Advertisements

ಬಸ್ ಸ್ಟಾಪ್ ನಲ್ಲಿ ಪೆನ್ ಮಾರುತ್ತಿದ್ದ ಅಜ್ಜನನ್ನು ರಾತ್ರಿ ಮನೆಗೆ ಕರೆದೊಯ್ದು ಈ ಮಹಿಳೆ ಮಾಡಿದ್ದೇನು ಗೊತ್ತಾ? ನಿಜಕ್ಕೂ ಶಾಕ್..

Inspire Kannada Mahiti

ನಮಸ್ತೆ ಸ್ನೇಹಿತರೆ, ನಮ್ಮಲ್ಲಿ ಕೆಲವರು ಪುಟಪಾತ್ ನಲ್ಲಿ, ಮತ್ತು ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುವವರ ಹತ್ತಿರ ತುಂಬಾ ಚೌಕಾಸಿ ಮಾಡಿ ವಸ್ತುಗಳನ್ನು ಕೊಂಡುಕೊಳ್ಳುತ್ತೇವೆ. ಆದರೆ ದೊಡ್ಡ ದೊಡ್ಡ ಶಾಪಿಂಗ್ ಮಾಲ್ ಗಳಲ್ಲಿ ಒಂದು ರೂಪಾಯಿಯ ಚೌಕಾಸಿ ಮಾಡುವ ಅವಕಾಶ ಇರುವುದಿಲ್ಲ ವಸ್ತುಗಳ ಮೇಲೆ ಇರುವ ಬೆಲೆಯನ್ನು ಕೊಟ್ಟು ತೆಗೆದುಕೊಂಡು ಹೋಗಬೇಕಷ್ಟೇ.‌. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಾಪಾರ ಅಜ್ಜನ ಜೀವನದಲ್ಲಿ ನಡೆದಂತಹ ಒಂದು ನೈಜ ಘಟನೆಯ ಬಗ್ಗೆ ತಿಳಿದುಕೊಳ್ಳೋಣ. ಚೆನ್ನೈ ನಲ್ಲಿ ವಾಸವಾಗಿರುವಂತಹ ಸಂಗೀತ ಎಂಬ ಮಹಿಳೆ ಒಂದು ದಿನ ತನ್ನ ಹುಟ್ಟುಹಬ್ಬಕ್ಕೆ ಡ್ರೆಸ್ ಅನ್ನು ಕೊಂಡುಕೊಳ್ಳಲು ಮಾರ್ಕೇಟ್ ಗೆ ಹೋಗುತ್ತಾಳೆ..

Advertisements

ಇನ್ನೂ ಸಂಗೀತ ಅವರು ಒಂದು ಲಕ್ಷ ಸಂಪಾದನೆ ಮಾಡುವ ಉದ್ಯೋಗಸ್ಥ ಮಹಿಳೆಯಾಗಿದ್ದಾರೆ. ಸಂಗೀತ ಅವರು ಹೊಸ ಡ್ರೆಸ್ ಗಳನ್ನು ಖರೀದಿ ಮಾಡಿ ಮನೆಗೆ ಹೋಗಲು ಬಸ್ ಸ್ಟಾಪ್ ಬಳಿ, ಬಸ್ ಗೋಸ್ಕರ ಕಾಯುತ್ತಿರುತ್ತಾರೆ. ಅದೆ ಸಮಯಕ್ಕೆ ಮಳೆಯೂ ಕೂಡ ಜೋರಾಗಿ ಬರುತ್ತದೆ.. ಆಗ ವಯಸ್ಸಾದ ಒಬ್ಬ ಅಜ್ಜ ಬಸ್ ಸ್ಟಾಪ್ ನ ಬಳಿ ಬಂದು ನಿಂತುಕೊಳ್ಳುತ್ತಾರೆ.. ಆ ಅಜ್ಜನ ಕೈಯಲ್ಲಿ ಮನೆಗೆ ಬೇಕಾದಂತಹ ಕೆಲವೊಂದು ವಸ್ತುಗಳು ಇರುತ್ತವೆ. ಮಳೆಯಿಂದ ಬಸ್ ಸ್ಟಾಪ್ ನ ಬಳಿ ನಿಂತುಕೊಂಡಿದ್ದ ಜನಗಳ ಬಳಿ ಹೋಗಿ ಸರ್ ಮನೆಗೆ ಬೇಕಾದಂತಹ ಬಾಚಣಿಗೆ, ಎಟಿಮ್ ಕವರ್ ಗಳು, ಮತ್ತು ಪೆನ್ ಗಳಿವೆ ತಗೊಳಿ ಎಂದು ಕೇಳಿಕೊಳ್ಳುತ್ತಾ ಆ ಅಜ್ಜ ವ್ಯಾಪಾರ ಮಾಡುತ್ತಿದ್ದರು..

ಮಳೆಯಲ್ಲೂ ಕೂಡ ವ್ಯಾಪಾರ ಮಾಡುತ್ತಿದ್ದ ಅಜ್ಜನನ್ನು ನೋಡಿ ಕರುಣೆಯಿಂದ ಅವರ ಹತ್ತಿರ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು. ಇನ್ನೂ ಕೆಲವರು ಈ ತಾತನ ಬಳಿ ಕೊಂಡುಕೊಳ್ಳಲು ಹಿಂದೆ ಮುಂದೆ ನೋಡುತ್ತಿರುತ್ತಾರೆ. ಕೊನೆಗೆ ಸಂಗೀತ ಅವರ ಹತ್ತಿರ ಬಂದ ಅಜ್ಜ ನಿನಗೆನಾದರೂ ಬೇಕಾದರೆ ತಗೋ ಎಂದು ಕೇಳುತ್ತಾರೆ. ನಂತರ ಸಂಗೀತ ಒಂದು ಎಟಿಮ್ ಕಾರ್ಡ್ ಕವರ್ ಅನ್ನು ಕೊಂಡುಕೊಳ್ಳುತ್ತಾರೆ.‌ ಇನ್ನೂ ವಯಸ್ಸಾದ ಕಾರಣ ಆ ಅಜ್ಜನ ಕೈಯಲ್ಲಿ ಒಂದೇ ಕಡೆಯಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ.. ಕೊನೆಗೆ ಬಸ್ ಸ್ಟಾಪ್ ನಲ್ಲಿ ಇದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ. ಮಳೆಯೂ ಕೂಡ ಕಡಿಮೆ ಆಗುವ ಲಕ್ಷಣಗಳು ಕಾಣಲಿಲ್ಲ..

ಆ ಅಜ್ಜ ಬಸ್ ಸ್ಟಾಪ್ ನ ಬಳಿ ತುಂಬಾ ಸಮಯ ಕೂತಿದ್ದರು. ಸ್ವಲ್ಪ ಸಮಯದ ನಂತರ ಅಜ್ಜನ ಬಳಿ ಹೋದ ಸಂಗೀತ ಅವರು ಮಾತನಾಡಲು ಶುರುಮಾಡುತ್ತಾರೆ‌.. ಅಜ್ಜ ಇದು ಮಳೆಗಾಲ ಛತ್ರಿಗಳನ್ನು ಮಾರಾಟ ಮಾಡಿದ್ದರೆ ಒಳ್ಳೆಯ ಲಾಭ ಬರುತ್ತಿತ್ತು, ಈಗ ಬಹಳ ಜನ ಛತ್ರಿಗಳನ್ನು ಕೊಂಡುಕೊಳ್ಳುತ್ತಾರೆ ಎಂದು ಸಲಹೆ ಕೊಡುತ್ತಾರೆ. ಆಗ ಅಜ್ಜ ಸಂಗೀತಾಗೆ ನೋಡಮ್ಮ ಅಷ್ಟೊಂದು ಬಂಡವಾಳ ಹಾಕಿ ವ್ಯಾಪಾರ ಮಾಡಲು ನನ್ನ ಬಳಿ ದುಡ್ಡು ಇಲ್ಲ ಎಂದು ಹೇಳುತ್ತಾರೆ.. ನಂತರ ಸಂಗೀತ ಅವರು ತಾತ ನಿಮಗೆ ಮಕ್ಕಳು ಇಲ್ವಾ ಅವರು ಬಳಿ ಹಣ ಪಡೆಯಬಹುದಲ್ವಾ ಎಂದು ಪುನಃ ಪ್ರಶ್ನೆ ಮಾಡುತ್ತಾರೆ. ಇನ್ನೂ ಮಕ್ಕಳ ಬಗ್ಗೆ ಸಂಗೀತ ಅವರು ಪ್ರಶ್ನೆ ಮಾಡಿದ ತಕ್ಷಣ ಅಜ್ಜನ ಕಣ್ಣು ಒದ್ದೆಯಾಗುತ್ತದೆ..

ನನಗೂ ಒಬ್ಬ ಗಂಡು ಮಗು ಇದ್ದಾನೆ ಎಂದು ಹೇಳುತ್ತಾರೆ. ಮಕ್ಕಳ ಹೆಸರು ಕೇಳಿದ ತಕ್ಷಣ ಅಜ್ಜನ ಕಣ್ಣಲ್ಲಿ ನೀರು ಬಂದಿದ್ದು ನೋಡಿ ಸಂಗೀತ ಅವರು ಬೇಸರವಾಗಿ ಮತ್ತೆ ಪ್ರಶ್ನೆ ಮಾಡುವುದನ್ನು ‌ನಿಲ್ಲಿಸಿ ಬಿಡುತ್ತಾಳೆ.‌. ಆಗಲೇ ಸಂಜೆಯಾಗ ತೊಡುಗುತ್ತದೆ ಮಳೆ ಮಾತ್ರ ಇನ್ನೂ ನಿಂತಿರುವುದಿಲ್ಲ.. ಜೋರಾಗಿ ಮಳೆ ಬರುತ್ತಿದ್ದರಿಂದ ಅಜ್ಜ ಇನ್ನೂ ಈ ಮಳೆ ಈಗೆ ಬೀಳುತ್ತಿದ್ದರೆ ರಾತ್ರಿ ನಾನು ಎಲ್ಲಿ ಹೋಗಿ ಮಲಗಲಿ ಎಂದು ತಮಗೆ ತಾವೇ ಮಾತನಡಿಕೊಳ್ಳುತ್ತಾರೆ. ಇದನ್ನು ಕೇಳಿಸಿಕೊಂಡ ಸಂಗೀತ ಅವರು ಯಾಕೆ ತಾತ ಮಗ ಇದ್ದಾನೆ ಅಲ್ವಾ, ಮನೆಯಲ್ಲಿ ನಿನಗೆ ಮಲಗಲು ಜಾಗ ಇಲ್ಲವಾ.. ಅಥವಾ ಮಗನ ಮನೆಗೆ ನೀವು ಹೋಗವುದಿಲ್ಲವಾ ಮಗ ಎಲ್ಲಿದ್ದಾನೆ ಎಂದು ಪುನಃ ಪ್ರಶ್ನೆ ಮಾಡುತ್ತಾರೆ.

ಮಗಳೇ ನನ್ನ ಮಗ ಇದೇ ಊರಲ್ಲಿ ಇದ್ದಾನೆ ಆತನಿಗೆ ಮದುವೆ ಆಗಿ 4 ವರ್ಷದ ಮೊಮ್ಮಗಳು ಇದ್ದಾಳೆ ಎಂದು ಹೇಳುತ್ತಾರೆ.. ನಾನು ಚೆನ್ನಾಗಿ ಸಂಪದಾನೆ ಮಾಡಿ ತಂದುಕೊಡುತ್ತಿದ್ದಾಗ ಮಗ ಮತ್ತು ಸೊಸೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಕಾಲಕ್ರಮೇಣ ನನ್ನ ಆರೋಗ್ಯ ಕೈಕೊಡುತ್ತದೆ.. ನನ್ನ ಸಂಪಾದನೆಯೂ ಕೂಡ ನಿಂತು ಹೋಗುತ್ತದೆ. ಇನ್ನೂ ನನ್ನ ಮಗ ಹೆಂಡತಿ ಮಾತು ಕೇಳಿ ನನ್ನ ಮೇಲೆ ಕೋಪ ಮಾಡಿಕೊಳ್ಳುವುದನ್ನು ಶುರು ಮಾಡಿದ. ಇಷ್ಟು ವಯಸ್ಸಾದರೂ ಮಾಡೋದೆನು ಇಲ್ಲಾ ಎಲ್ಲಾದರೂ ಹೊಗಬಾರ್ದಾ ಎಂದು ಮಗ ಸೊಸೆ ಕೋಪದಲ್ಲಿ ಮಾತನಾಡುತ್ತಾರೆ.. ಕೊನೆಗೆ ಅವರ ಮಾತುಗಳನ್ನು ಕೇಳದೆ ಯಾರಿಗೂ ಬಾರವಾಗಿ ಇರಬಾರದು ಎಂದು ಅಂದೇ ಮಗನ ಮನೆ ಬಿಟ್ಟು ಬಂದೆ.

ಬೆಳಗ್ಗೆ ಸಮಯದಲ್ಲಿ ಬಸ್ ಸ್ಟಾಪ್ ನಲ್ಲಿ ವ್ಯಾಪಾರ ಮಾಡುತ್ತ ಅದರಿಂದ ಬರುತ್ತಿರುವ ಹಣದಲ್ಲಿ ಹೋಟೆಲ್ ನಲ್ಲಿ ಊಟ ಮಾಡುತ್ತೇನೆ.‌ ರಾತ್ರಿ ಆದರೆ ಪುಟ್ ಪಾತ್ ನಲ್ಲಿ ಮಲಗಿ ಜೀವನ ನಡೆಸುತ್ತಿದ್ದೇನೆ ಎಂದು ಈ ಅಜ್ಜ ಭಾವುಕರಾಗಿ ಮಾತನಾಡುತ್ತಾರೆ‌.. ಅಜ್ಜನ ಮಾತುಗಳನ್ನು ಕೇಳಿದ ಸಂಗೀತ ಅವರು ಕಣ್ಣೀರು ಇಡುತ್ತಾ ಒಂದು ಗಟ್ಟಿ ನಿರ್ಧಾರವನ್ನು ಮಾಡುತ್ತಾರೆ. ಆ ಅಜ್ಜನನ್ನು ಅಂದೇ ಮನೆಗೆ ಕರೆದುಕೊಂಡು ಹೋಗಲು ನಿರ್ದಾರ ಮಾಡಿ ಕರೆದುಕೊಂಡು ಹೋಗುತ್ತಾರೆ. ಅಜ್ಜ ನೀವು ಇನ್ನು ಮುಂದೆ ಪುಟ್ ಪಾತ್ ನಲ್ಲಿ ಮಲಗುವ ಅವಶ್ಯಕತೆ ಇಲ್ಲಾ. ನನ್ನನ್ನು ನಿಮ್ಮ ಸ್ವಂತ ಮಗಳೆಂದುಕೊಂಡು ನೀವು ತಂದೆಯ ರೀತಿ ಇಲ್ಲೇ ಇರಿ, ಯಾವ ಕೆಲಸವೂ ಬೇಡ ಎಂದು ಹೇಳುತ್ತಾರೆ.. ಮೊದಲು ಹಿಂಜರಿದ ಅಜ್ಜ ನಂತರ ಸಂಗೀತ ಅವರ ಮಾತಿಗ ಒಪ್ಪುತ್ತಾರೆ.. ಸ್ನೇಹಿತರೆ ಈ ಘಟನೆಯ ಬಗ್ಗೆ ನೀವು ಏನು ಏಳಲು ಇಷ್ಟ ಪಡುತ್ತೀರಾ ಎಂಬುದನ್ನು ತಿಳಿಸಿ..