ನಮಸ್ತೆ ಸ್ನೇಹಿತರೆ, ಹೆತ್ತ ತಂದೆ ತಾಯಿ ಅಣ್ಣ ತಮ್ಮಂದಿರನ್ನು ಬಿಟ್ಟು ಗಂಡ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅನ್ನುವ ಒಂದೇ ಒಂದು ನಂಬಿಕೆಯಿಂದ ಹುಡುಗಿ ಗಂಡನ ಮನೆಗೆ ಹೋಗುತ್ತಾಳೆ.. ಹಾಗೆ ತುಂಬಾ ಬಲವಾದ ಕಾರಣಗಳು ಇಲ್ಲದೇ ವಿ’ಚ್ಛೇದನ ಪಡೆಯೋದಿಲ್ಲ. ಆದರೆ ಮದುವೆಯಾದ 3 ನಿಮಿಷಕ್ಕೆ ಈ ನವದಂಪತಿಗಳ ನಡುವೆ ಏನಾಯ್ತು ಗೊತ್ತಾ? ಹೌದು ಸ್ನೇಹಿತರೆ ಮದುವೆಯಾದ ಮೂರೇ ನಿಮಿಷಕ್ಕೆ ಡೈವರ್ಸ್ ಕೊಟ್ಟಿದ್ದಾಳೆ ಮದುವೆ ಹೆಣ್ಣು.. ಕುವೈತ್ ನಗರದ ನ್ಯಾಯಾಲಯದಲ್ಲಿ ವರ ಹಾಗು ವಧು ಮದುವೆ ಆಗಲು ತೆರಳಿದ್ದರು. ನ್ಯಾಯಾದೀಶರ ಮುಂದೆ ಇಬ್ಬರ ಒಪ್ಪಿಗೆಯ ಮೇರೆಗೆ ಮದುವೆ ಪತ್ರಕ್ಕೆ ಸೈನ್ ಕೂಡ ಮಾಡುತ್ತಾರೆ.

ಇನ್ನೂ ಮದುವೆ ಮುಗಿದ ನಂತರ ನ್ಯಾಯಾಲಯದದಿಂದ ಹೊರಗಡೆ ಬರುವಾಗ ಆಕಸ್ಮಿಕವಾಗಿ ಹುಡುಗಿ ಕಾಲು ಜಾರಿ ಕೆಳಗೆ ಬಿದ್ದು ಬಿಡುತ್ತಾಳೆ.. ಇನ್ನೂ ಈ ಸಮಯದಲ್ಲಿ ಯಾರಾದ್ರೂ ಆಕೆಯ ಕೈ ಹಿಡಿದು ಮೇಲಕ್ಕೆ ಎತ್ತಬೇಕು ಅಲ್ಲವೇ. ಯಾರೂ ಕೂಡ ಎತ್ತುವುದಿಲ್ಲ. ಆಕೆಯೇ ಮೆಲಕ್ಕೆ ಹೇಳಲಿ ನೋಡೋಣ ಎಂದು ನಸು ನಗುತ್ತಾರೆ.. ಆಗ ಅಲ್ಲಿ ಮದುವೆಯಾದ ಹುಡುಗ ಸಹ ಇರುತ್ತಾನೆ. ಆದರೆ ಯಾವುದೇ ಕಾರಣಕ್ಕೂ ಆತ ಕೂಡ ಈ ಹುಡುಗಿಯ ಕೈಯನ್ನು ಹಿಡಿದು ಮೆಲಕ್ಕೆ ಎತ್ತಲು ಮುಂದಕ್ಕೆ ಬರುವುದಿಲ್ಲ. ಬದಲಾಗಿ ನಿನಗೆ ಸರಿಯಾಗಿ ನಡೆಯೋದಕ್ಕು ಬರೊದಿಲ್ವಾ ಸ್ಟುಪಿಡ್ ಎಂದು ಬೈಯ್ಯುತ್ತಾನೆ..

ಕೆಳಗೆ ಬಿದ್ದವಳನ್ನು ಮೇಲೆತ್ತುವ ಬದಲು ಎಲ್ಲರ ಮುಂದೆ ಅವಮಾನ ಮಾಡಿದ ಗಂಡ ಇನ್ನು ಮುಂದೆ ಹೇಗೆ ಎಂದು ಯೋಚನೆ ಮಾಡಿ.. ಗಂಡನನ್ನು ಊಹಿಸಿ ಕೊಳ್ಳಲು ಆಗದ ಈ ಹುಡುಗಿ ತಕ್ಷಣವೇ ಕೋರ್ಟ್ ಹೊಳಗೆ ಹೋಗಿ ತನಗೆ ಡೈವರ್ಸ್ ಬೇಕು ಎಂದು ನ್ಯಾಯಾಧೀಶರ ಮುಂದೆ ಕೇಳುತ್ತಾಳೆ.. ಇನ್ನೂ ಈ ಹುಡುಗಿಯ ಮಾತುಗಳನ್ನು ಕೇಳಿದ ನ್ಯಾಯಾಧೀಶರು ಒಂದು ಕ್ಷಣ ಶಾಕ್ ಆಗಿದ್ದಾರೆ.. ಯಾಕೆಂದರೆ ಆಗತಾನೆ ಮದುವೆಯಾದ ಈ ಹುಡುಗಿ ತಕ್ಷಣವೇ ಬಂದು ಡೈವರ್ಸ್ ಕೇಳುತ್ತಿದ್ದಾಳೆ ಎಂದು.

ಅದರಲ್ಲೂ ಇವರಿಗೆ ಮದುವೆಯಾಗಿ ಕೇವಲ ಮೂರು ನಿಮಿಷವಾಗಿತ್ತು ಅಷ್ಟೇ.. ನಂತರ ಈ ಹುಡುಗಿಯ ಮನವಿಯನ್ನು ಸ್ವೀಕರಿಸಿದ ನ್ಯಾಯಾಧೀಶರು ತಕ್ಷಣ ಅವರಿಬ್ಬರಿಗೆ ವಿಚ್ಚೇದನ ಕೊಟ್ಟಿದ್ದಾರೆ. ಈ ಘ’ಟನೆ ಈಗ ಬಹಳ ಸುದ್ದಿಯಾಗಿದ್ದು ಕೆಲವು ಜನ ಹುಡುಗಿಯ ಸಪೋರ್ಟ್ ಗೆ ನಿಂತರೆ ಇನ್ನೂ ಕೆಲವರು ಚಿಕ್ಕ ವಿಷಯಕ್ಕೆ ಇಷ್ಟು ದೊಡ್ಡ ನಿರ್ಧಾರದ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ. ಆ ಒಂದು ಕ್ಷಣದಲ್ಲಿ ಹುಡುಗನ ನಿಜವಾದ ವ್ಯಕ್ತಿತ್ವ ಆಕೆಗೆ ಗೊತ್ತಾಯ್ತಾ? ಈ ಹುಡುಗಿ ಮಾಡಿದ್ದು ಸರಿನಾ.. ನಿಮ್ಮ ಅನಿಸಿಕೆ ಏನು.