Advertisements

ಅಂದು ಒಬ್ಬ ವಿದೇಶಿ ಮಹಿಳಾ ಪತ್ರಕರ್ತೆ ನಮ್ಮ ದೇಶಕ್ಕೆ ಬಂದು ವಿಷ್ಣುವರ್ಧನ್ ಬಗ್ಗೆ ಏನೆಲ್ಲಾ ಬರೆದಿದ್ದಳು ಗೊತ್ತಾ?

Cinema

ಸಾಹಸಸಿಂಹ ವಿಷ್ಣುವರ್ಧನ್ ಅವರ ಬದುಕಿನ ಸಾಹಸಗಾಥೆಯ ಸಂಕ್ಷಿಪ್ತ ನೋಟ ನಿಮ್ಮ ಮುಂದೆ. ದಾದ, ಸಾಹಸಸಿಂಹ, ಅಂತೆಲ್ಲ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಜನಿಸಿದ್ರು. ಇವರ ತಂದೆ ತಾಯಿ ಮಂಡ್ಯ ಮೂಲದವರು. ವಿಷ್ಣುವರ್ಧನ್ ಅವರ ತಂದೆ ಸಂಗೀತ ಸಂಯೋಜಕರಾಗಿದ್ದರು. ಇನ್ನು ವಿಷ್ಣುವಿಗೆ ಚಾಲೆಂಜಸ್ ಅಂದ್ರೆ ಬಹಳ ಇಷ್ಟವಂತೆ, ಒಂದುವೇಳೆ ಸಿನಿರಂಗಕ್ಕೆ ವಿಷ್ಣು ಎಂಟ್ರಿ ಕೊಡದೇಯಿದ್ದರೇ ಆರ್ಮಿಗೆ ಸೇರ್ತಿದ್ದೆ ಅಂತ ಖುದ್ದು ವಿಷ್ಣುವರ್ಧನ್ ಅವರೇ ಹೇಳಿಕೊಂಡಿದ್ದಾರೆ. ಇನ್ನು ವಿಷ್ಣು ಅಭಿನಯದ ನಾಗರಹಾವು ಸಿನಿಮಾ ಈಗಲೂ ಸಹ ಜನಮನ್ನಣೆಗೆ ಪಾತ್ರವಾಗಿದೆ.

[widget id=”custom_html-3″]

Advertisements

ಆಗಿನ ಕಾಲದಲ್ಲಿಯೇ ಮಾಸ್​​ ಟಚ್ ಇರುವ ಕಥಾಹಂದರ ಅದೆಷ್ಟೋ ಅಭಿಮಾನಿಗಳಿಗೆ ಸಿನಿಮಾ ಗೀಳಿಗೆ ಬೀ’ಳುವಂತೆ ಮಾಡಿತ್ತು. ಚಿಗುರು ಮೀಸೆ ಹುಡುಗನ ಕೋಪದ ಮಾತು, ಆ್ಯಂಗ್ರಿ ಯಂಗ್ ಮೇನ್ ಅಂತಾನೇ ಫೇಮಸ್ ಆಗುವಷ್ಟಾಗಿತ್ತು. ಇನ್ನು ನಾಗರಹಾವು ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ವಿಷ್ಣು ಸೈ ಅನಿಸಿಕೊಂಡ್ರು. ಸಾಹಸಸಿಂಹ ಸಿನಿಮಾದ ಮನೋಜ್ಞ ಅಭಿನಯಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಅಂತಾನೇ ಫೇಮಸ್ ಆದ್ರು.. ಇನ್ನು ಲೆಜೆಂಡ್ ಕಲಾವಿದೆಯರಾದ ಆರತಿ, ಭಾರತಿ, ಮಂಜುಳಾ, ಸುಹಾಸಿನಿ ಜೊತೆಗೆ ಸಾಲು ಸಾಲು ಸಿನಿಮಾಗಳಲ್ಲಿ ಸಹ ವಿಷ್ಣು ಅಭಿನಯಿಸಿದ್ರು. ಮುಂದೆ ಗಂಧದಗುಡಿ ಸಿನಿಮಾ ಮುಖೇನ ಅಣ್ಣವರ ಜೊತೆಗೆ ಸಹ ಬಣ್ಣ ಹಚ್ಚಿದ್ರು.

[widget id=”custom_html-3″]

ಆದ್ರೆ ಗಂಧದಗುಡಿ ಸಿನಿಮಾ ಸೆಟ್​​ನಲ್ಲಿ ಆದ ಒಂದು ಯಡವಟ್ಟು ಬಹುಷಃ ವಿಷ್ಣು ಬದುಕಿನಲ್ಲಿ ಒಂದು ಮರೆಯಲಾಗದ ನೋವು ತಂದುಕೊಡ್ತು. ಒಂದು ಗುಂಪಿನ ಜನ ವಿಷ್ಣುವರ್ಧನ್ ಅವರನ್ನು 2 ದಶಕಗಳ ಕಾಲ ಧ್ವೇಷಿಸಿದ್ರು. ವಿಷ್ಣುವರ್ಧನ್ ಭಾರತಿ ಮದುವೆಯ ಸಂದರ್ಭದಲ್ಲಿಯೂ ಸಹ ಆ ಗುಂಪು ವಿಷ್ಣುವಿಗೆ ಸ’ಮ’ಸ್ಯೆಯುಂಟುಮಾಡಿತ್ತು. 200 ಸಿನಿಮಾಗಳಲ್ಲಿ ಅಭಿನಯಿಸಿದ ವಿಷ್ಣುವರ್ಧನ್ ಕೊನೆಯ ಭಾರೀ ಆಪ್ತರಕ್ಷಕ ಸಿನಿಮಾಗೆ ಬಣ್ಣ ಹಚ್ಚಿದ್ರ., ಅವರ ಮ’ರ’ಣದ ನಂತರ ಈ ಚಿತ್ರ ತೆರೆಗಪ್ಪಳಿಸಿತ್ತು. ಸಾ’ಯು’ವ ವಯಸ್ಸಲ್ಲದಿದ್ದರೂ ವಿಷ್ಣು ಹಾರ್ಟ್ ಅಟ್ಯಾಕ್​ಯಿಂದ ಮನೆಯಲ್ಲಿಯೇ ಉ’ಸಿ’ರುಚೆಲ್ಲಿದ್ರು.

[widget id=”custom_html-3″]

ಇನ್ನು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಿದ ಕನ್ನಡದ ಹೆಮ್ಮೆಯ ನಟನಿಗೆ ಇಂದಿಗೂ ಒಂದು ಪೂರ್ಣವಾದ ಭವ್ಯ ಸ್ಮಾರಕ ಇರದೇಯಿರುವುದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ಇನ್ನು ವಿಷ್ಣುವಿನ ನೆನಪಲ್ಲಿ ಬನಶಂಕರಿಯಿಂದ ಕೆಂಗೇರಿಯವರೆಗೆ 14ಕಿಲೋಮೀಟರ್ ರಸ್ತೆ ಸಹ ನಿರ್ಮಾಣವಾಗಿದ್ದು, ಏಷ್ಯಾದಲ್ಲಿಯೇ ಒಬ್ಬ ನಟನ ಹೆಸರಲ್ಲಿ ಇಷ್ಟುದ್ದ ರಸ್ತೆ ನಿರ್ಮಾಣ ಆಗಿರೋದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಅದೇ ರೀತಿ ವಿದೇಶಿ ಮಹಿಳೆ ಪತ್ರಕರ್ತೆ ವಿಷ್ಣುವರ್ಧನ್ ಅವರ ಜೀವನದ ಬಗ್ಗೆ ಬರೆದು ಆಡಿ ಹೊಗಳಿದ್ದರು.. ಅಷ್ಟೇ ಅಲ್ಲದೇ ಭಾರತದಲ್ಲಿ ನಿಮಗೆ ಸಿಗುವ ಅದ್ಬುತ ನಟ ಅಂದರೆ ಅದು ವಿಷ್ಣುವರ್ಧನ್ ಎಂದಿದ್ದರು ವಿದೇಶಿ ಪತ್ರಕರ್ತೆ.