Advertisements

ವಿಷ್ಣುವರ್ಧನ್ ಗೆ ಈ ತಾರತಮ್ಯವೇಕೆ.. ಕಲಾವಿದರ ಸಂಘದಲ್ಲಿ ವಿಷ್ಣು ಹೆಸರಿಲ್ಲ! ಮಂಡಳಿಲಿ ಮೂರ್ತಿಯೂ ಇಲ್ಲ ಯಾಕೆ?

Cinema

ವಿಷ್ಣು ದಾದಾನ ಸಹಾಯ ಯಾರಿಗೂ ಗೊತ್ತಾಗಲಿಲ್ಲ ಯಾಕೆ? ನಮ್ಮ ಸ್ಯಾಂಡಲ್ವುಡ್ನಲ್ಲಿ ಸಾಹಸಸಿಂಹ ಎಂದೇ ಹೆಸರಾದವರು ಡಾಕ್ಟರ್ ವಿಷ್ಣುವರ್ಧನ್ ಅವರು. ಹಿರಿಯ, ಮೇರುನಟ ದಲ್ಲಿ ಡಾ. ವಿಷ್ಣುವರ್ಧನ್ ಕೂಡ ಒಬ್ಬರು. ಆದರೆ ಇವರ ಸರಿಸಮಾನರಾದ ಹಿರಿಯ ನಟರಂತೆ ಇವರಿಗೆ ಸಿಗಬೇಕಾದ ಪ್ರಶಸ್ತ್ಯ ಸಿಕ್ಕಿಲ್ಲ ಯಾಕೆ? ಕಲಾವಿದರ ಸಂಘದಲ್ಲಿ ಹೆಸರು ಕೂಡ ಇಲ್ಲ ಯಾಕೆ. ಡಾ. ರಾಜಕುಮಾರ್, ಅಂಬರೀಶ್ ಅವರಂತೆ ಇವರು ಕೂಡ ಒಬ್ಬ ಹಿರಿಯ ಮತ್ತು ಮೇರು ನಟರಲ್ಲಿ ಒಬ್ಬರು. ಇವರನ್ನು ಹೊರತುಪಡಿಸಿ ಬೇರೆ ನಟರ ಮೂರ್ತಿ ಪ್ರತಿಷ್ಠಾಪನೆ, ಪುತ್ತಳಿ ನಿರ್ಮಾಣ ಮಾಡುವುದು ಸಾಮಾನ್ಯವಾಗಿದೆ. ಆದರೆ ಡಾ ವಿಷ್ಣುವರ್ಧನ್ ಅವರ ಯಾವುದೇ ಪುತ್ತಳಿ ಯಾಗಲಿ, ಇವರ ಹೆಸರನ್ನು ಬೇರೆ ಯಾವುದರಲ್ಲಾದರೂ ಬಳಸುವುದಾಗಿ ಇಲ್ಲ.

[widget id=”custom_html-3″]

Advertisements

ವಿಷ್ಣುದಾದಾ ಕೂಡ ಸಮಾಜಸೇವಕರು. ಇವರು ಸಹಾಯ ಮಾಡಿದ್ದು ಎಡಗೈಗೆ ಗೊತ್ತಾಗದಂತೆ ಮಾಡುತ್ತಿದ್ದರು. ಹಾಗಾಗಿ ಇವರ ಸಹಾಯ, ಜನಸೇವೆ ಅಷ್ಟೊಂದು ಬೆಳಕಿಗೆ ಬರಲಿಲ್ಲ.
ಕಲಾವಿದರ ನೋವು ನಲಿವು ಗಳಿಗಾಗಿ, ಅವರ ಸಲಹೆ ಸೂಚನೆಗಳನ್ನು ಆಲಿಸಲು ಕಲಾವಿದ ಸಂಘವಿದೆ. ಆದ್ರೆ ಆ ಸಂಘದಲ್ಲಿ ವಿಷ್ಣು ದಾದಾ ಅವರ ಹೆಸರನ್ನು ಈವರೆಗೆ ಸೇರಿಸಿಲ್ಲ. ಸಂಘದಲ್ಲಿ ಅಂಬರೀಶ್, ರಾಜಕುಮಾರ್ ಅವರ ಹೆಸರು ಕೂಡ ಇದೆ ಬೀದಿಗಳಿಗೆ ಅವರ ಹೆಸರು ಇದೆ. ಅಷ್ಟೇ ಅಲ್ಲ ರಾಜಕುಮಾರ್ ಅವರ ಸ’ಮಾ’ಧಿ ಹಾಗೂ ಪುತ್ತಳಿ ಅನಾವರಣ ಕೂಡ ಆಗಿದೆ. ಆದರೆ ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ಎಲ್ಲಿಯೂ ಸ್ಥಾಪನೆ ಮಾಡಿಲ್ಲ. ಅವರ ಸ’ಮಾ’ಧಿ ಕಟ್ಟಿಸುವ ವಿವಾದ ಇನ್ನೂ ಕೂಡ ಬಗೆಹರಿದಿಲ್ಲ. ಅಷ್ಟೇ ಅಲ್ಲ ಅವರ ಹೆಸರನ್ನು ಹೆಚ್ಚಾಗಿ ಜನಪ್ರಿಯಗೊಳಿಸುತ್ತಿಲ್ಲ.

[widget id=”custom_html-3″]

ಇದು ವಿಷ್ಣು ಅಭಿಮಾನಿಗಳಲ್ಲಿ ಕೋಪ ಉಂಟು ಮಾಡುತ್ತಿದೆ. ಅಷ್ಟೇ ಅಲ್ಲ ವಿಷ್ಣು ಮತ್ತು ರಾಜಕುಮಾರ್ ಅಭಿಮಾನಿಗಳಲ್ಲಿ ವೈಮನಸ್ಸು ಮೂಡಲು ಇದೆ ಒಂದು ಅಂಶ ಕಾರಣ ಎನ್ನಬಹುದು. ಆದ್ದರಿಂದ ಕಲಾವಿದರ ಸಂಘ ಮತ್ತು ಸಿನಿಮಾ ವಾಣಿಜ್ಯ ಮಂಡಳಿ ಹಿರಿಯ ಕಲಾವಿದರಿಗೆ ಸಲ್ಲಿಸಬೇಕಾದ ಪ್ರಾಶಸ್ತ್ಯವನ್ನು ಸಮಾನವಾಗಿ ಸಲ್ಲಿಸಬೇಕು ಎನ್ನುವುದು ಸಿನಿಪ್ರಿಯರ ಅಭಿಪ್ರಾಯ. ಸಮಾಜಸೇವೆಯಲ್ಲಿ ಕ್ರಿಯೇಟಿವ್ ಆಗಿದ್ದ ವಿಷ್ಣುದಾದಾ ಅದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ ಆಗ ಮಾಧ್ಯಮವಾಗಲಿ ಜಾಲತಾಣ ವಾಗಲಿ ಈಗಿನಷ್ಟು ಫಾಸ್ಟ್ ಆಗಿರಲಿಲ್ಲ. ಹೀಗಾಗಿ ವಿಷ್ಣು ದಾದಾ ಅವರ ಸಹಾಯ ಸಮಾಜಸೇವೆ ಅಷ್ಟೊಂದು ಬೆಳಕಿಗೆ ಬರದೆ, ತೆರೆಮರೆಯಲ್ಲಿಯೇ ಮರೆಯಾಗುತ್ತಿವೆ. ಇವರು ಒಬ್ಬ ಹಿರಿಯ ನಟ ಆಗಿದ್ದರಿಂದ ಇವರಿಗೂ ಸಮಾನ ಸ್ಥಾನಮಾನ ಸಿಗಲಿ ಎನ್ನುವುದು ವಿಷ್ಣುವರ್ಧನ್ ಅಭಿಮಾನಿಗಳ ಅಭಿಪ್ರಾಯ..

[widget id=”custom_html-3″]