Advertisements

ಜಗತ್ತಿನಲ್ಲೇ ಮೊದಲ ಬಂಗಾರದ ಹೋಟೆಲ್.. ಒಂದು ದಿನಕ್ಕೆ ಈ ಹೋಟೆಲ್ ರೂಮ್ ಬಾಡಿಗೆ ಎಷ್ಟು ಗೊತ್ತಾ?

Kannada Mahiti

ಚಿನ್ನ ಅಂದ್ರೆ ಮನುಷ್ಯನಿಗೆ ತುಂಬಾ ಇಷ್ಟ ಅದ್ರಲ್ಲಿ ಎರಡು ಮಾತಿಲ್ಲ ಯಾಕಂದ್ರೆ ದಿನದಿಂದ ದಿನಕ್ಕೆ ದುಬಾರಿಯಾಗ್ತಾಯಿರುವ ಚಿನ್ನದ ರೇಟ್ ಚಿನ್ನದ ಮೇಲೆ ಮನುಷ್ಯನಿಗೆ ಎಷ್ಟು ವ್ಯಾಮೋಹವಿದೆ ಅಂತ ತೋರಿಸಿಕೊಡುತ್ತೆ. ಅಲ್ವಾ..? ಚಿನ್ನದ ಉಂಗುರ, ಸರ, ಓಲೆ, ಡಾಬು, ಇವೆಲ್ಲ ಕಾಮನ್ ಇದ್ರಲ್ಲಿ ಏನು ವಿಶೇಷವಿಲ್ಲ, ಆದ್ರೆ ಮ್ಯಾಟರ್ ಇರೋದು, ಇಡೀ ಹೋಟೆಲ್‌ಗೆ ಹೋಟೆಲ್ ಚಿನ್ನದಿಂದ ನಿರ್ಮಾಣವಾಗಿರೋದ್ರ ಬಗ್ಗೆ. ಎಸ್.. ಈ ಚಿನ್ನದ ಹೋಟೆಲ್ ವಿಹಂಗಮ ನೋಟಕ್ಕೆ ಎಲ್ಲರು ಸಹ ಫಿದಾ ಆಗಿದ್ದಾರೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತೆ. ನದಿ ತಟದಲ್ಲಿರುವ ಈ ಬ್ಯುಟಿಫುಲ್ ಗೋಲ್ಡ್ ಕೋಟೆಡ್ ಹೋಟೆಲ್.. ಅಷ್ಟಕ್ಕೂ ಈ ಹೋಟೆಲ್ ಎಲ್ಲಿದೆ ಗೊತ್ತಾ.. ಈ ಹೋಟೆಲ್‌ನಲ್ಲಿ ಇರಬೇಕು ಅಂದ್ರೆ ಭಾರತೀಯ ರೂಪಾಯಿಯಲ್ಲಿ ಒಂದುದಿನಕ್ಕೆ ಎಷ್ಟು ಕೊಡಬೇಕು ಗೊತ್ತಾ ಹೇಳ್ತೀವಿ.

[widget id=”custom_html-3″]

Advertisements

ಪ್ರವಾಸಿಗರು ಅತೀ ಹೆಚ್ಚು ದೌಡಾಯಿಸುವ ದೇಶವಾದ ವಿಯೆಟ್ನಾಂನಲ್ಲಿ ಈ ಚಿನ್ನದ ಹೋಟೆಲ್‌ನ್ನು ನೀವು ಕಾಣಬಹುದು. ವಿಯೆಟ್ನಾಂನಲ್ಲಿರುವ ಮೋಸ್ಟ್ ಬ್ಯುಟಿಫುಲ್ ಹೋಟೆಲ್ ಆದ ಗೋಲ್ಡ್ನ್ ಲೇಕ್ ಬಗ್ಗೆನೇ ನಾವು ಇವತ್ತು ಹೇಳ್ತಾಯಿರೋದು. ಈ ಹೋಟೆಲ್‌ನ ಹೊರ ಮತ್ತು ಒಳಗಡೆ ಪೂರ್ತಿಯಾಗಿ 24 ಕ್ಯಾರೇಟ್ ಚಿನ್ನದಿಂದಲೇ ಮಾಡಲಾಗಿದೆ. ಕಲ್ಲಿನ ಇಟ್ಟಿಗೆಯ ಮೇಲೆ ಬಂಗಾರದ ಸೆರಮಿಡ್ ಲೇಪನ ಹಾಕಿ ಈ ಹೋಟೆಲ್ ನಿರ್ಮಾಣವಾಗಿದೆ. ಈ ಹೋಟೆಲ್‌ನ ವೈಶಿಷ್ಟ್ಯವೇನಂತೆ ಗೊತ್ತಾ..?
ಬಾತ್ರೂಂನಿಂದ ಹಿಡಿದು, ಹೋಟೆಲ್‌ನ ಟೇಬಲ್ ಬಾಗಿಲು, ಕನ್ನಡಿ ಬಾತ್‌ಟಬ್ ಪ್ರತಿಯೊಂದು ಸಹ ಚಿನ್ನದಿಂದಲೇ ರೂಪಿಸಲ್ಪಟ್ಟಿದೆ.

[widget id=”custom_html-3″]

ಈ ಹೋಟೆಲ್ ಮಾಲೀಕ ಹೋವಾಬಿನ್ ಹೇಳುವ ಪ್ರಕಾರ, ಹೋಟೆಲ್ ಅತ್ಯಂತ ಸುಂದರವಾಗಿದ್ರೆ ಪ್ರವಾಸಿಗರನ್ನು ಆಕರ್ಷಿಸುತ್ತೆ. ಜನರಿಗೂ ಕೂಡ ಹೋಟೆಲ್ ಒಳಗಡೆ ಇರಲಿಕ್ಕೆ ಒಂದು ಖುಷಿಯ ಅನುಭವ ಕೊಡುತ್ತೆ ಅಂತ ಹೇಳ್ತಾರೆ. ಅಂದಹಾಗೇ ಈ ಹೋಟೆಲ್‌ನಲ್ಲಿ ಉಳಿಯೋದಕ್ಕೆ ಒಂದು ದಿನಕ್ಕೆ ಕೊಡಬೇಕಾದ ಹಣ ಕೇಳಿದ್ರೆ ದಂಗಾಗ್ತೀರಾ.. ಹೇಳಿ ಕೇಳಿ ಚಿನ್ನದ ಹೋಟೆಲ್ ಅಲ್ವಾ? ಹಣ ಪಾವತಿಸಲೇಬೇಕು. ಈ ಹೋಟೆಲ್‌ಲ್ಲಿ ಇರಬೇಕು ಅಂದ್ರೆ ಒಂದು ದಿನಕ್ಕೆ 15 ಲಕ್ಷ ಹಣವನ್ನು ಪಾವತಿಸಬೇಕು. ಇನ್ನು ಮಾಹಿತಿ ಪ್ರಕಾರ ವಿಯೆಟ್ನಾಂಲ್ಲಿರುವ ಈ ಚಿನ್ನದ ಹೋಟೆಲ್ ಜಗತ್ತಿನ ಮೊದಲ ಪೂರ್ಣ ಪ್ರಮಾಣದ ಚಿನ್ನದ ಹೋಟೆಲ್ ಎಂಬ ಹೆಗ್ಗಳಿಕೆಗೂ ಸಹ ಭಾಜನವಾಗಿದೆ..