Advertisements

ವಿಷ್ಣುವರ್ಧನ್ ಮನೆಗೆ ಬಂದ ಅಂಬರೀಶ್ ಅವರು ಗುಂಡು ತುಂಡು ಏನು ಇಲ್ವೇನಯ್ಯಾ ಅಂಥ ಕೇಳಿದಕ್ಕೆ ವಿಷ್ಣು ಅವರು ಏನ್ ಮಾಡಿದ್ರು ಗೊತ್ತಾ?

Cinema

ಭಾರತೀಯ ಸಿನಿರಂಗದಲ್ಲಿದ್ದ ಸೂಪರ್ ಸ್ನೇಹಿತರು ಅಂದ್ರೆ ಒಮ್ಮೆಲೇ ನೆನಪಿಗೆ ಬರೋದು ನಮ್ಮ ಸ್ಯಾಂಡಲ್‌ವುಡ್‌ನ. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್. ಇವರಿಬ್ಬರ ಸ್ನೇಹ ಅದೆಷ್ಟು ಗಾಢವಾಗಿತ್ತು, ಅದೆಷ್ಟು ಶುದ್ಧವಾಗಿತ್ತು, ಅದೆಷ್ಟು ಅರ್ಥಗರ್ಬಿತವಾದ ಭಾಂದವ್ಯ ಇವರಿಬ್ಬರೆಂದು ಎಂಬುವುದಕ್ಕೂ ವಿಷ್ಣುವರ್ಧನ್ ಅವರು ಹೇಳಿದ ಈ ಒಂದು ಮಾತು ಸಾಕು, ಅಷ್ಟಕ್ಕೂ ವಿಷ್ಣುವರ್ಧನ್ ಅವರು ಸಂದರ್ಶನವೊಂದರಲ್ಲಿ ಹೇಳಿದ ಮಾತೇನು ಗೊತ್ತಾ.. ಸಾಹಸಸಿಂಹನ ಆ ಸ್ನೇಹಭರಿತ ಮಾತನ್ನು ಹೇಳ್ತಾ ಹೋಗ್ತೀವಿ
ಕನ್ನಡದ ಅದೆಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿ ಈ ಇಬ್ಬರು ದಿಗ್ಗಜರು ಮಾಸದ ನಕ್ಷತ್ರವಾಗಿದ್ದಾರೆ, ನಾಗರಹಾವಿನ ರಾಮಾಚಾರಿಯಾಗಿ ವಿಷ್ಣು ಮೀಸೆ ಚಿಗುರಿದ ಯುವಕನ ಲುಕ್‌ನಲ್ಲಿ ಎಲ್ಲರ ಮನಸ್ಸು ಕದ್ರೆ ವಿಲನ್ ಕ್ಯಾರೆಕ್ಟರ್‌ನಲ್ಲಿ ಸಿನಿ ಲೋಕಕ್ಕೆ ಎಂಟ್ರಿ ಮಂಡ್ಯದ ಗಂಡು ಎಲ್ಲರ ನೆಚ್ಚಿನ ಅಣ್ಣನಾದ್ರು..

[widget id=”custom_html-3″]

Advertisements

ಈ ಇಬ್ಬರ ವ್ಯಕ್ತಿತ್ವ ಸಹ ಒಬ್ಬರಿಗಿಂತ ಒಬ್ಬರದ್ದು ತದ್ವಿರುದ್ಧವೇ. ವಿಷ್ಣು ಸೌಮ್ಯ ಸ್ವಭಾವದ ಶಾಂತಮೂರ್ತಿಯಾದರೇ , ಅಂಬಿ ರೆಬೆಲ್ ವ್ಯಕ್ತಿತ್ವದ ಒರಟು ಧನಿಯ ಮುಗ್ದ ಮನಸ್ಸು.
ಇವರಿಬ್ಬರು ಜೊತೆಯಾಗಿ ಅಭಿನಯಿಸಿದ ದಿಗ್ಗಜರು ಸಿನಿಮಾ ಕಂಡು ಶಿಳ್ಳೆ ಹೊಡೆದದ್ದು, ಲಕ್ಷ ಲಕ್ಷ ಅಭಿಮಾನಿ ಬಳಗ, ಕುಚಿಕು ಕುಚಿಕು ಸಾಂಗ್‌ನಲ್ಲಿ ಈ ನಿಜವಾದ ಕುಚಿಕುಗಳ ಬಾಂಧವ್ಯ ಕಂಡು ಚಪ್ಪಾಳೆ ಹೊಡೆದದ್ದು ಕೋಟಿ ಕೋಟಿ ಕನ್ನಡಿಗರು. ಹೌದು ಭಾರತೀಯ ಸಿನಿರಂಗದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಈ ಲೆಜೆಂಡರಿ ಕಲಾವಿದರಿಬ್ಬರ ಸ್ನೇಹ ಇಡೀ ಇಂಡಸ್ಟ್ರಿಯೇ ನೋಡಿ ಹೊಗಳುವಂತಿತ್ತು, ಖುಷಿಪಡುವಂತಿತ್ತು.

[widget id=”custom_html-3″]


ಇಬ್ಬರು ಸೂಪರ್ ಹಿಟ ನಟರು ಇಷ್ಟೊಂದು ಅನ್ನೋನ್ಯವಾಗಿದ್ದು ಬಹುಷಃ ವಿಷ್ಣುವರ್ದನ್, ಅಂಬರೀಶ್ ಅವರ ಬಿಟ್ಟರೇ ಯಾರು ಇಲ್ಲವೇನೋ ಎಂದರೆ ಅತಿಶಯೋಕ್ತಿಯಾಗಲ್ಲ ಎನಿಸುತ್ತೆ.
ಇನ್ನು ವಿಷ್ಣುವರ್ಧನ್ ಅವರು ಸಂದರ್ಶನವೊಂದರಲ್ಲಿ ಅಂಬಿ ಮತ್ತು ತನ್ನ ನಡುವಣ ಇರುವ ಪವಿತ್ರ ಸ್ನೇಹದ ಬಗ್ಗೆ ಮಾತನಾಡಿದ್ದು, ನಾನು ಈ ಬದುಕಿನ ಪಯಾಣ ಮುಗಿಸಿದಾಗ ಅಂಬಿ ಎಲ್ಲಿದ್ದರೂ ಬರುತ್ತಾರೆ, ಅದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ, ನನ್ನ ಹೆ’ಣ’ಕ್ಕೆ ಅಂಬಿ ಹೆಗಲು ಕೊಡ್ತಾರೆ ಎಂಬ ನಂಬಿಕೆಯಿದೆ ಎಂದಿದ್ದರು. ಅದರಂತೆ ವಿಷ್ಣು ಅಕಾಲಿಕ ನಿ’ಧನದಿಂದ ಇಡೀ ಕನ್ನಡ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿತ್ತು, ಆ ವೇಳೆ ವಿಷ್ಣುವರ್ಧನ್ ಅವರ ಪಾ’ರ್ಥಿ’ವ ಶರೀರ ಕಂಡು ಮಗುವಿನಂತೆ ಅಂಬಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

[widget id=”custom_html-3″]


ಇನ್ನು ಇವರಿಬ್ಬರ ಮಧುರು ಸ್ನೇಹಕ್ಕೆ ಮತ್ತೊಂದು ಉದಾಹರಣೆಯಿದೆ, ಅಂಬರೀಶ್ ಅವರು ಯಾವಾಗಲು ವಿಷ್ಣುವರ್ಧನ್ ಅವರ ಮನೆಗೆ ಹೋಗಿ ಬರುತ್ತಿದ್ದರಂತೆ, ನೆನಪಾದಾಗೆಲ್ಲ ವಿಷ್ಣು ಮನೆಗೆಹೋಗಿ ಭೇಟಿ ಮಾಡಿ ಬರುತ್ತಿದ್ದರು. ಒಂದು ದಿನ ಹೀಗೆ ಸುಮ್ಮನೆ ತಮಾಷೆಗೆ ಹೇಳ್ತಾರಂತೆ ನಿನ್ನ ಮನೆಯಲ್ಲಿ ಗುಂಡು ತುಂಡು ಇಲ್ವೆನೆಯ್ಯಾ ಅಂತ, ಆಗ ವಿಷ್ಣುವರ್ಧನ್ ಅವರು ಅಂಬರೀಶ್‌ಗಾಗಿ ತನ್ನ ಮನೆಯಲ್ಲಿ ಬಾರ್ ಕೌಂಟರ್ ಒಂದನ್ನು ಓಪನ್ ಮಾಡ್ತಾರಂತೆ..

ಪ್ರಿಯ ಓದುಗರೇ ನಿಮ್ಮೆಲ್ಲರಿಗೂ ಗೊತ್ತಿರಬಹುದು ವಿಷ್ಣುವರ್ಧನ್ ಅವರು ಡ್ರಿಂಕ್ಸ್ ಮಾಡ್ತಾ ಇರಲಿಲ್ಲ. ಕೇವಲ ತನ್ನ ಗೆಳೆಯ ಹೇಳಿದ ಅಂತ ಮನೆಯಲ್ಲಿಯೇ ಒಂದು ಬಾರ್ ಕೌಂಟರ್‌ನ್ನೇ ಓಪನ್ ಮಾಡಿಬಿಟ್ಟು ಅಂದ್ರೆ ನೀವೆ ಅರ್ಥ ಮಾಡಿಕೊಳ್ಳಿ, ಅಂಬಿ ವಿಷ್ಣು ನಡುವಣ ಭಾಂದವ್ಯ ಎಂತದ್ದು ಅಂತ. ಅದೇನೇ ಇರಲಿ ಈ ಇಬ್ಬರು ದಿಗ್ಗಜರ ಭಾಂದವ್ಯ ಇಂದಿನ ಯುವ ತಲೆಮಾರುಗಳಿಗೆ ಸ್ಪೂರ್ತಿಯಾಗಿರಬೇಕು, ವಿಷ್ಣು ಅಂಬಿಯಂತೆಯೇ ಸ್ನೇಹಕ್ಕೆ ಗೌರವ ಕೊಟ್ಟು ಬದುಕುವುದನ್ನು ಕಲಿಯಬೇಕು ಎಂಬುವುದೇ ನಮ್ಮ ಆಶಯ..