Advertisements

ವಿಷ್ಣುದಾದಾ ಅಭಿಮಾನಿಗಳು ಯಶ್ ಸುದೀಪ್ ಮೇಲೆ ಗರಂ ಆದ್ರಾ.!ಬಯಲಾದ್ವು ಅಸಲಿ ಮುಖಗಳು..

Cinema

ನಮಸ್ತೆ ಸ್ನೇಹಿತರೇ, ಕನ್ನಡ ಸಿನಿಮಾರಂಗದ ಮೇರು ನಟರಲ್ಲಿ ಒಬ್ಬರು ನಮ್ಮ ಡಾ. ವಿಷ್ಣುವರ್ಧನ್ ಅಪ್ಪಾಜಿ ಅವರು. ಹೌದು ವಿಷ್ಣು ಸರ್ ಅವರಿಗೆ ಇಂದಿಗೂ ಕೂಡ ಅಪಾರ ಅಭಿಮಾನಿ ಬಳಗ ಇದೆ. ಒಂದು ಚೂರು ಕೂಡ ಅವರ ಫ್ಯಾನ್ ಬೇಸ್ ಕಡಿಮೆ ಆಗಿಲ್ಲ. ಅವರದ್ದೇ ಆದ ಪ್ಯಾನ್ ಫಾಲೋಯಿಂಗ್ ಇದ್ದು ವಿಷ್ಣುವರ್ಧನ್ ಅವರ ತತ್ವಗಳನ್ನ ಅವರ ಮಾತುಗಳನ್ನು ಇಂದಿಗೂ ಕೂಡ ಪಾಲಿಸುತ್ತಾರೆ. ದೇವರಂತೆ ವಿಷ್ಣುವರ್ಧನ್ ಅವರನ್ನು ಪೂಜೆ ಮಾಡುತ್ತಾರೆ. ಹೌದು ವಿಷ್ಣು ಅವರನ್ನು ಪ್ರೀತಿಯ ಅಭಿಮಾನಿಗಳು ಹಾಗೂ ಕನ್ನಡದ ಜನತೆ ದಾದಾ ಎಂದೇ ಕರೆಯುವುದು ವಿಶೇಷ.. ವಿಷ್ಣುವರ್ಧನ್ ಅವರ ಬಗ್ಗೆ ಹೇಳುತ್ತಾ ಹೋದರೆ ತುಂಬಾನೇ ಇದೆ..ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಅವರು ಹೆಚ್ಚು ಕೊಡುಗೆ ನೀಡಿ ಹೋಗಿದ್ದಾರೆ ಎನ್ನಬಹುದು. ವಿಷ್ಣುವರ್ಧನ್ ಅವರಂತಹ ಇನ್ನೊಬ್ಬ ನಾಯಕ ನಟ ಈ ಕನ್ನಡದ ಮಣ್ಣಲ್ಲಿ ಮತ್ತೆಂದು ಹುಟ್ಟಿ ಬರುವುದಕ್ಕೆ ಸಾಧ್ಯವೆ ಇಲ್ಲ. ಅವರ ಸರಳತನ, ಅವರು ಅಭಿನಯ ಮಾಡುವ ರೀತಿ, ಅವರು ನಡೆದುಕೊಳ್ಳುತ್ತಿದ್ದ ಪ್ರತಿಯೊಬ್ಬ ಅಭಿಮಾನಿ ಜೊತೆ ಮಾತು, ಎಲ್ಲವೂ ಕೂಡ ಇನ್ನೂ ಕಣ್ಣ ಮುಂದೆ ಹಾಗೆಯೇ ಇದೆ. ವಿಷ್ಣುವರ್ಧನ್ ಅಭಿಮಾನಿ ಬಳಗ ಅದೆಷ್ಟರಮಟ್ಟಿಗೆ ದೊಡ್ಡದು ಎಂದರೆ ಇನ್ನೂ ನೂರು ವರ್ಷ ಹೋದರೂ ಸಹ ವಿಷ್ಣು ಅವರ ಹೆಸರು ಒಂದು ಚೂರು ಅಳೆಯುವುದಿಲ್ಲ. ಅವರ ಅಭಿಮಾನಿಗಳು ಅಂದಿಗೂ ಕೂಡ ವಿಷ್ಣುವರ್ಧನ್ ಅವರಿಗೆ ಜೈಕಾರ ಹಾಕುತ್ತಾರೆ. ಅಷ್ಟು ಅಭಿಮಾನಿ ಅವರ ಮೇಲೆ ಇರುತ್ತದೆ. ಈ ಸೆಪ್ಟೆಂಬರ್ 18 ಅಂದ್ರೆ ಪ್ರತಿ ವರ್ಷ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ.

Advertisements

ಹಾಗೆ ಸಂತಸದ ಕ್ಷಣ ಎನ್ನಬಹುದು. ಕಾರಣ ವಿಷ್ಣುವರ್ಧನ್ ಅವರ ಹುಟ್ಟಿದ ದಿನ ಅದೇ ಸೆಪ್ಟಂಬರ್ 18.. ಇತ್ತೀಚಿಗೆ ಅವರ ಪ್ರೀತಿಯ ಅಭಿಮಾನಿಗಳು ಸೆಪ್ಟೆಂಬರ್ 18ನೇ ತಾರೀಕು ಅವರ 72 ನೆಯ ಜನ್ಮದಿನವನ್ನು ಅದ್ದೂರಿಯಾಗಿ ಗೌರವದಿಂದ ಆಚರಣೆ ಮಾಡಿದ್ದಾರೆ. ಸುಮಾರು 50 ದೊಡ್ಡ ವಿಷ್ಣು ಸರ್ ಅವರ ಕಟೌಟ್ ನಿಲ್ಲಿಸಿ ಈ ಬಾರಿ ಹುಟ್ದಬ್ಬವನ್ನ ಅಭಿಮಾನ ಸ್ಟುಡಿಯೋ ಮುಂಭಾಗದಲ್ಲಿ ಆಚರಿಸಿದ್ದಾರೆ. ವಿಷ್ಣುವರ್ಧನ್ ಅವರ ಪುಣ್ಯ ಭೂಮಿಯಲ್ಲಿ ಹುಟ್ಟು ಹಬ್ಬವನ್ನು ಮಾಡುವಾಗ ಅಭಿಮಾನಿಗಳು ಅವರ ಪ್ರೀತಿಯ ನಾಯಕನ ಕುರಿತಾಗಿ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡರು. ಹಾಗೆ ಕಣ್ಣೀರು ಹಾಕಿದ್ದಾರೆ.ಪ್ರತಿಬಾರಿ ಅವರ ಹುಟ್ಟು ಹಬ್ಬದ ದಿನದಂದು ಇದೆ ಆಗುತ್ತದೆ ಅದೊಂದು ಅಸಮದನಕಾರ ಸಂಗತಿ ಅಭಿಮಾನಿಗಳ ಮನದಲ್ಲಿ ಆ ಕಾರ್ಯ ಆಗುವ ತನಕ ಇದ್ದೇ ಇರುತ್ತದೆ. ಹೌದು ನಮ್ಮ ವಿಷ್ಣು ದಾದಾ ಅವರ ಸ್ಮಾರಕವನ್ನು ಅವರು ತೀರಿ ಹನ್ನೆರಡು ವರ್ಷವಾದರೂ ಕೂಡ ಇನ್ನೂ ಮಾಡುತ್ತಿಲ್ಲ. ಅವರ ಹೆಸರನ್ನು ಹೇಳಿಕೊಂಡು ತುಂಬಾ ಜನರು ಬೆಳೆದಿದ್ದಾರೆ. ಅವರ ಸ್ಮಾರಕ ನಿರ್ಮಾಣದ ಕುರಿತಾಗಿ ಕೈಜೋಡಿಸದವರ ವಿರುದ್ಧ ಅಭಿಮಾನಿಗಳು ಇದೀಗ ಕಿಡಿ ಕಾರಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ಯಶ್ ಅವರು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾವನ್ನು ಮಾಡಲಿಲ್ಲ ಎಂದಿದ್ದರೆ, ಇಂದಿಗೆ ಕೆ.ಜಿ.ಎಫ್. ಸಿನಿಮಾವನ್ನು ಅವರು ಮಾಡಲು ಕೂಡ ಅಸಾಧ್ಯವಾಗಿತ್ತು. ಹಾಗೆ ರಾಮಾಚಾರಿ ಸಿನಿಮಾ ಹಿಟ್ ಆಗದೆ ಇದ್ದಿದ್ದರೆ ಯಶ್ ಅವರನ್ನು ಯಾರು ಗುರುತಿಸುತ್ತಿರಲಿಲ್ಲ..

ನಮ್ಮ ವಿಷ್ಣುದಾದ ಅವರ ಹೆಸರನ್ನು ಬಳಸಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ನಟ ಯಶ್ ಅವರು ಬೆಳೆದಿದ್ದಾರೆ. ಹೀಗೆಲ್ಲಾ ಮಾಡುವವರು ನಿಜ ಉದ್ದಾರ ಆಗ್ತಾರಾ, ನಮ್ಮ ಬಾಸ್ ದಾದ ಸಿಂಹ ಅವರ ಹುಟ್ಟುಹಬ್ಬಕ್ಕೆ ಒಂದು ಶುಭಾಶಯ ತಿಳಿಸುವುದಿಲ್ಲ ಯಶ್. ಹಾಗೆ ಅವರ ಅಧಿಕೃತ ಖಾತೆಗಳಲ್ಲಿ ವಿಷ್ಣುಸಾರ್ ಅವರ ಬಗ್ಗೆ ಒಂದು ಜನ್ಮದಿನದ ಪೋಸ್ಟ್ ಹಾಕಲು ಸಹ ಅವರ ಕೈಯಲ್ಲಿ ಆಗುವುದಿಲ್ಲ. ಅದನ್ನು ಬಿಟ್ಟು ಸೈಮಾಗೆ ಹೋಗಲು ಅವರ ಬಳಿ ಸಮಯ ಇರುತ್ತದೆ..ಹಾಗೆ ಹೀಗೆ ಎಂದು ಯಶ್ ಅವರ ವಿರುದ್ಧ ವಿಷ್ಣುವರ್ಧನ್ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಾಗೆ ವಿಷ್ಣುವರ್ಧನ್ ದಾದಾ ಎಂದಿಗೂ ಯಾರ ಹೆಸರನ್ನು ಬಳಸಿಕೊಂಡು ಬೆಳೆದಿಲ್ಲ ಇನ್ನೊಬ್ಬರ ಹಾಗೆ, ಒಬ್ಬರು ಅವರ ಅಚ್ಚೆಯನ್ನು ಎದೆ ಮೇಲೆ ಹಾಕಿಸಿಕೊಂಡು ಅವರ ಹೆಸರನ್ನು ಉಪಯೋಗಿಸಿ ಬೆಳಕಿಗೆ ಬಂದರೆ, ಇನ್ನೊಬ್ಬರು ಸಿಂಹದ ಆಶೀರ್ವಾದ ಇದ್ದರೆ ಏನು ಬೇಕಾದರೂ ಮಾಡಬಹುದು ಎಂದು ಡೈಲಾಗ್ ಹೊಡೆಯುವ ಮೂಲಕ ಗುರುತಿಸಿಕೊಂಡ ಆ ನಟರಿಗೆ ಈ ರೀತಿ ಟಾಂಗ್ ನೀಡಿದ್ದಾರೆ ವಿಷ್ಣುವರ್ಧನ್ ಅಭಿಮಾನಿಗಳು…ಹಾಗೆ ಇನ್ನೊಬ್ಬ ಅಭಿಮಾನಿ ತುಂಬಾ ನೋವಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಈ ನನ್ನ ಮನವಿ ಎಂದಿದ್ದು, ನೀವು ಆದಷ್ಟು ಬೇಗ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಕಟ್ಟಿಸಿ, ಮುಂದಿನ ಬಾರಿಯೂ ಕೂಡ ನೀವೇ ಮುಖ್ಯಮಂತ್ರಿ ಆಗಿರುತ್ತೀರಿ ಇದು ದಾದ ವಿಷ್ಣುವರ್ಧನ್ ಅವರ ಅಭಿಮಾನಿಗಳ ಮಾತು ಎಂದು ಹೇಳಿದ್ದಾರೆ. ಹಾಗೆ ದಾದ ಅವರ ಅಭಿಮಾನಿಗಳ ಬಳಗದ ಶಕ್ತಿ ಏನು ಎಂಬುದಾಗಿ ಈ ಮೂಲಕ ನಾವು ತೋರಿಸುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಪರೋಕ್ಷವಾಗಿ ಆಗಿ ನಟ ಸುದೀಪ್ ಅವರಿಗೆ ಮತ್ತು ಯಶ್ ಅವರಿಗೆ ಅವರ ಹೆಸರನ್ನು ಬಳಸಿ ನೀವು ಬೆಳದಿರಾ ಇಂದಿಗೆ ವಿಷ್ಣು ಸಾರ್ ಸ್ಮಾರಕದ ವಿಚಾರಕ್ಕೆ ಸ್ವಲ್ಪವೂ ನೀವು ತಲೆ ಕೂಡ ಹಾಕುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ..