Advertisements

ಚಲಿಸುತ್ತಿದ್ದ ಟ್ರೈನ್ ಹತ್ತಲು ಹೋದ ಪ್ರಯಾಣಿಕರನ್ನ ರಕ್ಷಣೆ ಮಾಡಿ ಸಾಹಸ ಮೆರೆದ ಮಹಿಳಾ ಕಾನ್ಸ್‌ಟೇಬಲ್ ! ಈ ವೈರಲ್ ವಿಡಿಯೋ ನೋಡಿ..

Kannada Mahiti

ಸ್ನೇಹಿತರೇ, ಆವಾಸರವೇ ಅಪಾಯ ಎಂಬ ಗಾದೆ ಮಾತಿದೆ. ಹೌದು, ತಮ್ಮ ಅವಸರದಿಂದಲೇ ಅಪಾಯವನ್ನ ಬರಮಾಡಿಕೊಳ್ಳುತ್ತಿದ್ದಾರೆ ಬಹುತೇಕರು. ಅದರಲ್ಲೂ ರೈಲು ಚಲಿಸುವಾಗ ಹತ್ತಲು ಹೋಗಿ ಸಾ’ವಿಗೀಡಾದ ನಿದರ್ಶನಗಳು ನಮ್ಮ ನಡುವೆ ಬೇಕಾದಷ್ಟಿವೆ. ಇನ್ನು ಇದೇ ಸಮಯದಲ್ಲಿ ಅಂತಹರವರನ್ನ ಪ್ರಾ’ಣಾಪಾಯದಿಂದ ರಕ್ಷಣೆ ಮಾಡಿ ಎಲ್ಲಾರ ಮೆಚ್ಚುಗೆಗೆ ಕಾರಣರಾದವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನ ನಾವು ನೋಡಿದ್ದೇವೆ. ಈಗ ಅದೇ ರೀತಿಯ ಘಟನೆಯೊಂದು ಲಕ್ನೋದಲ್ಲಿ ನಡೆದಿದ್ದು ಮಹಿಳಾ ಕಾನ್ಸ್ಟೇಬಲ್ ಅವರು ಮಾಡಿದ ಕಾರ್ಯಕ್ಕೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆಗಳ್ ಮಹಾಪೂರವೇ ಹರಿದುಬರುತ್ತಿದೆ.

ಹೌದು, ರೈಲ್ವೆ ಸಚಿವಾಲಯ ವಿಡಿಯೋವೊಂದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಈಗ ಆ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದ್ರೆ ಅಸಲಿಗೆ ಅಲ್ಲಿ ನಡೆದದ್ದಾರೂ ಏನು ಗೊತ್ತಾ ?ವಿಡಿಯೋದಲ್ಲಿರುವಂತೆ ತನ್ನ ಸ್ನೇಹಿತನೊಟ್ಟಿಗೆ ಮಹಿಳೆಯೊಬ್ಬಳು ರೇಲ್ವೆ ಫ್ಲಾಟ್ ಫಾರ್ಮ್ ಗೆ ಬರುತ್ತಾರೆ. ಇನ್ನು ಅವರು ಹೋಗಬೇಕಾಗಿದ್ದ ರೈಲು ಚಲಿಸಲು ಶುರುಮಾಡುತ್ತದೆ. ಇದೆ ಸಮಯದಲ್ಲಿ ಆ ಮಹಿಳೆಯ ಸ್ನೇಹಿತ ಚಲಿಸುತ್ತಿದ್ದ ರೈಲನ್ನ ಹತ್ತಿಬಿಡುತ್ತಾನೆ. ಬಳಿಕ ಆ ಮಹಿಳೆ ಕೂಡ ಚಲಿಸುತ್ತಿದ್ದ ರೈಲನ್ನ ಹತ್ತಲು ಹೋಗುತ್ತಾಳೆ.

ಆದರೆ ಚಲಿಸುತ್ತಿದ್ದ ರೈಲನ್ನ ಹತ್ತುವ ಬರದಲ್ಲಿ ಕಾಲು ಜಾರಿ ಕೆಳಗೆ ಬಿದ್ದು ರೇಲ್ವೆ ಫ್ಲಾಟ್ ಫಾರ್ಮ್ ಮತ್ತು ಚಲಿಸುತ್ತಿದ್ದ ರೈಲಿನ ನಡುವೆ ಸಿಲುಕಿ ಹಾಕಿಕೊಳ್ಳುತ್ತಾಳೆ. ಇನ್ನು ಆಕೆಯ ಪ್ರಾಣಕ್ಕೆ ಅಪಾಯವಾಗಿಬಿಡುತ್ತೆ ಅನ್ನೋ ಅಷ್ಟರಲ್ಲಿ ಅಲ್ಲೇ ಕರ್ತವ್ಯದಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ವಿನೀತ ಕುಮಾರೀ ಎಂಬುವವರು ಆ ಕೂಡಲೇ ಓಡಿ ಬಂದು ಸಿಲುಕಿಹಾಕಿಕೊಂಡಿದ್ದ ಮಹಿಳೆಯನ್ನ ಅಲ್ಲಿಂದ ಎಳೆದು ಆಕೆಯ ಪ್ರಾ’ಣ ಕಾಪಾಡುತ್ತಾರೆ. ಇನ್ನು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಮಹಿಳಾ ಕಾನ್ಸ್ಟೇಬಲ್ ಅವರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.