Advertisements

ಊಟ ಮಾಡುವಾಗ ಯಾವುದೇ ಕಾರಣಕ್ಕೂ ಈ ಒಂದು ತಪ್ಪನ್ನ ಮಾಡಲೇಬೇಡಿ ?

Kannada Mahiti

ನಮ್ಮ ಸಂಸ್ಕೃತಿಯಲ್ಲಿ ಆಹಾರವನ್ನು ಸೇವಿಸಲು ಹಲವು ವಿಧಾನಗಳಿವೆ. ನಿರ್ಧಿಷ್ಠ ಆಹಾರವನ್ನು ನಿರ್ಧಿಷ್ಠ ಸ್ಥಳ ಮತ್ತು ಭಂಗಿಯಲ್ಲಿ ಕುಳಿತು ಸೇವಿಸುವುದು ಸಂಪ್ರದಾಯವಾಗಿದೆ. ಇದಕ್ಕೆ ಸೂಕ್ತ ವೈಜ್ಞಾನಿಕ ಕಾರಣವಿದೆ. ಅದೇನೆಂಬುದನ್ನು ತಿಳಿಯೋಣ. ನಮ್ಮ ದೇಹದಲ್ಲಿ 7 ಚಕ್ರಗಳಿವೆ. ದೇಹದ ಮೇಲಿನ ಅರ್ಧ ಭಾಗದಲ್ಲಿ ನಾಲ್ಕು ಚಕ್ರ ಗಳಾದ ಸಹಸ್ತ್ರಾನ , ಆಜ್ಞಾ, ವಿಶುದ್ಧಿ ಮತ್ತು ಅನಹತ ಚಕ್ರಗಳು. ಕೆಳ ಭಾಗದಲ್ಲಿ ಮೂಲಾಧಾರ, ಸ್ವಾದಿಸ್ಟಾನ, ಮತ್ತು ಮಣಿಪೂರಕ ಎಂಬ ಮೂರು ಚಕ್ರಗಳು.

Advertisements

ಶಕ್ತಿಯು ಮೇಲಿನ ಚಕ್ರಗಳ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿದರೆ ನಮ್ಮ ದೇಹ ಮತ್ತು ಬದುಕು ಎರಡು ಆರೋಗ್ಯ ದಾಯಕವಾಗಿರುತ್ತದೆ. ಒಂದು ವೇಳೆ ಕೆಳಗಿನ ಚಕ್ರಗಳ ಮೂಲಕ ಶಕ್ತಿ ದೇಹ ಪ್ರವೇಶಿಸಿದರೆ ಅದು ನಮ್ಮ ದೇಹ ಮತ್ತು ಜೀವನದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಉದಾಹರಣೆಗೆ ನಾವು ದೇವಾಲಯಗಳಂತಹ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿದಾಗ ದೇವರ ಎದುರು ನಿಂತು ತಲೆ ಬಾಗಿಸಿ ನಮಸ್ಕರಿಸುತ್ತೇವೆ. ಕಾರಣ ನಮ್ಮ ತಲೆಯ ಭಾಗದಲ್ಲಿ ಇರುವ ಸಹಸ್ತ್ರಾನ್ ಚಕ್ರದ ಮೂಲಕ ಶಕ್ತಿ ನಮ್ಮ ದೇಹ ಪ್ರವೇಶಿಸಲಿ ಎಂದು.

ಹಾಗೆಯೇ ಆಹಾರವು ಕೂಡ ಒಂದು ಶಕ್ತಿಯುತವಾದ ಪದಾರ್ಥ. ಅದರ ಎದುರು ಕಾಲು ನೀಡುವುದು ಉಚಿತವಲ್ಲ. ನಮ್ಮ ಕಾಲುಗಳನ್ನು ಮಡಿಚಿ ಅಥವ ಚೇರ್ ಟೇಬಲ್ ಮೇಲೆ ಊಟ ಮಾಡುವಾಗ ಟೇಬಲ್ ಕೆಳಗೆ ಕಾಲು ಗಳನ್ನು ಅಡಗಿಸಿ ಊಟಾ ಮಾಡುವುದು ಸೂಕ್ತ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಕಾಲುಗಳನ್ನು ಮಡಿಸಿ ಪದ್ಮಾಸನದಲ್ಲಿ ಕುಳಿತು ಊಟಾ ಮಾಡುವ ಪದ್ಧತಿ ಇದೆ.