Advertisements

ತನ್ನ ತಾಯಿಗೆ ಹೆರಿಗೆ ಮಾಡಿದ 12 ವರ್ಷದ ಮಗಳು! ಇದು ಹೇಗೆ ಸಾಧ್ಯವಾಯ್ತು ಗೊತ್ತಾ?

News

ಮೊಗದ ಅಳಲನ್ನು ಜಗದ ಕಣ್ಣಿಗೆ ತೋರ್ಪಡಿಸದೇ ತನ್ನ ತೋಲ ತೆಕ್ಕೆಯಲ್ಲಿ ಸಂರಕ್ಷಿಸುವವಳು ತಾಯಿ. ಆ ತಾಯಿ ಅನ್ನೋ ಎರಡಕ್ಷರಕ್ಕೆ ಈ ಜೀವ ಜಗತ್ತಿನಲ್ಲಿ ವಿಶೇಷ ಗೌರವವಿದೆ. ಸೃಷ್ಟಿಯ ಉಸಿರಿದೆ. ಒಂದ್ವೇಳೆ ಆ ಉಸಿರೇ ಇಲ್ಲದಿದ್ದರೇ ಈ ಸೃಷ್ಟಿ ಉಸಿರಾಡೋದಕ್ಕೆ ಸಾಧ್ಯನಾ? ಖಂಡಿತ ಇಲ್ಲ. ತಾಯಿ ಅನ್ನೋದು ಬರೇ ಶಬ್ದವಲ್ಲ, ಅದು ಒಂದು ಭಾವ. ಜೀವಗಳ ನಡುವಣ ಬೆಸೆಯುವ ಭಾವ. ತಾಯಿ ಹಾಗೂ ತಾಯ್ತನ ಎರಡು ಕೂಡ ವಿಶೇಷ. ಈಗ ನಾವು ನಿಮಗೆ ತಾಯಿಯೊಬ್ಬಳಿಗೆ ತನ್ನ ಕಂದನೇ ಹೆರಿಗೆ ಮಾಡಿಸಿದ ವಿಶೇಷ ಕ್ಷಣದ ಬಗ್ಗೆ ಮಾಹಿತಿ ನೀಡ್ತೀವಿ. ಕೇಳಲಿಕ್ಕೆ ವಿಚಿತ್ರವಾಗಿದೆಯಲ್ವಾ? ತಾಯಿಗೆ ತನ್ನ ಮಗಳೇ ಹೆರಿಗೆ ಮಾಡಿಸಿದ್ಲಾ ಅಂತ ಹುಬ್ಬೇರಿಸಬೇಡಿ ನಾವ್ ಹೇಳ್ತಾಯಿರೋದು ಸತ್ಯ. ತಾಯಿಗೆ ತನ್ನ ಮಗಳೇ ಹೆರಿಗೆ ಮಾಡಿಸಿದ್ದಾಳೆ. ಅಮೇರಿಕಾದ ದಕ್ಷಿಣ ರಾಜ್ಯವಾಗಿರಿವ ಮಿಸಿಸಿಪಿಯಲ್ಲಿ ಓರ್ವ ತಾಯಿ ಹಾಗೂ ಮಗಳಿಗೆ ಈ ಕ್ಷಣವನ್ನು ಆನಂದಿಸುವ ಅವಕಾಶ ದೊರಕಿದೆ.

[widget id=”custom_html-3″]

Advertisements

ಹೌದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗುತ್ತಿದ್ದು, ತಾಯಿ ಮಗಳ ನಡುವಣ ಬಾಂಧವ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಆಸ್ಪತ್ರೆಯ ವೈದ್ಯರು 12 ವರ್ಷದ ಬಾಲಕಿ ಜೆಸಿ ಡೆಲಾಪೆನಾ ಬಳಿ ‘ನಿನ್ನ ತಾಯಿಗೆ ಹೆರಿಗೆ ಮಾಡ ಬಯಸುತ್ತೀಯಾ?’ ಎಂದು ಕೇಳಿದ್ದಾರೆ. ವೈದ್ಯರ ಮಾತುಗಳಿಗೆ ಬಾಲಕಿ ಒಪ್ಪಿಗೆ ಸೂಚಿಸಿದ್ದಾಳೆ. ಹೀಗಾಗಿ ವೈದ್ಯರು ಆಕೆಯನ್ನು ಆಸ್ಪತ್ರೆಯ ಆ’ಪರೇ’ಷನ್ ಥಿಯೇಟರ್’ಗೆ ಕರೆದೊಯ್ದಿದ್ದಾರೆ. ಮೊದ ಮೊದಲು ನವಜಾತ ಶಿಶುವನ್ನು ಎತ್ತಿಕೊಳ್ಳುವಾಗ ಫುಲ್ ಗಾಬರಿಯಾಗಿ ಹೋಗಿದ್ಲು. ಭ’ಯ’ಬೀತಳಾಗಿ ಹೋಗಿದ್ಲು. ಆದ್ರೆ ನಂತರ ವೈದ್ಯರು ಧೈರ್ಯ ತುಂಬಿದ ಮೇಲೆ ಮಗುವನ್ನು ಎತ್ತಿಕೊಂಡಿದ್ದಾಳೆ. ಮುದ್ದಾಡಿದ್ದಾಳೆ. ಆದ್ರೆ ಈ ಸುಂದರ ಕ್ಷಣವನ್ನು ಜೆಸಿಯ ತಂದೆ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ,. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇನ್ನು ತಾಯಿಯಾಗುವುದೇ ಒಂದು ಅಮೂಲ್ಯ ಕ್ಷಣ.

[widget id=”custom_html-3″]

ಈ ಕ್ಷಣವನ್ನು ತನ್ನ ಮಗಳ ಕೈಯಿಂದಲೇ ಮಾಡಿಸಿಕೊಳ್ತಾಯಿರುವುದು ಆ ತಾಯಿಗೆ ಇನ್ನಷ್ಟು ಖುಷಿಯ ಕ್ಷಣ. ಈ ಸುಂದರ ಕ್ಷಣದ ಬಗ್ಗೆ ಜೆಸಿ ತಾಯಿ ಸಹ ಮನದಾಳದ ಮಾತನ್ನಾಡಿದ್ದಾರೆ. ಕೆಲ ವರ್ಷಗಳ ಹಿಂದೆ ನಾನು ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದೆ. ಈ ಸಮಯದಲ್ಲೇ ಜೆಸಿ ನಾನಿದ್ದ ಆಪರೇಷನ್ ಥಿಯೇಟರ್’ನೊಳಗೆ ಇರುತ್ತೇನೆಂಬ ಇಚ್ಛೆ ವ್ಯಕ್ತಪಡಿಸಿದ್ದಳು. ಆದರೆ ಆ ಸಮಯದಲ್ಲಿ ಆಕೆ ತುಂಬಾ ಚಿಕ್ಕವಳು ಹೀಗಾಗಿ ಆಕೆಯನ್ನು ಒಳಗೆ ಬರಲು ಬಿಡಲಿಲ್ಲ. ಆದರೆ ಈ ಬಾರಿ ಮನೆಯವರೆಲ್ಲರೂ ಆಕೆಯನ್ನು ಆಪರೇಷನ್ ಥಿಯೇಟರ್’ನೊಳಗೆ ಕರೆದೊಯ್ಯಲು ಗ್ರೀನ್ ಸಿಗ್ನಲ್ ಕೊಟ್ಟರು ಹೀಗಾಗಿ ಅವಳೇ ನನ್ನ ಹೆರಿಗೆ ಮಾಡಿಸಿದ್ದಾಳೆ ಅಂತ ಜೆಸಿ ತಾಯಿ ಖುಷಿ ಪಟ್ಟರು..

[widget id=”custom_html-3″]