Advertisements

ಮನೆ ಬಾಗಿಲ ಮುಂದೆ ಮಹಿಳೆ ಇಡುತ್ತಿದ್ದ ಊಟ ತಿಂದು ಮುದುಕ ಮಾಡಿದ ಕೆಲಸ ನೋಡಿದ್ರೆ ಗಾಬರಿ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಕೆಲವೊಂದು ಬಾರಿ ಮನುಷ್ಯನ ಜೀವನದಲ್ಲಿ ನಡೆಯುವಂತಹ ಕೆಲವು ಘಟನೆಗಳನ್ನು ನಿಜವಾಗಿ ನಡೆದಿದೆ ಎಂದು ನಂಬಲು ತುಂಬಾ ಕಷ್ಟವಾಗುತ್ತದೆ.‌. ಆದರೆ ಆ ಘಟನೆಗಳು ನಿಜವಾಗಿ ನಡೆದಿರುತ್ತದೆ. ಈ ಮಾಹಿತಿಯಲ್ಲಿ ತಮಿಳುನಾಡಿನಲ್ಲಿ ವಾಸ ಮಾಡುತ್ತಿರುವ ವಿಂದ್ಯಾ ಎಂಬ ಮಹಿಳೆಯೊಬ್ಬರ ಜೀವನದಲ್ಲಿ ನಡೆದಿರುವಂತಹ ಒಂದು ನೈಜ ಘಟನೆ ಬಗ್ಗೆ  ತಿಳಿದುಕೊಳ್ಳೋಣ.. ವಿಂದ್ಯಾ ತನ್ನ ಪತಿ ಸುಂದರೇಶ್, ಮಗಳು ಶಾಮಿಲಿ, ಮಗ ಆರವ್ ಜೊತೆ ತಮಿಳುನಾಡಿನ ಒಂದು ಹಳ್ಳಿಯಲ್ಲಿ ತುಂಬಾ ಖುಷಿಯಿಂದ ಜೀವನ ಮಾಡುತ್ತಿದ್ದಳು. ಮಗಳು ಶಾಮಿಲಿ ಈಗ ಪಿಯುಸಿ ಓದುತ್ತಿದ್ದರೆ, ಮಗ ಆರವ್ ತನ್ನ ವಿಧ್ಯಾಭ್ಯಾಸ ಮುಗಿಸಿ ಕೆಲಸ ಹುಡುಕಲು ಚೆನ್ನೈ ಸಿಟಿಯಲ್ಲಿ ಕೆಲವು ದಿನಗಳಿಂದ ಅಲೆದಾಡುತ್ತಿದ್ದ..

Advertisements

ಪ್ರತಿದಿನ ಬೆಳಗ್ಗೆ ವಿಂದ್ಯಾಳ ಗಂಡ ಸುಂದರೇಶ್ ಕೆಲಸಕ್ಕೆ ಹೋದರೆ ಮಗಳು ಶಾಮಿಲಿ ಕಾಲೇಜಿಗೆ ಹೋಗುತ್ತಿದ್ದಳು. ವಿಂದ್ಯಾ ತನ್ನ ಎಲ್ಲಾ ಮನೆ ಕೆಲಸಗಳನ್ನು ಮುಗಿಸಿ ಬೆಳಗ್ಗೆ ತಿಂಡಿ ತಿಂದು ಮನೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಳು.. ವಿಂದ್ಯಾ ಒಳ್ಳೆಯ ಸ್ವಭಾವದ ಮಹಿಳೆಯಾಗಿದ್ದಳು. ವಿಂದ್ಯಾ ಅವರಿಗೆ ಒಂದು ಅಭ್ಯಾಸ ಇತ್ತು.. ಅದೇನೆಂದರೆ ಪ್ರತಿ ದಿನ ವಿಂದ್ಯಾ ತನ್ನ ಮನೆಯ ಮುಂದೆ ಒಂದು ತಟ್ಟೆಯಲ್ಲಿ ತಾನು ತಿನ್ನಲು ಮಾಡಿದಂತಹ ನಾಷ್ಟ ತಿಂಡಿಯನ್ನು ತಪ್ಪದೇ ಪ್ರತಿದಿನ ಇಡುತ್ತಿದ್ದರು. ಪಕ್ಷಿಗಳು ಅಥವಾ ಪ್ರಾಣಿಗಳು ಇದನ್ನು ತಿನ್ನಲಿ ಎಂಬುದು ವಿಂದ್ಯಾಳ ಆಸೆಯಾಗಿತ್ತು.

ಆದರೆ ವಿಂದ್ಯಾ ಮನೆ ಮುಂದೆ ಇಡುತ್ತಿದ್ದ ಊಟವನ್ನು ಪ್ರಾಣಿ ಪಕ್ಷಿಗಳು ತಿನ್ನದೇ ಒಬ್ಬ ವಯಸ್ಸಾದಂತಹ ಅಜ್ಜರೊಬ್ಬರು  ಪ್ರತಿದಿನ ಅಲ್ಲಿಗೆ ಬಂದು ವಿಂದ್ಯಾ ಇಡುತ್ತಿದ್ದ ಊಟವನ್ನು ತಿನ್ನಲು ಶುರುಮಾಡಿದರು. ಈ ರೀತಿ ಅಜ್ಜ ವಿಂದ್ಯಾ ಇಡುತ್ತಿದ್ದ ಊಟವನ್ನು ತಿನ್ನಲು ಪ್ರತಿದಿಮ ಅಲ್ಲಿಗೆ ಬರುತ್ತಿದ್ದರು. ಅಜ್ಜ ತಾನು ಇಡುತ್ತಿದ್ದ ಊಟವನ್ನು ತಿನ್ನುತ್ತಿರುವುದನ್ನು ನೋಡಿದ ವಿಂದ್ಯಾ ಅಜ್ಜನಿಗೆ ಹಸಿವಾಗಿದೆ ಅನಿಸುತ್ತದೆ ತಿನ್ನಲಿ ಬಿಡು ಎಂದು ಸುಮ್ಮನಾಗುತ್ತಿದ್ದಳು.. ಆದರೆ ಆ ವಯಸ್ಸಾದ ತಾತ ತಟ್ಟೆಯಲ್ಲಿದ್ದ ತಿಂಡಿಯನ್ನು ತಿಂದ ನಂತರ ಏನೋ ಜೋರಾಗಿ ಮಾತನಾಡಿ ಅಲ್ಲಿಂದ ಹೋಗುತ್ತಿದ್ದ. ದೂರದಲ್ಲಿ ನಿಂತು ತಾತ ನಾಷ್ಟ ತಿನ್ನುವುದನ್ನು ನೋಡುತ್ತಿದ್ದ ವಿಂದ್ಯಾಗೆ ಅಜ್ಜ ಏನು ಮಾತನಾಡುತ್ತಿದ್ದಾನೆ ಎಂಬುದು ಕೇಳಿಸುತ್ತಿರಲಿಲ್ಲ.

ವಿಂದ್ಯಾಗೆ ಕೂತೂಹಲ ಉಂಟಾಗುತ್ತದೆ.. ಅಜ್ಜ ತಿಂಡಿ ತಿಂದ ನಂತರ ಏನು ಮಾತನಾಡುತ್ತಾನೆ ನೋಡೊಣ ಎಂದು ಅಜ್ಜನ ಬಳಿ ಹೋಗಿ ವಿಂದ್ಯಾ ನಿಂತುಕೊಂಡರು. ಎಂದಿನಂತೆ ವಿಂದ್ಯಾ ಇಟ್ಟಿದ್ದ ತಿಂಡಿಯನ್ನು ತಿಂದ ಅಜ್ಜ ಈ ರೀತಿ ವಿಂದ್ಯಾಳನ್ನು ನೋಡುತ್ತಾ ಹೇಳಿದ.. ನೀನು ಮಾಡಿದ ಪಾಪ ನಿನ್ನ ಹತ್ತಿರವೇ ಇರುತ್ತದೆ. ನೀನು ಮಾಡಿದ ಪುಣ್ಯ ನಿನ್ನ ಬಳಿಯೇ ಮತ್ತೆ ಬರುತ್ತದೆ ಎಂದು ಅಜ್ಜ ಹೇಳಿದ. ತಾತನ ಈ ವಿಚಿತ್ರ ಮಾತನ್ನು ಕೇಳಿಸಿಕೊಂಡ ವಿಂದ್ಯಾ ಅಜ್ಜ ಯಾಕೆ ಈಗೆ ಹೇಳುತ್ತಿದ್ದಾನೆ ಎಂದು ಯೋಚನೆ ಮಾಡುತ್ತಾಳೆ.. ಇನ್ನೂ ಮರುದಿನವೂ ಕೂಡ ಅಜ್ಜ ಅದೇ ಜಾಗಕ್ಕೆ ಬಂದು ತಿಂಡಿಯನ್ನು ತಿಂದು ಪಾಪ ಪುಣ್ಯದ ಬಗ್ಗೆ ಮಾತನಾಡುತ್ತಾನೆ. ಪ್ರತಿದಿನ ಈ ಅಜ್ಜ ಇದೇ ಮಾತನ್ನು ಹೇಳುತ್ತಾ ವಿಂದ್ಯಾ ಇಡುತ್ತಿದ್ದ ತಿಂಡಿಯನ್ನು ತಿಂದು ಹೋಗುತ್ತಿದ್ದ.

ಅಜ್ಜನ ಈ ಅವತಾರ ನೋಡಿ ಬಹಳ ಆಕ್ರೋಶಗೊಂಡ ವಿಂದ್ಯಾ ಒಂದು ದಿನ ಈ ಮುದುಕನಿಗೆ ಅನ್ನದಲ್ಲಿ ಏನಾದರೂ ಹಾಕಿ ಮುಗಿಸಬಿಡಬೇಕು ಎಂದು ತಿರ್ಮಾನ ಮಾಡುತ್ತಾಳೆ.. ಅದರಂತೆ ಬೆಳಗ್ಗೆ ಮಾಡಿದ್ದ ಇಡ್ಲಿಯನ್ನು ವಿ’ಷ’ವನ್ನು ಬೆರೆಸಿ ಇನ್ನೇನು ಮನೆ ಮುಂದೆ ಮುದುಕನಿಗೆ ತಿನ್ನಲು ಇಡಬೇಕು ಅನ್ನುವಷ್ಟರಲ್ಲಿ ವಿಂದ್ಯಾಳ ಹೊಳ ಮನಸ್ಸು ಬೇಡ.. ಈ ರೀತಿ ಪಾಪದ ಕೆಲಸವನ್ನು ಮಾಡಬೇಡ ಎಂದು ಅನಿಸುತ್ತದೆ. ನಂತರ ವಿಂದ್ಯಾ ತನ್ನ ಮನಸ್ಸನ್ನು ಬದಲಿಸಿಕೊಂಡಳು.. ಅಜ್ಜನಿಗೆ ವಯಸ್ಸಾಗಿದೆ ಬಾಯಿಗೆ ಬಂದಾಗೆ ಮಾತನಾಡುತ್ತಿರುತ್ತಾರೆ.. ಆತ ಮಾಡಿದ ತಪ್ಪಿಗೆ ನಾನೇಕೆ ತಾತನ ಜೀ’ವ ತೆಗೆದು ಪಾಪ ಕಟ್ಟುಕೊಳ್ಳಲಿ ಎಂದು ಮನಸ್ಸು ಬದಲಿಸಿ ಬೇರೆ ತಟ್ಟೆಯಲ್ಲಿ ಅಜ್ಜನಿಗೆ ತಿಂಡಿಯನ್ನು ಇಡುತ್ತಾಳೆ.

ಕೆಲ ಸಮಯದ ಬಳಿಕ ಮತ್ತೆ ಆ ಅಜ್ಜ ಅಲ್ಲಿಗೆ ಬಂದು ಇಡ್ಲಿಯನ್ನು ತಿಂದು ಮತ್ತೆ ಪಾಪ ಪುಣ್ಯದ ಡೈಲಾಗ್ ಹೇಳಿದ.. ಇದನ್ನು ಕೇಳಿಸಿಕೊಂಡ ವಿಂದ್ಯಾಗೆ ಪಿತ್ತ ನೆತ್ತಿಗೇರಿ ಆ ಅಜ್ಜನಿಗೆ ಬೈಯ್ಯಲು ಶುರುಮಾಡುತ್ತಾಳೆ. ಅಯ್ಯೋ ಪಾ’ಪಿ ನಿನ್ನ ಮು’ಗಿಸಬೇಕು ಅಂದುಕೊಂಡೆ ಆದರೆ ನನ್ನ ಮನಸ್ಸು ಬದಲಿಸಿಕೊಂಡೆ.. ಈಗ ನೋಡಿದರೆ ಮತ್ತೆ ಅದೇ ರೀತಿ ಮಾತನಾಡುತ್ತಿದ್ದೀಯಾ ಎಂದು ಅಜ್ಜನಿಗೆ ಬೈದು ವಿಂದ್ಯಾ ತನ್ನ ಮನೆಯ ಹೊಳಗೆ ಹೋದಳು. ಇನ್ನೂ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಯಾರೊ ವಿಂದ್ಯಾ ಮನೆಯ ಬಾಗಿಲನ್ನು ಬಡಿದ ಹಾಗೆ ಶಬ್ದ ಕೇಳಿಸಿತು.. ಬಾಗಿಲು ತೆಗೆದು ನೋಡಿದರೆ ಯಾರೋ ಒಬ್ಬ ಮಧ್ಯ ವಯಸ್ಸಿನ ಯುವಕ ಹರಿದ ಅಂಗಿ ಮತ್ತು ಪ್ಯಾಂಟ್ ಹಾಕಿಕೊಂಡು ಬಾಗಿಲಿನ ಬಳಿ ನಿಂತಿದ್ದ.

ಆ ಯುವಕನನ್ನು ಸೂಕ್ಷ್ಮವಾಗಿ ಗಮನಿಸಿದ ವಿಂದ್ಯಾಗೆ ಅಲ್ಲಿ ನಿಂತಿರುವ ಬಿಕ್ಷುಕ ಯುವಕ ಬೇರಾರೂ ಅಲ್ಲ ಕೆಲ ತಿಂಗಳ ಹಿಂದೆ ಸಿಟಿಗೆ ಕೆಲಸ ಹುಡುಕಲು ಹೋಗಿದ್ದ ವಿಂದ್ಯಾ ಮಗ ಆರವ್ ಎಂಬುದು ಗೊತ್ತಾಯಿತು. ನಂತರ ವಿಂದ್ಯಾ ಅರವ್ ಗೆ ನಿನಗೆ ಏನಾಯಿತು, ಏಕೆ ಈ ರೀತಿ ಹರಿದ ಬಟ್ಟೆಯಲ್ಲಿ ಬಂದಿದ್ದೀಯಾ.. ವಿದ್ಯಾಭ್ಯಾಸ ಮುಗಿಸಿ ಸಿಟಿಗೆ ಕೆಲಸ ಹುಡುಕಲು ಹೋದ ನಿನಗೆ ಏನಾಯಿತು, ಕೆಲಸ ಸಿಗಲಿಲ್ವಾ ಎಂದು ಕೇಳುತ್ತಾಳೆ. ಹಾಗ ಆರವ್ ಅಮ್ಮನ ಪ್ರಶ್ನೆಗೆ ಈ ರೀತಿ ಉತ್ತರ ಕೊಟ್ಟ.. ಇಲ್ಲ ಸೀಟಿಯಲ್ಲಿ ಎಷ್ಟು ಹುಡುಕಿದರು ನನಗೆ ಸರಿ ಹೊಂದುವ ಕೆಲಸ ಸಿಗಲಿಲ್ಲಾ, ಕೈಯಲ್ಲಿ ತೆಗೆದುಕೊಂಡ ಹೋಗಿದ್ದ ಹಣವೆಲ್ಲ ಖಾಲಿಯಾಗಿದೆ.

ಸರಿ ಇನ್ನೇನು ಸಿಟಿಯಲ್ಲಿ ಕೆಲಸ ಹುಡುಕಿದರು ಪ್ರಯೋಜನವಿಲ್ಲ ಎಂದು ಗೊತ್ತಾಗಿ ಊರಿಗೆ ಬರಲು ಬಸ್ ಟಿಕೇಟ್ ಗೂ ಸಹಿತ ನನ್ನ ಬಳಿ ದುಡ್ಡು ಇರಲಿಲ್ಲ ಈಗಾಗಿ ನಾನು ನಡೆದುಕೊಂಡೆ ಊರಿಗೆ ಬರುತ್ತಿದ್ದೆ.. ಆಗ ಸುಸ್ತಾದ ಕಾರಣ ತಲೆ ತಿ’ರುಗಿ ನಾನು ಕೆಳಗೆ ಬಿ’ದ್ದುಬಿಟ್ಟೆ. ನಾನು ಕೆಳಗೆ ಬಿದ್ದಿದ್ದನ್ನು ನೋಡಿದ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ರಸ್ತೆ ಮೇಲೆ ಬಿದ್ದಿದ್ದ ನನ್ನನ್ನು ಎತ್ತಿಕೊಂಡು ಹೋಗಿ, ಒಂದು ಮರದ ಕೆಳಗೆ ಮಲಗಿಸಿ.. ಕುಡಿಯಲು ನೀರು ಕೊಟ್ಟು ಪ್ರಜ್ಞೆ ತಪ್ಪಿದ ನನ್ನನ್ನು ಎದ್ದೇಳಿಸಿದರು. ಕಣ್ಣು ತೆರೆದು ನೋಡಿದರೆ ಬಾಗಿದ ವಯಸ್ಸಾದ ಒಬ್ಬ ಅಜ್ಜ ಅಲ್ಲಿ ನಿಂತಿದ್ದರು. ಆ ಅಜ್ಜನೇ ಇಂದು ನನ್ನ ಪ್ರಾ’ಣ ಕಾಪಾಡಿದರು ಎಂದು ಮಗ ಆರವ್ ಹೇಳಿದ. ಮಗ ಹೇಳಿದ ಮಾತುಗಳನ್ನು ಕೇಳಿ ವಿಂದ್ಯಾಗೆ ಆಶ್ಚರ್ಯವಾಯಿತು..

ಬಾಗಿದ ಅಜ್ಜ ಎಂದರೆ ನಾನು ಪ್ರತಿದಿನ ಇಡುತ್ತಿದ್ದ ತಿಂಡಿಯನ್ನು ತಿಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದ ಅಜ್ಜನೇ ಇರಬಹುದಾ ಎಂದು ವಿಂದ್ಯಾಗೆ ಡೌಟ್ ಶುರುವಾಯಿತು. ಆ ಅಜ್ಜ ಯಾರು ಮಗನೆ ಎಂದು ಆರವ್ ಗೆ ವಿಂದ್ಯಾ ಕೇಳುತ್ತಾಳೆ.. ಆಗ ತಾತ ಈ ಕಡೆ ಬನ್ನಿ ಎಂದು ತನ್ನ ಪ್ರಾ’ಣ ಕಾಪಾಡಿದ ಅಜ್ಜನನ್ನು ಆರವ್ ಕೂಗಿದ. ಆಗ ಅಜ್ಜ ಮನೆಯ ಎದುರಿಗೆ ಬಂದು ನಿಂತರು.. ಹೌದು. ವಿಂದ್ಯಾ ಯಾವ ಅಜ್ಜನ ಜೀ’ವವನ್ನು ತೆ’ಗೆಯಲು ಮುಂದಾಗಿದ್ದಳೋ ಅದೇ ಅಜ್ಜ ವಿಂದ್ಯಾಳ ಮಗನ ಪ್ರಾಣವನ್ನು ಕಾಪಾಡಿದ್ದ.  ಆ ಅಜ್ಜನನ್ನು ನೋಡಿ ಕಣ್ಣೀರು ಸುರಿಸಿದಳು..

ನಂತರ ಆ  ಅಜ್ಜನ ಕಾಲಿಗೆ ಬಿದ್ದು ದಯವಿಟ್ಟು ಕ್ಷಮಿಸಿ. ನಿಮ್ಮ ಪಾಪ ಪುಣ್ಯದ ಮಾತು ನನಗೀಗ ಅರ್ಥವಾಗುತ್ತಿದೆ ಎಂದು ಕ್ಷಮೆ ಕೇಳುತ್ತಾಳೆ. ಕೊನೆಗೆ ಮತ್ತೆ ಆ ಅಜ್ಜ ನೀನು ಮಾಡಿದ ಪಾಪ ನಿನ್ನ ಹತ್ತಿರವೇ ಇರುತ್ತದೆ, ನೀನು ಮಾಡಿದ ಪುಣ್ಯ ನಿನ್ನ ಬಳಿಯೇ ಮತ್ತೆ ಬರುತ್ತದೆ ಎಂದು ಹೇಳಿ ಅಲ್ಲಿಂದ ಹೊರಟರು. ಸ್ನೇಹಿತರೆ ಈ ಕಥೆಯಿಂದ ನಿಮಗೆ ಅರ್ಥವಾದ ವಿಷಯ ಏನೆಂದರೆ.. ನಾವು ಪಾಪದ ಕೆಲಸ ಮಾಡಿದರೆ ಅದು ನಮ್ಮನ್ನೇ ಹಾಳು ಮಾಡುತ್ತದೆ. ನಾವು ಪುಣ್ಯದ ಕೆಲಸ ಮಾಡಿದರೆ ಆ ಪುಣ್ಯ ನಮ್ಮನ್ಮು ಹೇಗಾದರೂ ಕಾಪಾಡುತ್ತದೆ ಎಂದು.. ಈ ಘ’ಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.