Advertisements

ಡಾ.ವಿಷ್ಣುವರ್ಧನ್ 2 ಮಕ್ಕಳು, ಅಳಿಯ ಈಗ ಏಗಿದ್ದಾರೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ಅಭಿನಯ ಭಾರ್ಗವ, ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಹೆಸರು ಕೇಳಿದ್ರೆ ಸಾಕು ಈಗಲೂ ಮೈ ಮನ ರೋಮಾಂಚನಗೊಳ್ಳುತ್ತೆ, ನಾಗರಹಾವು ಸಿನಿಮಾದಲ್ಲಿ ಕುಡಿಮೀಸೆ ಹುಡುಗನ ಅಭಿನಯಕ್ಕೆ ಸೋಲದವರಿಲ್ಲ. ಅದೆಷ್ಟೇ ದಶಕಗಳು ಕಳೆದ್ರೂ ವಿಷ್ಣುವರ್ಧನ್ ಅವರ ಅಭಿನಯ ಮಾತ್ರ ಇಂದಿಗೂ ಜೀವಂತ, ಎಂದೆಂದಿಗೂ ಅವಿಸ್ಮರಣೀಯ. ಡಾಕ್ಟರ್ ವಿಷ್ಣುವರ್ಧನ್ ಅವ್ರು ಸೆಪ್ಟೆಂಬರ್ 18, 1950ರಂದು ಮೈಸೂರಿನಲ್ಲಿ, ನಾರಾಯಣ್ ರಾವ್,ಕಂಸಮ್ಮ ದಂಪತಿಗಳ ಮಡಿಲಲ್ಲಿ ಜನಿಸ್ತಾರೆ, ತನ್ನ ಪ್ರಾಥಮಿಕ ಶಾಲೆಯನ್ನು ಮೈಸೂರಿನಲ್ಲಿಯೇ ಮುಗಿಸಿ ಪ್ರೌಢ ಹಾಗೂ ಪದವಿಯನ್ನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸ್ತಾರೆ.
ಸಾಮಾನ್ಯವಾಗಿ ಎಲ್ಲ ಮಕ್ಕಳಂತೆ ಬೆಳೆದ ವಿಷ್ಣುವರ್ಧನ್ ಅವರ ಹುಟ್ಟಿನ ಹೆಸರು ಸಂಪತ್ ಕುಮಾರ್, ಸಂಪತ್ ಕುಮಾರ್ ವಿಷ್ಣುವಾಗಿ ಸಿನಿರಂಗದಲ್ಲಿ ಪ್ರಜ್ವಲಿಸಿದ ಪರಿ ನಿಜಕ್ಕೂ ಆದರ್ಶದಾಯಕ.

[widget id=”custom_html-3″]

Advertisements

ಅಷ್ಟಕ್ಕೂ ಸಂಪತ್ ಕುಮಾರ್ ಅವರ ಹೆಸರನ್ನು ಬದಲಾಯಿಸಿದ್ದೂ ಯಾರು ಅಂತ ಕೇಳಿದ್ರೆ, ಅದು ಬೇರೆಯಾರು ಅಲ್ಲ, ಕನ್ನಡದ ಪ್ರಖ್ಯಾತ ನಿರ್ದೆಶಕರಾಗಿದ್ದ ಪುಟ್ಟಣ್ಣ ಕಣಗಾಲ್. ಹೌದು ಪುಟ್ಟಣ್ಣ ಕಣಗಾಲ್ ಅವರು ಸಂಪತ್ ಕುಮಾರ್‌ನನ್ನು ಸಿನಿರಂಗದಲ್ಲಿ ವಿಷ್ಣುವರ್ಧನನ್ನಾಗಿ ಪರಿಚಯಿಸ್ತಾರೆ. ಇನ್ನು ವಿಷ್ಣು ಅವರ ತಂದೆ ಸಂಗೀತ ನಿರ್ದೆಶಕರು ಹಾಗೂ ಕಲಾವಿದರಾದ್ದರಿಂದ ವಿಷ್ಣು ಅವರಿಗೂ ಸಹ ನಟನೆಯಲ್ಲಿ ಆಸಕ್ತಿ ಬೆಳೆಯಿತಂತೆ. ಕನ್ನಡವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಿಗೂ ಸಹ ವಿಷ್ಣು ಬಣ್ಣ ಹಚ್ಚಿದ್ದಾರೆ. ಕನ್ನಡದಲ್ಲಿ ಒಟ್ಟು 200ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿ ಸಾಲು ಸಾಲು ಹಿಟ್‌ಮೂವಿಗಳನ್ನು ಸಿನಿರಸಿಕರಿಗೆ ವಿಷ್ಣು ಉಣಬಡಿಸಿದ್ದಾರೆ. ನಂತರ ವಿಷ್ಣುವರ್ಧನ್ ಅವರು ಕನ್ನಡದ ಪ್ರಖ್ಯಾತ ನಟಿ ಭಾರತಿಯವರನ್ನು ವಿವಾಹವಾಗ್ತಾರೆ.

[widget id=”custom_html-3″]

ಪ್ರೀತಿಸಿ ಮದುವೆಯಾದ ಈ ಜೋಡಿಗೆ ಹಲವು ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ. ಹೀಗಾಗಿ ಈ ಜೋಡಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಳ್ತಾರೆ. ಇವರ ಮೊದಲನೇ ಮಗಳು ಕೀರ್ತಿ,ಎರಡನೆಯ ಮಗಳು ಚಂದನ, ಚಂದನ ಅವರು ಮಾಧ್ಯಮಗಳಿಂದ ಸಿನಿಮಾ ರಂಗದಿಂದ ಬಹಳ ದೂರಾನೇ ಉಳಿದಿದ್ದಾರೆ. ಆದರೆ ಕೀರ್ತಿ ಅವರು ಕನ್ನಡದ ಹೆಸರಾಂತ ನಟ ಸದ್ಯ ಕಿರುತೆರೆಯಲ್ಲಿ ಪ್ರೇಕ್ಷಕರ ಮನೆಮಗನಾಗಿರುವ ಅನಿರುದ್ಧ್ ಅವರನ್ನು ಮದುವೆಯಾಗಿದ್ದಾರೆ. ಕೀರ್ತಿ ಅವರು ಉತ್ತಮವಾಗಿ ಹಾಡ್ತಾರೆ ಕೂಡ. ಕೀರ್ತಿ ಹಾಗೂ ಅನಿರುದ್ಧ್ ದಂಪತಿಗಳಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ.

[widget id=”custom_html-3″]


ಇನ್ನು ವಿಷ್ಣುವರ್ಧನ್ ಅವರು 50ಕ್ಕಿಂತ ಹೆಚ್ಚು ರಾಜ್ಯಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ, ಅಲ್ಲದೇ ಸಾಕಷ್ಟು ಪ್ರಶಸ್ತಿ ಸನ್ಮಾನಗಳು ದೊರೆತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಇಹಲೋಕವನ್ನು ತ್ಯ’ಜಿಸಿದ್ರೂ ಅಭಿಮಾನಿಗಳ ಹೃದಯದಂಗಳದಲ್ಲಿ ವಿಷ್ಣು ಇನ್ನೂ ಜೀವಂತವಾಗಿದ್ದಾರೆ. ತನ್ನ ಹೃದಯವಂತಿಕೆಯಿಂದ ಸಹಾಯತಾ ಭಾವದಿಂದ , ಮಾನವೀಯ ಗುಣಗಳಿಂದ, ಬದುಕಿನ ಮೌಲ್ಯದಿಂದ ವಿಷ್ಣುವರ್ಧನ್ ಅವರು ಮಾಸದ ನಕ್ಷತ್ರವಾಗಿ ಕೋಟಿ ಅಭಿಮಾನಿಗಳ ಹೃದಯದಲ್ಲಿ ಅಚ್ಚೊತ್ತಿ ಆಳವಾಗಿ ಬೇರೂರಿದ್ದಾರೆ. ನೀವು ಸಾಹಸಸಿಂಹನ ಅಭಿಮಾನಿಗಳಾಗಿದ್ರೆ ವಿಷ್ಣವರ್ಧನ್ ಅವರ ಬದುಕಿನ ಕತೆ ಬಗ್ಗೆ ಏನು ಹೇಳ್ತೀರಾ..