Advertisements

ವಾಕಿಂಗ್ ಮಾಡಲು ಹೋದ ದಂಪತಿಗಳಿಗೆ ಮಣ್ಣಿನಲ್ಲಿ ಒಂದು ಕ್ಯಾನ್ ಕಾಣಿಸುತ್ತದೆ! ಅದನ್ನು ಓಪನ್ ಮಾಡಿ ನೋಡಿದ ಮಹಿಳೆಗೆ ಶಾಕ್.. ಏನಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಕೆಲವು ಬಾರಿ ಅದೃಷ್ಟ ಅನ್ನೋದು ನಮ್ಮ ಪಕ್ಕದಲ್ಲೆ ಇರುತ್ತದೆ ಆದರೆ ನಮಗೆ ಆ ಅದೃಷ್ಟದ ಬಗ್ಗೆ ತಿಳಿಯುವುದಿಲ್ಲ.. ಯಾಕೆಂದರೆ ಎಲ್ಲದಕ್ಕು ಸಮಯ ಬರಬೇಕು. ಆ ಸಮಯ ಬಂದಾಗ ನಾವು ಅಂದುಕೊಳ್ಳದೇ ಇರುವ ರೀತಿ ಘ’ಟನೆಗಳು ನಡೆದು ಹೋಗುತ್ತದೆ.. ಆದರೆ ಈ ಘ’ಟನೆ ನೋಡಿದ ಮೇಲೆ ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂದುಕೊಳ್ತಿರಾ. ಅಮೇರಿಕಾದ ಕ್ಯಾಲಿಪೋರ್ನಿಯಾಗೆ ಸೇರಿದ ಜಾನ್ ಮತ್ತು ಮೇರಿ ಎಂಬ ದಂಪತಿಗಳು ಬೆಟ್ಟದ ಪಕ್ಕದಲ್ಲಿ ಒಂದು ಸಿಂಪಲ್ ಮನೆ ಕಟ್ಟಿಕೊಂಡು ಮಕ್ಕಳನ್ನು ಓದಿಸುತ್ತಾ ಆರ್ಥಿಕ ಪರಿಸ್ಥಿತಿ ನಡುವೆ ಹೇಗೋ ಜೀವನ ನಡೆಸುತ್ತಿದ್ದರು. ಇನ್ನೂ ಜಾನ್ ಮತ್ತು ಮೇರಿ ಎಂಬ ದಂಪತಿಗೆ ಒಂದು ಅವ್ಯಾಸವಿತ್ತು..

Advertisements

ಅದೇನೆಂದರೆ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಂದ್ಮೇಲೆ ತಮ್ಮ ನಾಯಿಯನ್ನು ಕರೆದುಕೊಂಡು ಮನೆಯ ಪಕ್ಕದ ಬೆಟ್ಟದವರೆಗೂ ವಾಕಿಂಗ್ ಹೋಗುವುದು. ಅದೇ ರೀತಿ ಒಂದು ದಿನ ನಾಯಿಯ ಜೊತೆ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದ ಈ ದಂಪತಿಗೆ ಕಾಲುದಾರಿಯ ಪಕ್ಕ ಭೂಮಿಯಲ್ಲಿ ಹೂತಿಟ್ಟಿದ್ದ ಕಬ್ಬಿಣದ ಒಂದು ಕ್ಯಾನ್ ನ ಮೇಲ್ಬಾಗ ಕಾಣಿಸುತ್ತದೆ.. ಇದನ್ನು ನೋಡಿದ ಮೇರೆ ಅವರಿಗೆ ಕೂತೂಹಲದಿಂದ ಅದರಲ್ಲಿ ಏನಿರಬಹುದು ಎಂದು ಅದನ್ನು ತೆಗೆಯಲು ಮುಂದಾದರು. ಆದರೆ ಗಂಡ ಜಾನ್ ಅದು ಉಪಯೋಗವಿಲ್ಲದ ತುಕ್ಕು ಹಿಡದಿರುವ ಕ್ಯಾನ್ ಮುಟ್ಟಬೇಡ ಎಂದು ಹೇಳುತ್ತಾರೆ..

ಆದರೆ ಮೇರಿ ಇಲ್ಲಾ ಕ್ಯಾನ್ ಅನ್ನು ತೆಗೆದು ನೊಡಲೇ ಬೇಕು ಎಂದು ಆ ಕ್ಯಾನ್ ಅನ್ನು ಭೂಮಿಯಿಂದ ತೆಗೆಯುತ್ತಾರೆ. ಈ ಕಬ್ಬಿಣದ ಕ್ಯಾನ್ ತುಂಬಾ ತೂಕವಿದ್ದ ಕಾರಣ ಮನೆಗೆ ಹೋಗಿ ನೋಡೊಣ ಎಂದು ಕೊಂಡು ಹೋದರು.. ನಂತರ ಮನೆಗೆ ಬಂದ ತಕ್ಷಣ ಕ್ಯಾನ್ ನಲ್ಲಿ ಏನಿರಬಹುದು ಎಂದು ಓಪನ್ ಮಾಡಿ ನೋಡಿದಾಗ ಬೆಚ್ಚಿ ಬಿದ್ದರು. ಅದರೊಳಗೆ ಬಂಗಾರದ ನಾಣ್ಯಗಳು ಇದ್ದವು.. ಇದರಿಂದ ಶಾ’ಕ್ ಆದ ಜಾನ್ ಮತ್ತು ಮೇರಿ ಆ ಜಾಗದಲ್ಲಿ ಇನ್ನೂ ತುಂಬಾ ಕ್ಯಾನ್ ಗಳು ಇರಬಹುದು ಎಂದು ಭಾವಿಸಿ ಮತ್ತೆ ಅಲ್ಲಿಗೆ ಹೋಗಿ ಅಗೆದು ನೋಡಿದಾಗ ಇನ್ನೂ ಹೆಚ್ಚು ಕಬ್ಬಿಣದ ಕ್ಯಾನ್ ಗಳು ಸಿಗುತ್ತವೆ.. ನಂತರ ಎಲ್ಲಾ ಕ್ಯಾನ್ ಗಳನ್ನು ಓಪನ್ ಮಾಡಿ ನೋಡಿದಾಗ ಬರೋಬ್ಬರಿ 1427 ಬಂಗಾರದ ನಾಣ್ಯಗಳು ಸಿಕ್ಕಿದವು.. ಇನ್ನೂ ಈ ನಾಣ್ಯಗಳ ಒಟ್ಟು ಬೆಲೆ 74 ಕೋಟಿ.. ಈಗ ಜಾನ್ ಮತ್ತು ಮೇರಿ ದಂಪತಿಗೆ ಈ ನಾಣ್ಯಗಳ ಮೂಲಕ ಅದೃಷ್ಟ ಕುಲಾಯಿಸಿದೆ.