Advertisements

ತಂದೆ ಮಾಡುತ್ತಿರುವ ಕೆಲಸವನ್ನ ನೋಡಲಾರದೆ ಈ ಮಹಿಳೆ ಮಾಡಿದ್ದೇನು ಗೊತ್ತಾ? ಈ ಮಹಿಳೆ ಮಾಡುವ ಕೆಲಸ ಒಂದೊಂದಲ್ಲ..

Inspire Kannada Mahiti

ನಮಸ್ತೆ ಸ್ನೇಹಿತರೆ, ಮಹಿಳೆಯರು ಯಾವುದರಲ್ಲೂ ಕಮ್ಮಿ ಇಲ್ಲಾ ಅನ್ನೋದನ್ನ ಈಗಾಗಲೇ ಸಾಬೀತು ಪಡಿಸಿದ್ದಾರೆ.. ಮಹಿಳೆಯರು ಈ ಕೆಲಸವನ್ನೇ ಮಾಡ್ಬೇಕು, ಆ ಕೆಲಸ ಮಾಡ್ಬಾರ್ದು.. ಮಾಡೋಕೆ ಆಗಲ್ಲ ಅನ್ನೋ ಎಲ್ಲಾ ಕೆಲಸಗಳನ್ನು ಮಾಡಿ ತೋರಿಸಿ ತಾನು ಎಷ್ಟು ಶಕ್ತಿಶಾಲಿ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.. ಹೌದು ಯಾವುದೇ ಕ್ಷೇತ್ರದಲ್ಲಿ ಆಗಲಿ ಬಸ್ ಡ್ರೈವರ್, ಲಾರಿ ಡ್ರೈವರ್, ಟ್ರೈನ್ ಡ್ರೈವರ್ ಅಷ್ಟೇ ಅಲ್ಲಾ ಪ್ಲೈಟ್ ಡ್ರೈವರ್ ಆಗಿಯೂ ಕೂಡ ಮಹಿಳೆಯರು ಕೆಲಸವನ್ನ ಮಾಡುತ್ತಿದ್ದಾರೆ.. ಒಂದು ಪಂಚರ್ ಹಾಕುವ ಕೆಲಸದಿಂದ ಹಿಡಿದು ತನ್ನ ಸಂಸಾರ ವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ನಡೆಸುವ ಶಕ್ತಿ ಹೊಂದಿದ್ದಾಳೆ ಈ ಮಹಿಳೆ..

Advertisements

ನಾವು ಈಗಿನ ಪ್ರಪಂಚದಲ್ಲಿ ನೋಡ್ತಿದೀವಿ ಪುರುಷರಿಗೆ ಸಮಾನರಂತೆ ಮಹಿಳೆಯರು ಕೆಲಸವನ್ನು ಮಾಡುತ್ತಿರುವುದನ್ನು.. ಹಾಗೆಯೇ ಇಲ್ಲೊಬ್ಬ ಮಹಿಳೆ ಮಾಡಿದ ಕೆಲಸ ಎಲ್ಲರನ್ನ ಆಶ್ಚರ್ಯವನ್ನಾಗಿಸಿದೆ.. ಈ ಪೊಟೊವನ್ನು ನೋಡಿ.. ಈ ಮಹಿಳೆ ತನ್ನ ಅಪ್ಪನ ಜೊತೆ ಸೇರಿಕೊಂಡು ಲಾರಿ ಡ್ರೈವಿಂಗ್ ಮಾಡ್ತಾರೆ. ಅಷ್ಟೇ ಅಲ್ಲದೇ ಗಂಡಸರು ಕಷ್ಟ ಪಟ್ಟು ತೆಗೆಯುವ ಲಾರಿ ಟೈಯರ್ ಅನ್ನು ತುಂಬಾ ಸುಲಭವಾಗಿ ಬಿಚ್ಚಿ ಬೇರೆ ಟೈಯರನ್ನ ಹಾಕಿದ್ದಾರೆ.. ಇನ್ನೂ ಲಾರಿಯಲ್ಲಿ ಲೋಡ್ ಹಾಕಿಕೊಂಡು ದೂರ ಪ್ರಯಾಣವನ್ನು ಕೂಡ ಹೋಗುತ್ತಾರೆ ಈ ಮಹಿಳೆ.

ಬೆಳಗಿನ ಜಾವದಲ್ಲಿ ತಂದೆ ಡ್ರೈವಿಂಗ್ ಮಾಡಿದರೆ ಮಗಳು ರಾತ್ರಿಯ ವೇಳೆ ಲಾರಿ ಡ್ರೈವಿಂಗ್ ಮಾಡ್ತಾರೆ.. ಹಾಗೆ ತನ್ನ ತಂದೆಗೆ ಏನಾದರು ಸುಸ್ತಾದರೆ ಅವರನ್ನು ರೆಸ್ಟ್ ಮಾಡಲು ಹೇಳಿ ಈ ಮಹಿಳೆ ಅಪ್ಪನ ಕೆಲಸವನ್ನು ಮುಂದುವರೆಸುತ್ತಾಳೆ.. ಇನ್ನು ಮಹಿಳೆಯರು ಇದೇ ಕೆಲಸವನ್ನ ಮಾಡ್ಬೇಕು ಅವರಿಗೆ ಆ ಕೆಲಸವನ್ನು ಬಿಟ್ಟರೆ ಬೇರೆ ಯಾವ ಕೆಲಸ ಬರೋದಿಲ್ಲ ಅನ್ನೋರಿಗೆ ಈ ಮಹಿಳೆಯೇ ದೊಡ್ಡ ಉದಾಹರಣೆ.. ನಿಜಕ್ಕು ತಂದೆಗೆ ಬೆನ್ನೆಲುಬಾಗಿ ನಿಂತಿರುವ ಈ ಮಹಿಳೆ ನಿಜಕ್ಕೂ ಗ್ರೇಟ್.