರೂ ಏನು ಅನ್ನುವುದನ್ನ ಸಂಪೂರ್ಣ ಮಾಹಿತಿ ತಿಳಿಯೋಣ.. ಸಾಮಾನ್ಯವಾಗಿ ಆಟೋಗಳು ಎಂತಹ ಟ್ರಾಪಿಕ್ ಇದ್ದರೂ ಸಹ ಸಂದಿ ಗೊಂದಿಗಳಲ್ಲಿ ನುಗ್ಗಿಸಿಕೊಂಡು ಹೋಗುತ್ತಿರುತ್ತಾರೆ.. ಮತ್ತು ಮೀಟರ್ ನ ಮೇಲೆ ಒಂದಕ್ಕೆ ಎರಡು ಮೀಟರ್ ಬೆಲೆ ಕೇಳುತ್ತಾರೆ ಅನ್ನುವ ಅಭಿಪ್ರಾಯ ಕೆಲವು ಜನರಿಗೆ ಇರುತ್ತದೆ..

Advertisements

ಆದರೆ ಇಲ್ಲೊಬ್ಬ ಆಟೋ ಡ್ರೈವರ್ ಮಾಡಿದ ಕೆಲಸಕ್ಕೆ ಎಲ್ಲರೂ ಸಹ ಹೆಮ್ಮೆ ಪಡುತ್ತಿದ್ದಾರೆ.. ಆದ್ರೂ ಇವರಿಗೆ ಶಿ’ಕ್ಷೆ ನೀಡಿದ್ದಾರೆ.. ಈ ಘಟನೆ ನಡೆದಿರುವುದು ಮುಂಬೈನ ವಿರಾರ್ ರೈಲ್ವೆ ಸ್ಟೇಷನ್ ನಲ್ಲಿ.. ಈ ಸ್ಟೇಷನ್ ನಲ್ಲಿ ರೈಲು ಕೆಟ್ಟು ಹೋಗಿ ನಿಂತಿರುತ್ತದೆ.. ಮತ್ತು ಜನರೆಲ್ಲಾ ಟ್ರೈನ್ ನಿಂದ ಇಳಿದು ನೋಡುತ್ತಿದ್ದಂತೆ! ತುಂಬಾ ವೇಗವಾಗಿ ಪ್ಲಾಟ್ ಫಾರ್ಮ್ ಮೇಲೆ ಒಬ್ಬ ವ್ಯಕ್ತಿ ಆಟೋ ಚಲಾಯಿಸಿಕೊಂಡು ಬಂದ.. ಮತ್ತು ಒಬ್ಬ ಮಹಿಳೆ ಈ ಆಟೋ ಹತ್ತುತ್ತಿದ್ದಂತೆ ವೇಗವಾಗಿ ಆಟೋ ಚಲಾಯಿಸಿಕೊಂಡು ಹೊರಟು ಹೋದ.. ಇನ್ನೂ ಇಲ್ಲಿದ್ದ ಜನರಿಗೆ ಇಲ್ಲಿ ಏನು ನಡತಿದೆ ಎಂದು ಅರ್ಥವಾಗಲೇ ಇಲ್ಲ..

ನಂತರ ಆಟೋ ನಂಬರ್ ಅನ್ನು ಸಿಸಿ ಟಿವಿ ಕ್ಯಾಮರಾ ಮೂಲಕ ತೆಗೆಸಿ ವಿಚಾರಸಿದಾಗ ತಿಳಿದು ಬಂದಿದ್ದು ಏನೆಂದರೆ..  ಟ್ರೈನ್ ನಲ್ಲಿ ಒಬ್ಬ ಗರ್ಬವತಿ ಮಹಿಳೆ ಪ್ರಯಾಣ ಮಾಡುತ್ತಿದ್ದರು.. ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು.. ಜೊತೆಗೆ ಟ್ರೈನ್ ಕೂಡ ನಿಂತುಹೋಗಿತ್ತು, ಆಗ ಕೂಡಲೇ ತನ್ನ ಗಂಡನಿಗೆ ಪೋನ್ ಮಾಡಿ ಈ ವಿಚಾರ ತಿಳಿಸಿದಾಗ! ಗಂಡ ತನ್ನ ಸ್ನೇಹಿತನಾದ ಆಟೋ ಚಾಲಕ ಸಾಗರ್ ಅವರಿಗೆ ಪೋನ್ ಮಾಡುತ್ತಾರೆ.. ಆಗ ವೇಗವಾಗಿ ಪ್ಲಾಟ್ ಫಾರ್ಮ್ 2 ಗೆ ಬಂದು ಆಕೆಯನ್ನು ಹತ್ತಿರದಲ್ಲೇ ಇದ್ದ ಸಂಜೀವಾಣಿ ಆಸ್ವತ್ರೆಗೆ ಸೇರಿಸುತ್ತಾನೆ..

ಮತ್ತು ತಾಯಿ ಮಗು ಸುರಕ್ಷಿತವಾಗಿ ಇದ್ದಾರೆ. ಆದರೆ ಆಟೋವನ್ನು ಪ್ಲಾಟ್ ಫಾರ್ಮ್ ಮೇಲೆ ಓಡಿಸಿದಕ್ಕೆ! ಆಟೋ ಚಾಲಕರಾದ ಸಾಗರ್ ಅವರ ಮೇಲೆ ಪೋಲಿಸರು ಕೇಸ್ ಅನ್ನು ದಾಖಲಿಸಿ ಅವರನ್ನು ಜೈಲಿಗೆ ಹಾಕಿದರು.. ಆದರೆ ಗರ್ಭಿಣಿ ಮಹಿಳೆ ದಿವ್ಯಾ ಅವರು ದಯವಿಟ್ಟು ಅವರನ್ನು ಬಿಡುಗಡೆ ಮಾಡಿ. ಅವರು ಬರದೇ ಇದ್ದರೆ ನಾನು ಮತ್ತು ನನ್ನ ಮಗು ಉಳಿಯುತ್ತಿರಲಿಲ್ಲ ಎಂದು ಕೇಳಿಕೊಂಡಿದ್ದಾರೆ.. ನಂತರ ಸಬ್ ಇನ್ಸ್ಪೆಕ್ಟರ್, ಸಾಗರ್ ಅವರಿಗೆ ಬೇಲ್ ಕೊಟ್ಟಿದ್ದಾರೆ.. ಆದರೂ ಸಹ ರೂಲ್ಸ್ ಗಳನ್ನ ಬ್ರೇಕ್ ಮಾಡಿದ್ದಕ್ಕೆ ಕಾನೂನು ಪಾಲಿಸಲೇ ಬೇಕೆಂದು ಹೇಳಿದ್ದಾರೆ.. ನಿಮ್ಮ ಪ್ರಕಾರ ಈ ವಿಚಾರದಲ್ಲಿ ಕಾನೂನನ್ನು ಉಲ್ಲಂಘನೆ ಮಾಡಿ ಈ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಉಳಿಸಿದ ಆಟೋ ಡ್ರೈವರ್ ಮಾಡಿದ್ದು  ಸರಿನಾ ಅಥವಾ ತಪ್ಪಾ ಎಂದು ನಿಮ್ಮ ಅನಿಸಿಕೆಯನ್ನು ತಿಳಿಸಿ..