Advertisements

ಪೈಲಟ್ ಗಳಿಗೆ ಸಂಬಳ ಎಷ್ಟು ಕೊಡ್ತಾರೆ ಗೊತ್ತಾ? ಉಚಿತವಾಗಿ ಪೈಲಟ್ ಆಗ್ಬೇಕು ಅಂದ್ರೆ ಇದನ್ನ ಮಾಡ್ಲೇಬೇಕು..

Kannada Mahiti

ಪೈಲೆಟ್ ಆಗಬೇಕು ಆಗಸದಲ್ಲಿ ಹಾರಾಟ ಮಾಡಬೇಕು ಎನ್ನೋದು ಹಲವರ ಕನಸು ಚಿಕ್ಕ ವಯಸ್ಸಲ್ಲಿ ಹಕ್ಕಿಗಳಂತೆ ನಾವು ಹಾರಾಡಬೇಕಿತ್ತು, ನಮಗೂ ರೆಕ್ಕೆ ಇರಬೇಕಿತ್ತು ಅಂತ ಅನಿಸ್ತಿತ್ತಲ್ವಾ.. ಅದು ಬಿಡಿ ಈಗ ಪೈ’ಲೆ’ಟ್ ಆಗಬೇಕು ಅಂದ್ರೆ ಏನು ಮಾಡಬೇಕು. ಒಬ್ಬ ಕಮರ್ಷಿಯಲ್ ಪೈಲೆಟ್‌ಗೆ ಇರಬೇಕಾದ ಅರ್ಹತೆ ಏನು ವಿವರಿಸ್ತಾ ಹೋಗ್ತೀವಿ ನೋಡಿ. ಕಮರ್ಷಿಯಲ್ ಪೈಲೆಟ್ ಆಗಬೇಕು ಅಂದ್ರೆ ನಿಮಗೆ ಕನಿಷ್ಟ ಹದಿನೇಳು ವರ್ಷ ಆಗಿರಬೇಕು, ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರಬೇಕು, ಜೊತೆಗೆ ಮೇತ್ಸ್, ಫಿಸಿಕ್ಸ್, ಕೆಮಿಸ್ಟ್ರಿಯಲ್ಲಿ ಕನಿಷ್ಠ 55 ಶೇಕಡಾ ಅಂಕ ಗಳಿಸಿರಬೇಕು. ಜೊತೆಗೆ ಮೆಂಟಲೀ. ಫಿಸಿಕಲ್ ಫಿಟ್ ಹಾಗೂ ಫೈನ್ ಆಗಿರಬೇಕು. ಎಲ್ಲವುದಕ್ಕಿಂತ ಮುಖ್ಯವಾಗಿ ನಿಮ್ಮ ದೃಷ್ಠಿಶಕ್ತಿ ಸರಿಯಾಗಿರಬೇಕು. ಸ್ಟ್ರಾಂಗ್ ಆಗಿರಬೇಕು.

[widget id=”custom_html-3″]

Advertisements

ಇದಿಷ್ಟು ನೀವು ಒಬ್ಬ ಪೈಲೆಟ್ ಆಗಲು ಇರಬೇಕಾದ ಬೇಸಿಕ್ ಕ್ವಾಲಿಟಿ. ಇಷ್ಟೆಲ್ಲವುದರಲ್ಲಿಯೂ ನೀವು ಕೆಪೆಬಲ್ ಅಂತ ನಿಮಗೆ ಅನಿಸಿದ್ರೆ ಮುಂದಿನ ಹಂತವನ್ನು ಫಾಲೋ ಮಾಡಬಹುದು, ಹಾಗಾದ್ರೆ ನೆಕ್ಸ್ಟ್ ಏನು ಮಾಡಬೇಕು.. ಹೇಳ್ತೀವಿ ಮೊದಲು ನೀವೊಂದು ಲಿಖಿತ ರೂಪದ ಎಂಟ್ರೆನ್ಸ್ ಎಕ್ಸಾಮ್ ಬರೆಯಬೇಕು, ಈ ಪರೀಕ್ಷೆ ಬರೆಯಲು ನಿಮಗೆ ಎರಡು ಗಂಟೆಗಳ ಸಮಯಾವಕಾಶವಿರುತ್ತದೆ. ಈ ಪರೀಕ್ಷೆಯಲ್ಲಿ ಅರ್ಹರಾದ ಬಳಿಕವೇ ಮುಂದೆ ನಿಮಗೆ ಸಂದರ್ಶನವಿರುತ್ತದೆ. ಸಂದರ್ಶನದಲ್ಲಿ ಓಕೆಯಾದರೆ ನೆಕ್ಸ್ಟ್ ಸ್ಟೆಪ್‌ಗೆ ಕಳುಹಿಸ್ತಾರೆ. ಬಳಿಕ ನಿಮಗೆ ಫಿಸಿಕಲ್ ಟೆಸ್ಟ್ ಮಾಡಿಸುತ್ತಾರೆ. ನಿಮಗೆ ಯಾವುದೇ ರೀತಿಯ ಸಮಸ್ಯೆಯಿಲ್ಲ, ದೈಹಿಕವಾಗಿ ಸದೃಢವಾಗಿದ್ದೀರಾ ಅಂತ ತಿಳಿದ ತಕ್ಷಣ ನಿಮಗೆ ಒಂದು ಮೆಡಿಕಲ್ ಸರ್ಟಿಫಿಕೇಟ್ ಕೊಡುತ್ತಾರೆ.

[widget id=”custom_html-3″]

ಈ ಮೆಡಿಕಲ್ ಸರ್ಟಿಫಿಕೇಟ್ ಸಿಕ್ಕ ಬಳಿಕ ನೀವು ಪೈಲೆಟ್ ಆಗಲು ಅರ್ಧ ಓಕೆಯಾದಂತೆಯೇ. ಹೌದು ನಂತರ ನೀವು ಪೈಲೆಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‌ಗೆ ಸೇರಬಹುದು. ಆದ್ರೆ ಮಧ್ಯಮವರ್ಗದ ಬಹುತೇಕ ಜನರಿಗೆ ಇಲ್ಲಿಯೇ ಸಮಸ್ಯೆಯಾಗೋದು , ಎಸ್ ನೀವು ಈ ಪೈಲೆಟ್ ತರಬೇತಿ ಮಾಡಲು ನಿಮಗೆ ಬರೋಬ್ಬರಿ 38ರಿಂದ 40 ಲಕ್ಷ ಬೇಕಾಗುತ್ತದೆ, ಇದು ನಮ್ಮಲ್ಲಿ ಬಹುತೇಕರ ಕನಸಿಗೆ ಬರೆ ಎಳೆದಿರುವಂತದ್ದು, ಆದರೆ ಇಲ್ಲಿ ನೀವು ಸ್ವಲ್ಪ ಶ್ರಮ ಹಾಕಿದ್ರೆ ನಿಮ್ಮ ಕನಸು ನನಸಾಗುವ ಸಾಧ್ಯತೆಯಿರುತ್ತೆ, ಅದು ಹೇಗೆ ಅಂತೀರಾ..

[widget id=”custom_html-3″]

ಕೇಂದ್ರ ಸರ್ಕಾರದ ವತಿಯಿಂದ ನಮಗೆ ಎನ್‌ಡಿಎ ಎಕ್ಸಾಂ ಬರೆಯುವ ಅವಕಾಶವಿರುತ್ತೆ, ಆ ಪರೀಕ್ಷೆಯಲ್ಲಿ ಉತ್ತೀರ್ಣರಾದ್ರೆ ನಮಗೆ ಲಕ್ಷ ಲಕ್ಷ ಕೊಟ್ಟು ಓದುವ ಪ್ರಮೇಯ ಇರುವುದಿಲ್ಲ.
ಬರೇ ಎಪ್ಲಿಕೇಶನ್ ಫಾರ್ಮ್ಗೆ 6 ಸಾವಿರ ಹಣವಿರುತ್ತದೆ ಅಂದ್ರೆ ನೀವು ಅಂದಾಜಿಸಿ ಈ ತರಬೇತಿ ಎಷ್ಟು ಕೊಸ್ಟ್ಲಿ ಅಂತ. ಆದ್ರೆ ನಿಮಗೆ ಈ ತರಬೇತಿ ಮುಗಿಸಿದ ಮೇಲೆ ಕಮರ್ಷಿಯಲ್ ಸರ್ಟಿಫಿಕೇಟ್‌ಗೆ ಅರ್ಹರಾದ್ರೆ ತಿಂಗಳ ಸಂಬಳ ನಮ್ಮ ದೇಶದಲ್ಲಿ 1 ಲಕ್ಷದ 50 ಸಾವಿರ ರೂಪಾಯಿಯಿರುತ್ತದೆ. ಅಂತರಾಷ್ಟ್ರೀಯ ಪೈಲೆಟ್ ಆದ್ರೆ ತಿಂಗಳ ಸಂಬಳ 5ರಿಂದ 6 ಲಕ್ಷ ಇರುತ್ತದೆ. ಸ್ನೇಹಿತರೆ ಇದಿಷ್ಟು ನೀವೊಬ್ಬ ಕಮರ್ಷಿಯಲ್ ಪೈಲೆಟ್ ಆಗಬೇಕು ಅಂತಿದ್ರೆ ಫಾಲೋ ಮಾಡಬೇಕಾದ ಕ್ರಮಗಳು..