Advertisements

ಮೀನಿಗಾಗಿ ಬಲೆ ಹಾಕಿದ ವ್ಯಕ್ತಿಗೆ ಸಿಕ್ಕಿದ್ದು 670 ಕೋಟಿ.. ಅದು ಹೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಅದೃಷ್ಟ ಅನ್ನುವುದು ನಮ್ಮ ಜೀವನದಲ್ಲಿ ಯಾವಾಗ ಬರುತ್ತೋ ಯಾವಾಗ ಹೋಗುತ್ತದೆಯೋ ನಮಗೆ ಗೊತ್ತಾಗುವುದಿಲ್ಲ.. ಕೆಲವು ಸಂದರ್ಭಗಳಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿ ಇದ್ದರೂ ಕೂಡ ತಿಳಯುವುದಿಲ್ಲ. ಆದರೆ ಈ ವ್ಯಕ್ತಿಯ ವಿಷಯದಲ್ಲಿ ಮಾತ್ರ ಇನ್ನೂ ವಿಚಿತ್ರ.. ಅದೃಷ್ಟ ಈತನಿಗೆ ಒಲಿದು ಬಂದರು ಸಹ ಅದರ ಬಗ್ಗೆ ಗೊತ್ತಿಲ್ಲದೇ ಪ್ರತಿದಿ‌ನ ಕಷ್ಟಪಡುತ್ತಿದ್ದ. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು ಎಂದು ತಿಳಿದುಕೊಳ್ಳೋಣ. ಫಿಲಿಪೈನ್ಸ್ ದೇಶಕ್ಕೆ ಸೇರಿದಂತಹ ಒಬ್ಬ ವ್ಯಕ್ತಿ ಮೀನುಗಾರನಾಗಿದ್ದ.. ಈತ ದಿನನಿತ್ಯ ಸಮುದ್ರ ಕಡೆಗೆ ತೆರಳಿ ಮೀನುಗಳಿಗೆ ಬಲೆ ಹಾಕುತ್ತಾನೆ.. ಆದರೆ ಮೀನುಗಳ ಜೊತೆಗೆ ಒಂದು ಬಿಳಿಯ ಕಲ್ಲು ಬಲೆಯಲ್ಲಿ ಬಂದಿರುತ್ತದೆ.

Advertisements

ನೋಡುವುದಕ್ಕೆ ಈ ಕಲ್ಲು ಸುಂದರವಾಗಿದ್ದ ಕಾರಣ ಆ ಕಲ್ಲನ್ನು ಮನೆಗೆ ತಂದು ತಾನು ಮಲಗುವ ಕೋಣೆಯಲ್ಲಿ ಇಟ್ಟುಕೊಟ್ಟಿಂದ.. ನಂತರ ಇದು ಏನು ಎತ್ತ ಎಂದು ಆಲೋಚನೆ ಮಾಡಲೇ ಇಲ್ಲಾ. ಈಗೆ ದಿನನಿತ್ಯ ಮೀನುಗಳನ್ನು ಹಿಡಿದು ಜೀವನ ನಡೆಸುತ್ತಾ ಸುಮಾರು 10 ವರ್ಷಗಳು ಕಳೆದೇ ಹೋಗುತ್ತದೆ. ಒಂದು ದಿನ ಈ ಮೀನುಗಾರನ ಮನೆಗೆ ಬೆಂಕಿ ಬಿದ್ದ ಕಾರಣ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಮನೆಯಿಂದ ಆಚೆ ತರುತ್ತಿದ್ದ ಹಾಗೆ ವೈಟ್ ಕಲ್ಲನ್ನು ನೋಡಿದ ಈ ವ್ಯಕ್ತಿ ಅದನ್ನು ತೆಗೆದುಕೊಂಡು ಹೋಗಿ ಹತ್ತಿರದಲ್ಲಿದ್ದ ಪ್ರವಾಸೋದ್ಯಮ ಆಫಿಸ್ ಗೆ ಕೊಟ್ಟು ಇ ವಸ್ತು ತುಂಬಾ ಸುಂದರವಾಗಿದೆ ನಿಮ್ಮ ಬಳಿ ಇಟ್ಟುಕೊಳ್ಳ ಎಂದು ಹೇಳಿ ಅಧಿಕಾರಿಗಳಿಗೆ ಕೊಟ್ಟ..

ಇದನ್ನು ನೋಡಿದ ಅಧಿಕಾರಿಗಳು ಒಂದು ಕ್ಷಣ ಶಾಕ್ ಆದರು. ಯಾಕೆಂದರೆ ಈ ವಸ್ತು ಬಹಳ ಅಪರೂಪ ಮತ್ತು ವಿರಳವಾಗಿ ಸಿಗುವಂತಹ ಮುತ್ತು ಇದರ ತೂಕ 34 ಕೇಜಿ, ಇದರ ಬೆಲೆ ಸರಿ ಸುಮಾರು 670 ಕೋಟಿ. 670 ಕೋಟಿ ವಸ್ತುವನ್ನು ತನ್ನ ರೂಮಿನಲ್ಲೇ ಇಟ್ಟುಕೊಂಡು ಅದರ ಬಗ್ಗೆ ಗೊತ್ತಿಲ್ಲದೇ 10 ವರ್ಷಗಳ ಆ ಮೀನುಗಾರ ಜೀವನ ನಡೆಸಲು ಕಷ್ಟ ಪಡುತ್ತಿದ್ದ, ಸ್ನೇಹಿತರ ಬಳಿ ಸಾಲ ಮಾಡುತ್ತಿದ್ದ.. ದುರಾದೃಷ್ಟ ಅಂದರೆ ಇದೆ ಅಲ್ಲವೇ. ಇನ್ನೂ ಈ ಮುತ್ತನ್ನು ಪಡೆದ ಅಧಿಕಾರಿಗಳು ಅದನ್ನು ಹರಾಜಿಗೆ ಇಟ್ಟು ಅದರಿಂದ ಬಂದ 670 ಕೋಟಿಯನ್ನು ಆ ಮೀನುಗಾರನಿಗೆ ತಲುಪಿಸಿದ್ದಾರೆ.. ಇನ್ನೂ ಮೀನುಗಾರನಿಗೆ ಅದರ ಬೆಲೆಯನ್ನು ತಿಳಿಸಿ ನಂತರ ಅದನ್ನು ಹರಾಜಿಗೆ ಇಟ್ಟ ಹಣವನ್ನು ಅವರಿಗೆ ನೀಡಿರುವ ಅಧಿಕಾರಿಗಳ ದೊಡ್ಡತನಕ್ಕೆ ಒಂದು ಸಲಾಂ.