Advertisements

ಗಂಡನನ್ನು ಉಳಿಸಿಕೊಳ್ಳಲು ಈ ಮಹಿಳೆ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಕರುಳು ಹಿಂಡುತ್ತದೆ.. ಏನಾಯ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಉಸಿರಾಡಲು ಕಷ್ಟಪಡುತ್ತಿದ್ದ ಗಂಡನಿಗೆ ತನ್ನ ಬಾಯಿಯಿಂದಲೇ ಉಸಿರನ್ನು ನೀಡಲು ಹೆಂಡತಿ ಪ್ರಯತ್ನ ಪಟ್ಟ ದೃಶ್ಯ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈ’ರಲ್ ಆಗಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘ’ಟನೆ ನಡೆದಿದೆ.. ಕ’ರೋನ ಸೋಂ’ಕಿತರಾಗಿದ್ದ 47 ವರ್ಷದ ರವಿ ಸಿಂಗಲ್ ಅವರನ್ನು ಅವರ ಪತ್ನಿ ರೇಣು ಅವರು ಆಸ್ವತ್ರೆಗೆ ದಾಖಲಿಸಲು ಆಟೋದಲ್ಲಿ ಕರೆ ತಂದಿದ್ದರು.. ಆದರೆ ಆಗ್ರಾದ ಯಾವ ಆಸ್ವತ್ರೆಯಲ್ಲೂ ಕೂಡ ಬೆಡ್ ಖಾಲಿ ಇರಲಿಲ್ಲ. ಬೆಡ್ ಖಾಲಿ ಇಲ್ಲ ಎಂಬ ಮಾಹಿತಿಯನ್ನೇ ಎಲ್ಲಾ ಆಸ್ವತ್ರೆಗಳು ನೀಡುತ್ತಿದ್ದವು.. ಈಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಡಾಡುವ ಮಾರ್ಗ ಮಧ್ಯೆದಲ್ಲೇ ರವಿ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು.

Advertisements

ಈ ಹಂತದಲ್ಲಿ ರವಿ ಅವರ ಪತ್ನಿ ತಮ್ಮ ಪತಿಯ ಬಾಯಿಗೆ ತನ್ನ ಬಾಯಿ ಹಾಕಿ ಉಸಿರನ್ನು ತಳ್ಳುವ ಮೂಲಕ ಕೃತಕವಾಗಿ ಉಸಿರನ್ನು ನೀಡುವ ಪ್ರಯತ್ನ ಮಾಡಿದರು.. ಆದರೆ ಅವರ ಯಾವ ಪ್ರಯತ್ನವು ಕೂಡ ಫಲಕೊಡಲಿಲ್ಲ. ರವಿ ಅವರು ಆಟೋದಲ್ಲಿ ಕೊನೆ ಉ’ಸಿರು ಎಳೆದರು.. ತನ್ನ ಪತಿಯ ಮುಖಕ್ಕೆ ನೀರನ್ನು ಚಿಮುಕಿಸಿ ಅವರ ಬಾಯಿಯಿಂದಲೇ ಉಸಿರನ್ನು ಕೊಡಲು ಯತ್ನಿಸಿ ಹಲವು ಬಾರಿ ವ್ಯರ್ಥ ಪ್ರಯತ್ನ ಮಾಡಿದ ರೇಣು ಅವರು ಕೊನೆಗೆ ಕಂಗಾಲಾದರು. ಸರ್ಕಾರಿ ಆಸ್ಪತ್ರೆಯೇ ಎದುರಲ್ಲೇ ನಿಂತಿದ್ದ ಆಟೋದಲ್ಲೆ ರವಿ ಅವರ ಪ್ರಾ’ಣ ಪಕ್ಷಿ ಹಾರಿ ಹೋಗಿತ್ತು.. ಈ ಘ’ಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದೆ.

ಉತ್ತರ ಪ್ರದೇಶದ ಈ ಘ’ಟನೆ ದೇಶದ್ಯಾಂತ ಬಾರಿ ಚರ್ಚೆಗೆ ಗುರಿಯಾಗಿದೆ. ನಾಲ್ಕು ಖಾಸಗಿ ಆಸ್ಪತ್ರೆಗೆ ಅಲೆದಾಡಿದ್ದ ರವಿಯ ಪತ್ನಿ ರೇಣು ಅವರು ಕೊನೆಗೆ ಆಗ್ರಾದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜ್ ಗೆ ತಮ್ಮ ಪತಿಯನ್ನು ಕರೆತಂದಿದ್ದರು.. ಆದರೆ ಅಲ್ಲಿ ಅವರಿಗೆ ಪ್ರವೇಶ ಸಿಕ್ಕಿರಲಿಲ್ಲ. ಈ ಘಟನೆಯ ದೃಶ್ಯಗಳು ಈಗ ಬಾರಿ ವೈ’ರಲ್ ಆಗಿದೆ.. ಇಂದಿಗೂ ಕೂಡ ಆಗ್ರಾ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ರೋ’ಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲಿಯುತ್ತಿದ್ದಾರೆ. ಕೋ’ವಿಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಗಳ ಸಮಸ್ಯೆ ಕಾಡುತ್ತಿದೆ.. ಕೆಲವು ಆಸ್ಪತ್ರೆಗಳು ರೋಗಿಗಳನ್ನು ಬಲವಂತವಾಗಿ ಡಿಸ್ಚಾರ್ಜ್ ಮಾಡುತ್ತಿದ್ದಾರೆ.. ಸ್ನೇಹಿತರೆ ಈ ಘ’ಟನೆ ನೋಡಿದ ಮೇಲೆ ನೀವು ತೀಳಿಸಲು ಇಚ್ಚಿಸುವುದೇನು.