Advertisements

ಅಪ್ಪು ಮಾಡ್ತಿದ್ದ ಕೆಲಸವನ್ನ ನಾನು ಮಾಡ್ತೇನೆ ಎಂದಿದ್ದ ನಟ ವಿಶಾಲ್ ಈಗ ಮಾಡಿರೋದೇನು ಗೊತ್ತೇ..

Cinema

[widget id=”custom_html-3″]

ಪುನೀತ್ ರಾಜ್​ಕುಮಾರ್ ಕೇವಲ ಕನ್ನಡ ಇಂಡಸ್ಟ್ರಿಯ ಜನರಿಗೆ ಮಾತ್ರವಲ್ಲ, ಬೇರೆ ಬೇರೆ ಬಾಷೆಯ ಕಲಾವಿದರಿಗೂ ಕೂಡ ಅಚ್ಚುಮೆಚ್ಚಿನ ನಟನಾಗಿದ್ದವರು. ಸರಳತೆ ಪುನೀತ್ ಆಭರಣ. ನಗು ಪುನೀತ್ ಅವರ ಸ್ವಭಾವವನ್ನು ತೋರಿಸುತ್ತಿತ್ತು. ಆ ವ್ಯಕ್ತಿತ್ವವೇ ಹಾಗಿತ್ತು. ಎಲ್ಲರನ್ನು ಸೂಜಿಕಲ್ಲಿನಂತೆ ತನ್ನತ್ತ ಸೆಳೆದುಕೊಳ್ಳುವ ಸ್ಪೆಶಲ್ ಕ್ಯಾರೆಕ್ಟರ್ ಅವರದ್ದು, ಹೇಳ್ತಾ ಹೋದ್ರೆ ಪುನೀತ್ ಬಗ್ಗೆ ಬಣ್ಣಿ ಸಿದಷ್ಟು ಪದಗಳು ಬಡವಾಗಲ್ಲ ಅನಿಸುತ್ತೆ, ಬಿಡಿ ಪುನೀತ್ ಅವರು ಜೂನಿಯರ್ ಎನ್ ಟಿ ಆರ್, ಅಲ್ಲು ಅರ್ಜುನ್, ವಿಶಾಲ್ ಹಾಗೂ ಇನ್ನು ಅನೇಕ ಕಲಾವಿದರೊಟ್ಟಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡವರು. ಅವರ ಸುಂದರ ಸಂಬಂಧಕ್ಕೆ ವಿಶಾಲ್ ಹೇಳಿದ ಆ ಮಾತೇ ಸಾಕ್ಷಿ. ಆದ್ರೆ ವಿಶಾಲ್ ಸುಮ್ಮನೆ ಸ್ಟೇಜಿಗಾಗಿ, ಚಪ್ಪಾಳೆಗಾಗಿ ಭಾವೋದ್ವೇಗದಲ್ಲಿ ಆ ನಿರ್ಣಯವನ್ನು ಕೈಗೊಂಡಿಲ್ಲ.

[widget id=”custom_html-3″]

Advertisements

ಮನಸ್ಪೂರ್ತಿಯಾಗಿ ಪುನೀತ್​ಗಾಗಿ 1800 ವಿದ್ಯಾರ್ಥಿಗಳ ಭವಿಷ್ಯವನ್ನು ನಾನು ಉಸಿರಿರೋ ತನಕ ನೋಡಿಕೊಳ್ತೇನೆ ಅಂತ ಹೇಳಿದ್ದಾರೆ. ಹೌದು ನಾವ್ಯಾಕೆ ಇಷ್ಟು ಖಚಿತವಾಗಿ ಹೇಳ್ತಿದ್ದೀವಿ ಇಲ್ಲಿದೆ ಕಾರಣ. ಈ ಬಗ್ಗೆ ಅಪ್ಪು ನಮನ ಕಾರ್ಯಕ್ರಮದಲ್ಲಿ ಪುನೀತ್ ಹೇಳಿದ್ದು ಹೀಗೆ. ನಾನೇನು ದೊಡ್ಡ ಶ್ರೀಮಂತ ಅಥವಾ ನನ್ನ ಬಳಿ ಸಾಕಷ್ಟು ಹಣ ಇದೆ ಅಂತ ಅಲ್ಲ, ನಿಜ ಹೇಳಬೇಕೆಂದರೆ ನನ್ನ ಬಳಿ ಈಗಲೂ ಒಂದು ಸ್ವಂತ ಮನೆಯಿಲ್ಲ.. ಅಪ್ಪ ಅಮ್ಮ ಕಟ್ಟಿಸಿರುವ ಮನೆಯಲ್ಲಿಯೇ ನಾನು ಇರೋದು.. ಆದರೆ ಮನೆ ಕಟ್ಟಲೆಂದು ಹಣ ಕೂಡಿಟ್ಟಿದ್ದೇನೆ.. ಅದೇ ಹಣದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಪಡೆಯುತ್ತೇನೆ.. ಮನೆಯನ್ನು ಮುಂದೆ ಯಾವಾಗಲಾದರೂ ಕಟ್ಟಬಹುದು.. ಆದರೆ ಪುನೀತ್ ಅವರು ಅಗಲಿದ ನಂತರ ಅವರಿದ್ದಾಗ ಮಾಡುತ್ತಿದ್ದ ಕೆಲಸಗಳು ಬೆಳಕಿಗೆ ಬಂದಾಗ ಸಾಕಷ್ಟು ಬೇಸರವಾಯಿತು..

[widget id=”custom_html-3″]

[widget id=”custom_html-3″]

ನಮ್ಮಿಂದ ಸಮಾಜಕ್ಕೆ ಏನಾದರು ಮಾಡಬೇಕು.. ಅವರ ಕನಸುಗಳು ಅವರ ಯಾವ ಕೆಲಸಗಳು ಸಹ ಅರ್ಧಕ್ಕೆ ನಿಲ್ಲಬಾರದು.. ನಮ್ಮ ನಮ್ಮ ಮನಸ್ಪೂರ್ತಿಯಾಗಿ ಆ ಕೆಲಸಗಳು ಮುಂದುವರೆಯಬೇಕು ಅದೇ ಕಾರಣಕ್ಕೆ ನನಗೆ ಅನುಮತಿ ಕೊಡಿ ನಾನು ಆ ಮಕ್ಕಳ ಜವಾಬ್ದಾರಿಯನ್ನು ಪಡೆದುಕೊಳ್ಳುತ್ತೇನೆ ಎಂದಿದ್ದರು.. ಈ ಮಾತಿಗೆ ಪುಷ್ಠಿ ಕೊಡುವಂತೆ ವಿಶಾಲ್ ಅಪ್ಪು ನಮನ ಕಾರ್ಯಕ್ರಮದ ಬಳಿಕ 2 ದಿನ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ರು. ಈ ವೇಳೆ ಶಿವಣ್ಣನ ಮನೆಗೆ ವಿಸಿಟ್ ಕೊಟ್ಟ ವಿಶಾಲ್, 1800 ವಿದ್ಯಾರ್ಥಿಗಳ ಭವಿಷ್ಯವನ್ನು ನೋಡಿಕೊಳ್ಳುವ ನಿರ್ಧಾರ ಮಾಡಿದ್ರ ಬಗ್ಗೆ ಚರ್ಚಿಸಿದ್ರು. ಜೊತೆಗೆ ಪುನೀತ್ ಮನೆಗೆ ಸಹ ಬೇಟಿ ಕೊಟ್ಟ ವಿಶಾಲ್ ಅಶ್ವಿನಿ ಅವರ ಬಳಿ ಅನುಮತಿ ಕೇಳಿದ್ದಾರೆ. ಈ ವಿಚಾರದ ಬಗ್ಗೆ ಸದ್ಯದಲ್ಲಿಯೇ ತಿಳಿಸುತ್ತೇನೆ ಅಂತ ಸಹ ಹೇಳಿದ್ದಾರೆ.

[widget id=”custom_html-3″]