Advertisements

ರಾತ್ರಿ ರೈಲಿನಲ್ಲೇ ಒಬ್ಬಳೇ ಇದ್ದ ಹುಡುಗಿಗೆ ಈ ಸೈನಿಕ ಮಾಡಿದ ಕೆಲಸ ನೋಡಿದ್ರೆ ಒಂದು ಕ್ಷಣ ರೋಮಾಂಚನವಾಗುತ್ತದೆ..

Kannada Mahiti

ನಮಸ್ತೇ ಸ್ನೇಹಿತರೆ, ನಾವುಗಳು ನಮ್ಮ ಸ್ಥಳಗಳಲ್ಲಿ ಆರಾಮಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು.. ಸೈನಿಕರು ನಮಗೋಸ್ಕರ ತನ್ನ ಜೀವವನ್ನು ಹೊತ್ತೆಯಿಟ್ಟು ದೇಶದ ಗಡಿಬಾಗದಲ್ಲಿ ಕಾಯುತ್ತಿರುತ್ತಾರೆ.. ಹಾಗೆ ವರ್ಷಕ್ಕೆ ಒಂದು ಬಾರಿ ಮಾತ್ರ ಸೈನಿಕರು ಕೆಲಸಕ್ಕೆ ರಜೆ ಹಾಕಿಕೊಂಡು ಊರುಗಳಿಗೆ ಹೋಗುತ್ತಾರೆ.. ಇದೇ ರೀತಿ ವಿಷ್ಣು ಎಂಬ ಸೈನಿಕ ಒಂದು ತಿಂಗಳು ರಜೆ ಹಾಕಿ ರೈಲಿನಲ್ಲಿ ಆಂದ್ರಪ್ರದೇಶದ ಗುಂಟೂರಿಗೆ ಬರುತ್ತಿರುತ್ತಾರೆ.. ಇನ್ನೂ ವಿಷ್ಣು ಅವರು ಕೂತಿದ್ದ ಬೋಗಿಯಲ್ಲಿ 20 ವರ್ಷ ವಯಸ್ಸಿನ ಮೋನಿಕಾ ಎಂಬ ಯುವತಿ ಕೂಡ ಆಂದ್ರಪ್ರದೇಶಕ್ಕೆ ಹೋಗಲು ಕೂತಿರುತ್ತಾರೆ..

Advertisements

ಆ ಬೋಗಿಯಲ್ಲಿ ವಿಷ್ಣು ಮತ್ತು ಮೋನಿಕಾ ಅವರನ್ನು ಬಿಟ್ಟರೆ ಯಾರೂ ಕೂಡ ಇರಲಿಲ್ಲ.. ಮೋನಿಕಾ ಅವರಿಗೆ ಮೊದಲಿನಿಂದಲೂ ಕೂಡ ಸೈನಿಕರೆಂದರೆ ವಿಪರೀತ ಗೌರವ.. ಹಾಗಾಗಿ ಎದುರಿಗೆ ಕೂತಿದ್ದ ವಿಷ್ಣು ಅವರನ್ನು ಮಾತನಾಡಿಸಿ ನೀವು ತುಂಬಾ ಗ್ರೇಟ್, ಯಾವುದೇ ಸ್ವಾರ್ಥವಿಲ್ಲದೇ ನಮಗೋಸ್ಕರ ನೀವು ಗಡಿಭಾಗದಲ್ಲಿ ಕಾಯುತ್ತಿರುತ್ತೀರಾ ಎಂದು ಹೇಳುತ್ತಾರೆ.. ಮೋನಿಕಾ ಅವರ ಮಾತನ್ನು ಕೇಳಿದ ವಿಷ್ಣು ಅವರು ಸಂತೋಷ ಪಡುತ್ತಾರೆ.. ಮತ್ತು ನಮ್ಮನ್ನು ಹೊಗಳಬೇಡಿ ನಾವು ನಮ್ಮ ಕರ್ತವ್ಯವನ್ನು ಮಾಡುತ್ತಿದ್ದೇವೆ ಅಷ್ಟೇ ಎಂದು ಹೇಳುತ್ತಾರೆ.. ಇನ್ನೂ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಮೋನಿಕ ಅವರು ತಿನ್ನಲು ತಂದಿದ್ದ ಊಟದಲ್ಲಿ ಅರ್ಧ ಭಾಗವನ್ನು ವಿಷ್ಣು ಅವರಿಗೆ ಕೊಡುತ್ತಾರೆ..

ಪರಿಚಯವಾದ ಎರಡು ಮೂರು ಗಂಟೆಗಳಲ್ಲೇ ಇವರಿಬ್ಬರಲ್ಲಿ ಅಣ್ಣ ತಂಗಿಯ ಅವಿನಾಭಾವ ಸಂಬಂಧ ಬೆಳೆಯುತ್ತದೆ.. ಮಧ್ಯಾಹ್ನದ ವೇಳೆ ಪ್ರಯಾಣ ಶುರುಮಾಡಿದ ರೈಲು ರಾತ್ರಿಯಾದರೂ ಪ್ರಯಾಣ ಮುಂದುವರೆಸಿತ್ತು.. ಕತ್ತಲಾದ ಕಾರಣ ವಿಷ್ಣು ಮತ್ತು ಮೋನಿಕಾ ಅವರು ಮಾತನಾಡುವುದನ್ನು ನಿಲ್ಲಿಸಿ ನಿದ್ರೆಗೆ ಜಾರುತ್ತಾರೆ.. ಆಗ ಇದ್ದಕ್ಕಿದ್ದಂತೆ ಯಾರೋ ರೈಲಿನ ಚೈನ್ ಎಳೆದು ದಿಡೀರೆಂದು ರೈಲನ್ನು ನಿಲ್ಲಿಸುತ್ತಾರೆ.. ರೈಲು ಇದ್ದಕ್ಕಿದ್ದಂತೆ ನಿಂತಿದ್ದನ್ನು ನೋಡಿ ಬೋಗಿಗಳಲ್ಲಿದ್ದ ಜನರು ಗಾಬರಿಯಾಗುತ್ತಾರೆ.. ರೈಲು ನಿಂತಿದ್ದೇ ತಡ ಸುಮಾರು 40 ಜನ ಕಳ್ಳರು ಬೋಗಿಯ ಹೊಳಗಡೆ ನುಗ್ಗಿ ಜನರ ಹತ್ತಿರ ಚಿನ್ನಾಭರಣಗಳನ್ನು ಲೂ’ಟಿ ಮಾಡಲು ಶುರು ಮಾಡುತ್ತಾರೆ..

ಇನ್ನೂ ವಿಷ್ಣು ಮತ್ತು ಮೋನಿಕ ಅವರು ಕೂತಿದ್ದ ಬೋಗಿಗೂ ಕೂಡ ಕಳ್ಳರು ನುಗ್ಗಿ ವಿಷ್ಣು ಹಾಗೂ ಮೋನಿಕ ಅವರ ಹತ್ತಿರ ದುಡ್ಡು ಮತ್ತು ಆಭರಣವನ್ನು ಕೊಡುವಂತೆ ಹೇಳುತ್ತಾರೆ..  ಆಗ ಮೋನಿಕ ಅವರು ತನ್ನಲ್ಲಿದ್ದ ದುಡ್ಡು ಮತ್ತು ಆಭರಣವನ್ನು ಕೊಟ್ಟು ಬಿಡುತ್ತಾರೆ‌‌.. ಆದರೆ ವಿಷ್ಣು ಅವರು ಮಾತ್ರ ಏನು ಕೊಡಲಿಲ್ಲ ಸುಮ್ಮನೆ ಕೂತು ನೋಡುತ್ತಿರುತ್ತಾರೆ.. ನಂತರ ಕಳ್ಳರು ಮೋನಿಕ ಅವರನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಪ್ರಯತ್ನ ಪಡುತ್ತಾರೆ‌‌..

ಯಾವಾಗ ಕಳ್ಳರ ಕೈ ಮೋನಿಕ ಅವರ ಮೇಲೆ ಬೀಳುತ್ತದೆಯೋ ಸೈನಿಕ ವಿಷ್ಣು ಅವರ ಕೋಪ ನೆತ್ತಿಗೇರಿ, ತನ್ನ ಬ್ಯಾಗ್ ನಲ್ಲಿದ್ದ ಒಂದು ಕಬ್ಬಿಣದ ರ್ಯಾಡ್ ತೆಗೆದುಕೊಂಡು ಕಳ್ಳರಿಗೆ ಮುಟ್ಟಿನೋಡಿಕೊಳ್ಳುವ ಹಾಗೆ ಹೊಡೆಯುತ್ತಾರೆ.. ನೀವು ಸಿನಿಮಾದಲ್ಲಿ ಇಂತಹ ಸೀನ್ ಗಳನ್ನ ನೋಡಿರುತ್ತೀರಾ.. ಆದರೆ ನಿಜ ಜೀವನದಲ್ಲಿ ಈ ಸೈನಿಕ ತನ್ನ ಪ್ರಾ’ಣ ಹೊತ್ತೆ ಇಟ್ಟು ಮೋನಿಕ ಅವರ ಮಾನ, ಪ್ರಾ’ಣವನ್ನ ಕಾಪಾಡಿದ್ದಾರೆ.. ನಂತರ ಈ ಕ’ಳ್ಳರನ್ನು ಮುಂದಿನ ಸ್ಟೇಷನ್ ನಲ್ಲಿ ಪೋಲಿಸರು ಸೆರೆಹಿಡಿದಿದ್ದಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..