Advertisements

ಇಂದಿಗೂ ದರ್ಮಸ್ಥಳದಲ್ಲಿರುವ ವಿಷ್ಣುವರ್ಧನ್ ಅವರ ಕಾರು.. ಅಸಲಿ ಕಾರಣ ಏನು ಗೊತ್ತಾ? ನೀವೇ ನೋಡಿ..

Cinema

ನಮಸ್ತೇ ಸ್ನೇಹಿತರೆ, ಸಾಹಸಸಿಂಹ ವಿಷ್ಣುವರ್ಧನ್ ನಮ್ಮನ್ನು ಭೌತಿಕವಾಗಿ ನಮ್ಮ ಜೊತೆ ಇಲ್ಲದೇ ಇದ್ದರೂ ಅವರ ನೆನಪುಗಳು ಮಾತ್ರ ಕನ್ನಡಿಗರ ಮನದಲ್ಲಿ ಸ್ಥಿರವಾಗಿ ನೆಲೆಸಿವೆ.. ತಮ್ಮ ಹಲಾವರು ಸಿನಿಮಾಗಳ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಕೂಡ ವಿಶಾಲ ಹೃದಯವಂತರಾಗಿದ್ದರು‌.. ಸಹನೆ ತಾಳ್ಮೆಯನ್ನು ಮೈಗೂಡಿಸಿಕೊಂಡಿದ್ದರು. ಧಾನ ಧರ್ಮಗಳನ್ನು ಯಾರಿಗೂ ತಿಳಿಯದಂತೆ ಮಾಡುವ ಸರಳ ವ್ಯಕ್ತಿ ಎನಿಸಿಕೊಂಡಿದ್ದರು.. ಇನ್ನೂ ಆಧ್ಯಾತ್ಮದಲ್ಲಿಯೂ ಕೂಡ ವಿಷ್ಣುವರ್ಧನ್ ಅವರು ಅಪಾರ ಒಲವು ಹೊಂದಿದ್ದರು.

Advertisements

ಹಲವು ಧರ್ಮ ಗುರು ಒಡನಾಟವನ್ನು ಬೆಳೆಸಿಕೊಂಡಿದ್ದ ವಿಷ್ಣುವರ್ಧನ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರೊಂದಿಗೆ ತುಂಬಾ ಆಪ್ತತೆ ಹೊಂದಿದ್ದರು.. ಇನ್ನೂ ಡಾ.ವೀರೇಂದ್ರ ಹೆಗ್ಗಡೆಯವರು ಕೂಡ ವಿಷ್ಣುವರ್ಧನ್ ಅವರೆಂದರೆ ತುಂಬಾ ಅಭಿಮಾನ, ಪ್ರೀತಿ, ಗೌರವ ಬೆಳೆಸಿಕೊಂಡಿದ್ದರು.. ಈಗೆ ಒಮ್ಮೆ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಮ್ಯೂಸಿಯಂ ತೆರೆಯುವ ಬಗ್ಗೆ ವಿಷ್ಣುವರ್ಧನ್ ಬಳಿ ಹೇಳಿದ್ದರು. ತಕ್ಷಣವೇ ವಿಷ್ಣುವರ್ಧನ್ ಅವರು ಏನು ಆಲೋಚಿಸದೇ ತಮ್ಮ ಕೆ.ಎ 04 ನಂಬರಿನ ಜಪಾನ್ ಡಾಟ್ಸನ್ ಕಂಪನಿಯ ಕಾರನ್ನು ಮ್ಯೂಸಿಯಂಗೆ ಕೊಡುಗೆಯಾಗಿ ನೀಡುತ್ತಾರೆ.

ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ನೇಹದ ಗುರುತಾಗಿರುವ ವಿಷ್ಣುವರ್ಧನ್ ಅವರ ಕಾರು ಇಂದಿಗೂ ಧರ್ಮಸ್ಥಳ ಮ್ಯೂಸಿಯಂ ನಲ್ಲಿ ಉಳಿದಿದೆ.. ಸಾಹಸಸಿಂಹ ವಿಷ್ಣುವರ್ಧನ್ ಅವರ ಕಾರನ್ನು ಇಂದಿಗೂ ನೋಡಲು ಅಭಿಮಾನಿಗಳಿಗೆ ಅವಕಾಶ ಕಲ್ಪಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ವಿಷ್ಣುವರ್ಧನ್ ಅವರ ಅಭಿಮಾನಿಗಳ ಪರವಾಗಿ ಹೃದಯ ಪೂರ್ವಕ ನಮನಗಳು.. ಸಾಹಸಸಿಂಹ ವಿಷ್ಣುವರ್ಧನ್ ಅವರ ಕಾರನ್ನು ಧರ್ಮಸ್ಥಳದ ಮ್ಯೂಸಿಯಂನಲ್ಲಿ ಯಾರೆಲ್ಲಾ ನೋಡಿದ್ದೀರಾ ತಿಳಿಸಿ.