Advertisements

ಅಬ್ಬಬ್ಬಾ..ಈ ನಾಯಿಯ ಬೆಲೆ ಒಂದೆರಡಲ್ಲ ಬರೋಬ್ಬರಿ 10 ಕೋಟಿ ! ಅದು ಒಬ್ಬ ಕನ್ನಡಿಗನದ್ದೇ..ಇದರ ವಿಶೇಷತೆ ಏನ್ ಗೊತ್ತಾ ? ಈ ವಿಡಿಯೋ ನೋಡಿ

Kannada Mahiti

ಸ್ನೇಹಿತರೇ, ನಿಯತ್ತಿನ ಪ್ರಾಣಿ ನಾಯಿಗಳೆಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ತಮ್ಮ ತಂದೆ ತಾಯಿಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೋ ಇಲ್ಲವೋ ನಾಯಿಗಳನ್ನ ಮಾತ್ರ ತುಂಬಾ ಮುದ್ದಾಗ ಮಕ್ಕಳಂತೆ ಸಾಕುತ್ತಾರೆ. ಈಗಂತೂ ದೇಶಿಯ ಹಾಗೂ ಬೇರೆ ಬೇರೆ ದೇಶದ ತಳಿಯ ನಾಯಿಗಳನ್ನ ತಂದು ಸಾಕುವುದು ಸಾಮಾನ್ಯವಾಗಿಬಿಟ್ಟಿದೆ. ಮಿತ್ರರೇ, ಕಡಿಮೆ ಅಂದರೂ ಎರಡು ಅಥ್ವಾ ಐದತ್ತು ಸಾವಿರ ರೂಪಾಯಿಗಳಿಗೆ ನಾಯಿಗಳನ್ನ ತಂದು ಸಾಕುವರಿದ್ದಾರೆ. ಹಣ ಆಸ್ತಿ ಜಾಸ್ತಿ ಇರುವವರು ಲಕ್ಷಗಳಲ್ಲಿ ನಾಯಿಗಳನ್ನ ತಂದು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಈಗಂತೂ ಸಿರಿವಂತರ ಮನೆಗಳಲ್ಲಿ ನಾಯಿಗಳನ್ನ ಸಾಕುವುದು ಪ್ರತಿಷ್ಠೆಯೇ ಆಗಿಬಿಟ್ಟಿದೆ.

ಆದರೆ ನಾಯಿಗಳಿಗೆ ಕೋಟ್ಯಂತರ ರೂಪಾಯಿಗಳನ್ನ ಕೊಟ್ಟು ತಂದು ಸಾಕುವವರ ಬಗೆ ಕೇಳಿದ್ರೆ ಹೌಹಾರುತ್ತೀರಾ..ಹೌದು ,ಒಂದು ಕ್ಷಣ ನಿಮ್ಮ ಹೃದಯವನ್ನ ಗಟ್ಟಿ ಮಾಡಿಕೊಳ್ಳಿ..ಇಲ್ಲೊಬ್ಬ ಒಂದೆರಡು ಕೋಟಿ ಅಲ್ಲ. ಬರೋಬ್ಬರಿ ಹತ್ತು ಕೋಟಿಯ ಬೆಲೆಬಾಳುವ ನಾಯಿಯನ್ನ ತಂದು ಸಾಕುತ್ತಿದ್ದಾನೆ. ಬೆಂಗಳೂರಿನ ಸತೀಶ್ ಎನ್ನುವ ವ್ಯಕ್ತಿ. ಏನಪ್ಪಾ ಇದು ನನಗೆ ೫೦ ಲಕ್ಷ ಇದ್ರೇ ಸಾಕು ಜೀವನದಲ್ಲಿ ಸೆಟ್ಲ್ ಆಗುತ್ತೇನೆ ಅನ್ನುವವರು ಲಕ್ಷಾಂತರ ಮಂದಿ ಇದ್ದಾರೆ. ಅಂತದರಲ್ಲಿ ಈತ ಹತ್ತು ಕೋಟಿಯ ನಾಯಿಯನ್ನ ಸಾಕುತ್ತಿದ್ದಾನೆ ಎಂದರೆ..ಅದಕ್ಕೆ ನಾವು ವಿಡಿಯೋವೊಂದನ್ನ ಲಿಂಕ್ ಮಾಡಿದ್ದೇವೆ. ಆತ ವಿಡಿಯೋದಲ್ಲಿ ಹೇಳಿರುವ ಹಾಗೆ ಮೂರೂ ತಿಂಗಳು ಇದ್ದ ನಾಯಿಯನ್ನ ಚೈನಾದಿಂದ ಇಂಪೋರ್ಟ್ ಮಾಡಿಕೊಳ್ಳುತ್ತಾನೆ. ಈಗ ಆ ನಾಯಿಯ ವಯಸ್ಸು ಒಂದು ವರ್ಷಕ್ಕಿಂತ ಹೆಚ್ಚಾಗಿದೆ.

ಚಿಕ್ಕಂದಿನಿಂದಲೇ ನಾಯಿಗಳ ಬಗ್ಗೆ ಹೆಚ್ಚು ಒಲವು ಹೊಂದಿರುವ ಈತ ಹತ್ತು ಕೋಟಿಯ ನಾಯಿಯ ವಿಶೇಷತೆ ಬಗ್ಗೆ ಹೇಳೋದು ಹೀಗೆ..ಜಗತ್ತಿನಲ್ಲಿ ಅತೀ ಹೆಚ್ಚು ದುಬಾರಿ ಬೆಲೆಯ ಈ ನಾಯಿಯಾ ತಳಿಯ ಹೆಸರು ಟಿಬೆಟನ್ ಮಸ್ತಿಫ್ ಎಂದು. ಜಗತ್ತಿನಲ್ಲಿ ಈ ನಾಯಿ ಬರೋಬ್ಬರಿ ೧೮ ಕೋಟಿಗೆ ಸೇಲ್ ಆಗಿದೆಯಂತೆ. ಇನ್ನು ನಾನು 10 ಕೋಟಿ ಕೊಟ್ಟು ಈ ನಾಯಿಯನ್ನ ಖರೀದಿ ಮಾಡಿದ್ದೇನೆ. ಇಂಡಿಯಾಗೆ ಇದೇ ಜಾಸ್ತಿ ಆಂತ ಸತೀಶ್ ಹೇಳಿದ್ದಾನೆ. ಇನ್ನು ಫಾರಿನ್ ನಲ್ಲಿ ಮಹಿಳೆಯೊಬ್ಬಳು ಇದೆ ನಾಯಿಗೆ 18ಕೋಟಿ ಕೊಟ್ಟು ತೆಗೆದುಕೊಂಡಿದ್ದಾಳಂತೆ. ಇದೆ ಅಲ್ಲದೇ ಈತನ ಬಳಿ ಈಗಾಗಲೇ 115ಕ್ಕಿಂತ ಹೆಚ್ಚು ನಾಯಿಗಳಿದ್ದು ಅವರ ಮನೆಯಲ್ಲಿರುವ ಅತೀ ಹೆಚ್ಚು ಬೆಲೆಬಾಳುವ ನಾಯಿ ಇದೆ ಅಂತೇ.

Advertisements

ಮಿತ್ರರೇ ನಾವು ನಮ್ಮ ಹುಟ್ಟುಹಬ್ಬವನ್ನ ಯಾವತ್ತಾದರೂ ಸ್ಟಾರ್ ಹೋಟೆಲ್ ನಲ್ಲಿ ಆಚರಿಸಿಕೊಂಡಿದ್ದೇವೆಯೇ..ಆದರೆ ಈ ಪುಣ್ಯಾತ್ಮ ನೋಡಿ ಈ ೧೦ ಕೋಟಿ ಬೆಲೆಯ ನಾಯಿಯ ಹುಟ್ಟು ಹಬ್ಬವನ್ನ ಸ್ಟಾರ್ ಹೋಟೆಲ್ ನಲ್ಲಿ ಆಚರಣೆ ಮಾಡಿದ್ದಾನೆ. ನೋಡಿ ಸ್ನೇಹಿತರೆ ಈ ಭೂಮಿ ಮೇಲೆ ಇಂತಹವರು ಇದ್ದಾರೆ. ಒಂದೊತ್ತಿನ ಊಟಕ್ಕೂ ಗತಿ ಇಲ್ಲದೇ ಕಷ್ಟಪಡುತ್ತಿರುವ ಅದೆಷ್ಟೋ ಕೋಟ್ಯಾಂತರ ಜನ ನಮ್ಮ ನಡುವೆ ಇರುವಾಗ ಇವರು ನಾಯಿಗಳಿಗಾಗಿಯೇ ಕೋಟಿ ಕೋಟಿ ರೂಪಾಯಿಗಳನ್ನ ಖರ್ಚು ಮಾಡುತ್ತಿದ್ದಾರೆ. ಯಾರೋ ಹೇಳಿದ್ದು ‘ದುಡ್ಡು ಇಲ್ಲದವನು ಹಸು ಮೇಯಿಸುತ್ತಾನೆ, ದುಡ್ಡು ಇರುವವನು ನಾಯಿ ಮೇಯಿಸುತ್ತಾನೆ’ ಅಂತ..ಕಾಮಿಡಿ ಅನ್ನಿಸಿದ್ರೂ ಸತ್ಯವೇ ಅಲ್ಲವೇ..ಒಂದು ವೇಳೆ ನಿಮ್ಮ ಹತ್ತಿರ ಕೋಟಿಗಳಷ್ಟು ಹಣ ಇದ್ದಿದ್ದರೆ ಏನು ಮಾಡುತ್ತಿದ್ರಿ ?ನಿಮ್ಮ ಅಭಿಪ್ರಾಯ ತಿಳಿಸಿ..