Advertisements

ಸ್ಕೂಲ್ ಬಸ್ ಗಳಿಗೆ ಹಳದಿ ಬಣ್ಣಾನೇ ಯಾಕೆ ಇರುತ್ತೆ ಗೊತ್ತಾ?

Kannada Mahiti

ತಮ್ಮ ಜೀವನದ ಬದುಕಿನಲ್ಲಿ ಅದೆಷ್ಟೋ ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿದಿಕೊಳ್ಳಲು ಆಸಕ್ತಿ ತೋರುವುದಿಲ್ಲ.. ನಮ್ಮ ಸಮಾಜದಲ್ಲಿ ಮಾಡಿಕೊಂಡಿರುವ ಪ್ರತಿಯೊಂದು ವ್ಯವಸ್ಥೆಗೂ ಒಂದು ಅರ್ಥ ಇದ್ದೇ ಇರುತ್ತದೆ. ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಹಳ್ಳಿಗಳಲ್ಲಿ ಮಕ್ಕಳು ಶಾಲೆಗೆ ಹೋಗಬೇಕಾದರೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು.. ಸ್ವಲ್ಪ ಸೌಕರ್ಯ ಇರುವವರು ಮಕ್ಕಳಿಗೆ ಸೈಕಲ್ ಕೊಟ್ಟು ಶಾಲೆಗೆ ಕಳುಹಿಸುತ್ತಿದ್ದರು.. ಆದರೆ ಆಗ ನಗರ ಪ್ರದೇಶಗಳಲ್ಲಿ ಮಾತ್ರ ಸ್ಕೂಲ್ ಬಸ್ ನ ವ್ಯವಸ್ಥೆ ಇತ್ತು. ಸಮಾಜ ಮುಂದುವರೆದಂತೆ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಈಗ ಹಳ್ಳಿಗಳಿಗೂ ಸಹ ಸ್ಕೂಲ್ ಬಸ್ ನ ವ್ಯವಸ್ಥೆ ಮಾಡಿಕೊಡಲಾಗಿದೆ. ಇನ್ನೂ ಖಾಸಗಿ ಶಾಲೆಗಳು ತಮ್ಮದೇ ಆದ ಬಸ್ ಗಳನ್ನು ಹೊಂದಿವೆ..

[widget id=”custom_html-3″]

Advertisements

ಅವರವರ ಊರುಗಳಿಗೆ ಹೋಗಿ ಮಕ್ಕಳನ್ನು ಬಸ್ ನಲ್ಲಿಯೇ ಶಾಲೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದೇ ರೀತಿ ಮಕ್ಕಳನ್ನು ಸ್ಕೂಲ್ ವ್ಯಾನ್ ನಲ್ಲಿ ಕರೆದುಕೊಂಡು ಹೋಗುವುದಕ್ಕೆ ಖಾಸಗಿ ಶಾಲೆಗಳು ವಿಶೇಷ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತಾರೆ.. ಆದರೆ ಇಲ್ಲೊಂದು ಕುತೂಹಲಕಾರಿ ಹಾಗು ಯಾರಿಗೂ ತಿಳಿಯದೇ ಇರುವಂತಹ ವಿಷಯ ಹೊಂದಿದೆ. ಅದೇನೆಂದರೆ ನಮ್ಮ ದೇಶ ಮಾತ್ರವಲ್ಲದೇ ಪ್ರಪಂಚಾದ್ಯಂತ ಸ್ಕೂಲ್ ಬಸ್ ಗಳೆಲ್ಲಾ ಯಾಕೆ ಹಳದಿ ಬಣ್ಣ ಇರುತ್ತದೆ ಎನ್ನುವುದು.. ಹೌದು ಸ್ಕೂಲ್ ವ್ಯಾನ್ ಗಳು ಹಳದಿ ಬಣ್ಣದಲ್ಲೇ ಯಾಕೆ ಇರುತ್ತದೆ ಎಂಬ ಪ್ರಶ್ನೆಗೆ ಇರುವ ಕಾರಣ ಇದೇ ನೋಡಿ. ಶಾಲಾ ಬಸ್ ಹಳದಿ ಬಣ್ಣವಾಗಿದ್ದು ಎಲ್ಲರ ಗಮನ ಸೆಳೆಯುವ ನೋಟವನ್ನು ನೀಡುತ್ತದೆ..

[widget id=”custom_html-3″]

ಇನ್ನೂ ನಮ್ಮ ಕಣ್ಣಿಗೇ ಬೇಗ ಗೋಚರವಾಗುವ ಹಾಗು ಸ್ಪಷ್ಟವಾಗಿ ಗೋಚರಿಸುವ ಬೆಳಕು ಅಂದರೆ ಅದು ಹಳದಿ ಬಣ್ಣ. ಅದಕ್ಕಾಗಿಯೇ ಹಳದಿ ಬಣ್ಣವನ್ನು ಸ್ಕೂಲ್ ಬಸ್ ಗಳಿಗೆ ಬಳಸಲಾಗಿದೆ.. ಸ್ಕೂಲ್ ಬಸ್ ನ ಹಳದಿ ಬಣ್ಣವನ್ನು ರಾಷ್ಟೀಯ ಶಾಲಾ ಬಸ್ ಕ್ರೋ’ಮ್ ಹಳದಿ ಎಂದು ಕರೆಯಲಾಗಿದೆ. ಹಳದಿ ಬಣ್ಣವನ್ನು ನಾವು ಪ್ರತೀ ಋ’ತುವಿನಲ್ಲಿ ನೋಡಬಹುದಾದ ಬಣ್ಣವಾಗಿದೆ.. ಸೂರ್ಯ, ಮಳೆ, ಇಬ್ಬನಿ ಹಾಗು ಪ್ರಕೃತಿಯಲ್ಲಿ ನಾವು ಹಳದಿ ಬಣ್ಣವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಏಕ ಕಾಲದಲ್ಲಿ ಹಲವು ಬಣ್ಣಗಳು ಇದ್ದರು ನಮ್ಮನ್ನು ಆಕರ್ಶಿಸುವುದು ಹಾಗೂ ಬಹು ಬೇಗನೆ ಕಾಣುವುದು ಹಳದಿ ಬಣ್ಣ.. ಇದೇ ಕಾರಣಕ್ಕೆ ಸ್ಕೂಲ್ ಬಸ್ ಗಳಿಗೆ ಹಳದಿ ಬಣ್ಣವನ್ನು ಬಳಸಿರುವ ಮುಖ್ಯ ಉದ್ದೇಶ.

[widget id=”custom_html-3″]

ಇನ್ನೂ ವಿಜ್ಞಾನಿಗಳ ಪ್ರಕಾರ ಹಳದಿ ಬಣ್ಣ ಪಾ’ರ್ಶ್ವ ಬಾಹ್ಯ ದೃಷ್ಟಿ ಕೆಂಪು ಬಣ್ಣಕ್ಕಿಂತ 1.24 ಪಟ್ಟು ಹೆಚ್ಚಾಗಿದೆ.. ಇದರ ಅರ್ಥ ಹಳದಿ ಬಣ್ಣ 1.24 ಪಟ್ಟು ಹೆಚ್ಚು ಆಕರ್ಷಣೆಯಾಗುವ ಬಣ್ಣ. ಮತ್ತು ಎಲ್ಲಾ ಬಣ್ಣಕ್ಕಿಂತಲೂ ಹಳದಿ ಬಣ್ಣ ಹೆಚ್ಚು ಪಟ್ಟು ಗೋಚರಿಸುತ್ತದೆ. ಆದ್ದರಿಂದ ಸ್ಕೂಲ್ ಬಸ್ ಗಳಿಗೆ ಹೆಚ್ಚಾಗಿ ಹಳದಿ ಬಣ್ಣ ಬಳಸಲಾಗಿದೆ.. ಇದರಿಂದ ಜನರು ಕೂಡ ಬಹಳ ದೂರದಿಂದ ನೋಡಬಹುದು ಮತ್ತು ಈ ಬಸ್ ಗಳು ಅ’ಪಘಾ’ತಕ್ಕೆ ಒಳಾಗಾಗುವುದು ಬಹಳ ಕಡಿಮೆ.. ಸ್ಕೂಲ್ ವ್ಯಾನ್ ಗಳು ಹೋಗುತ್ತಿದ್ದರೆ.. ಅದು ಮಕ್ಕಳ ಸ್ಕೂಲ್‌ ವ್ಯಾನ್ ಎಂದು ತಿಳಿದು ಜನರು ಕೂಡ ನಿಧಾನವಾಗಿ ಚಲಾಯಿಸುತ್ತಾರೆ. ಸ್ಕೂಲ್ ವ್ಯಾನ್ ಗೆ ಇರುವ ಹಳದಿ ಬಣ್ಣದ ಹಿಂದೆ ಇಷ್ಟೊಂದು ಮಾಹಿತಿ ಅಡಗಿದೆ..