Advertisements

ಬಾಲಿವುಡ್ ನಲ್ಲಿ ಡಾ.ರಾಜ್, ವಿಷ್ಣುಗೆ ಅವಮಾನ! ಬಾಲಿವುಡ್ ವಿರುದ್ಧ ತಿರುಗಿಬಿದ್ದ ನಟರು..

Cinema

ಪ್ರೀಯ ಓದುಗರೇ ಭಾರತೀಯ ಸಿನಿಮಾ ಎಂದರೆ ಬಾಲಿವುಡ್, ಹಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ನ ನಟ-ನಟಿಯರ ಹೆಸರು ಬರಬೇಕು. ಆದ್ರೆ ವಿದೇಶದಲ್ಲಿ ನಡೆಯುವ ಭಾರತೀಯ ಸಿನಿಮಾ ಫಂಕ್ಷನ್ ಗಳಲ್ಲಿ ಕೇವಲ ಬಾಲಿವುಡ್ ಸಿನಿತಾರೆಯರು ಮಾತ್ರ ಭಾಗವಹಿಸುತ್ತಾರೆ. ಅವರಿಗೆ ಹೆಚ್ಚಿನ ಪ್ರಾಶಸ್ತ ದೊರೆಯುತ್ತದೆ ಯಾಕೆ ಗೊತ್ತಾ? ಇದನ್ನು ತಮಿಳುನಟ ಚಿರಂಜೀವಿ ಖಂಡಿಸಿ ಮಾತನಾಡಿದ್ದಾರೆ. ಅದು ಯಾಕೆ ಅಂತ ಹೇಳತೀವಿ ಈ ಲೇಖನ ಪೂರ್ಣವಾಗಿ ಓದಿ. ಬಹುಭಾಷಾ ನಟ ಚಿರಂಜೀವಿ ಅವರು ಒಮ್ಮೆ ವಿದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಂತೆ. ಆ ಕಾರ್ಯಕ್ರಮದಲ್ಲಿ ‘ಇಂಡಿಯನ್ ಸಿನಿಮಾ ಇಂಡಸ್ಟ್ರಿ’ ಎಂಬ ವಿಡಿಯೋವನ್ನು ಪ್ಲೇ ಮಾಡಿದ್ದರಂತೆ. ಆ ಇಡೀ ವಿಡಿಯೋದಲ್ಲಿ ಕೇವಲ ಬಾಲಿವುಡ್ ನ ಮೇರು ನಟರನ್ನು ಮಾತ್ರ ಫೋಟೋ ಸಮೇತ ತೋರಿಸಿದರಂತೆ. ಅವರ ಪರಿಚಯ ನೀಡಿದರಂತೆ. ಇದರಿಂದ ಚಿರಂಜೀವಿ ಅವರಿಗೆ ಅವಮಾನ ಆದಂತೆ ಭಾಸವಾಯಿತಂತೆ.. ಈ ವಿಡಿಯೋದಲ್ಲಿ ರಾಜೇಶ್ ಕನ್ನ ನಿಂದ ಹಿಡಿದು ದೇವಾನಂದ, ಅಮಿತಾ ಬಚ್ಚನ್ ಸೇರಿದಂತೆ ಬಾಲಿವುಡ್ ನ ನಟ-ನಟಿಯರ ಹೆಸರುಗಳು ಹಾಗೂ ಫೋಟೋಗಳನ್ನು ತೋರಿಸಲಾಗಿತ್ತು..

Advertisements

ಅವರ ಸವಿಸ್ತಾರದ ಪರಿಚಯ ನೀಡಲಾಗಿತ್ತು.. ಹಾಗೆ ದಕ್ಷಿಣ ಭಾರತದ ನಟರು ಎಂದಾಗ ಜಯಲಲಿತಾ ಮತ್ತು ಎಂಜಿಆರ್ ಅವರ ಫೋಟೋ ಮಾತ್ರ ಹಾಕಿ ಇಷ್ಟೇ ಬದುಕಿನ ಭಾರತದ ಸಿನಿಮಾ ತಾರೆಯರು ಎಂದು ಹೇಳಲಾಗಿತ್ತು. ಆಗ ಚಿರಂಜೀವಿ ಅವರಿಗೆ ಅನಿಸಿದ್ದು ದಕ್ಷಿಣ ಭಾರತದಲ್ಲಿ ಅನೇಕ ನಟ ನಟರು ಹೆಸರು ಮಾಡಿದ್ದಾರೆ ನೂರಾರು ನಟರಿದ್ದರು. ಯಾಕೆ ಈ ಫಿಲಂ ಇಂಡಸ್ಟ್ರಿಯಲ್ಲಿ ಅವರ ಹೆಸರನ್ನು ಗುರುತಿಸುತ್ತಿಲ್ಲ ಎಂದು ಮನನೊಂದೀತು ಎಂದು ಹೇಳಿಕೊಂಡಿದ್ದಾರೆ. ಯಾಕೆಂದರೆ ಚಿರಂಜೀವಿ ಅವರು ಹೇಳುವಂತೆ ದಕ್ಷಿಣ ಭಾರತದಲ್ಲಿಯೂ ಅನೇಕ ನೂರಾರು ನಟರಿದ್ದಾರೆ ಕನ್ನಡದ ಕಂಠೀರವ, ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಹೆಸರಾಗಲಿ, ತಮಿಳು, ತೆಲುಗು ನಟ ನಟಿಯರ ಹೆಸರಾಗಲಿ, ಅವರ ಫೋಟೋ ಆಗಲಿ ಅಲ್ಲಿ ತೋರಿಸಲಿಲ್ಲ. ಇದು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿ ಅವರಿಗೆ ಮಾಡಿದ ಅತೀವ ಅವಮಾನ ಎಂದು ನಟ ಚಿರಂಜೀವಿ ಧ್ವನಿಯೆತ್ತಿ ಮಾತನಾಡಿದ್ದಾರೆ.


ಇದೀಗ ದಕ್ಷಿಣ ಭಾರತದಿಂದ ಬಾಲಿವುಡ್ಡನ್ನೇ ನಡುಗಿಸುವಂತೆ ಕೆಜಿಎಫ್, ಕೆಜಿಎಫ್2, RRR, ಪುಷ್ಪ, ಹೀಗೆ ಒಂದಾದ ಮೇಲೊಂದು ಸೂಪರ್ಹಿಟ್ ಫಿಲ್ಮಗಳು ತೆರೆಮೇಲೆ ಅಬ್ಬರಿಸಿ ಇದೀಗ ಬೋಬ್ಬಿರಿದಿವೆ. ಇದು ಬಾಲಿವುಡ್ ಇಂಡಸ್ಟ್ರಿಗೆ ಸೆಡ್ಡು ಹೊಡೆದಂತೆ ಆಗಿದೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳು ಕೂಡ ದೇಶ-ವಿದೇಶದಲ್ಲಿ ಇದೀಗ ಘರ್ಜಿಸಿದ್ದು ಬಾಲಿವುಡ್ ಸ್ಟಾರ್ ನಟರ ಕೊಬ್ಬು ಇಳಿಯುವಂತೆ ಮಾಡಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಿನಿಮಾಗಳು ತೆರೆಗೆ ಬರಲಿವೆ. ಆಗ ಕನ್ನಡ, ಸೇರಿದಂತೆ ಎಲ್ಲಾ ಸಿನಿಮಾ ತಾರೆಯರು ಬಾಲಿವುಡ್ ತಾರೆಯರನ್ನು ಬದಿಗೆ ಸರಿಸುವುದು ಸುಳ್ಳಲ್ಲ. ಇಂದು ಅಷ್ಟೊಂದು ದೊಡ್ಡ ನಟ – ನಟಿಯರು ದಕ್ಷಿಣ ಭಾಗದಲ್ಲಿ ಇಲ್ಲಾ ಎಂದವರೇ ಇದೀಗ ನಟರನ್ನು ಹುಡುಕಿ ಬರುವಂತೆ ಆಗಿದೆ. ಇದು ಇನ್ನೂ ಆರಂಭ, ಮುಂದೆ ಇನ್ನು ಹೆಚ್ಚಿನ ಸಿನಿಮಾಗಳು ಬರಲಿವೆ..