Advertisements

ಈ ಗ್ರಾಮದಲ್ಲಿ ನಡೆಯುತ್ತೆ ರಾಕ್ಷಸರಾಜ ರಾವಣನ ಪೂಜೆ ! ಅಚ್ಚರಿಯಾದರೂ ನಿಜ..ಇಲ್ಲಿ ದಶಕಂಠನ ಪೂಜೆ ಹೇಗೆ ನಡೆಯುತ್ತೆ ಗೊತ್ತಾ ?

Kannada Mahiti

ನಮಸ್ತೇ ಸ್ನೇಹಿತರೇ, ನಾವು ದೇವರನ್ನ ಪೂಜೆ ಮಾಡುತ್ತೇವೆ ವಿನಃ..ರಾಕ್ಷಸನಿಗಲ್ಲ. ಆದರೆ ಈ ಊರಿನಲ್ಲಿ ರಕ್ಕಸನಿಗೂ ಪೂಜೆ ನಡೆಯುತ್ತೆ ಎಂದರೆ ನೀವು ನಂಬುತ್ತೀರಾ ! ಹೌದು, ಮಹಾನ್ ಶಿವಭಕ್ತ ರಾಕ್ಷಸರಾಜ ದಶಕಂಠ ರಾವಣನ ಬಗ್ಗೆ ರಾಮಾಯಣದಲ್ಲಿ ನೀವು ಓದಿರುತ್ತೀರಾ ಇಲ್ಲವೇ ದೃಶ್ಯ ಕಾವ್ಯಗಳ ಮೂಲಕ ನೋಡಿರುತ್ತೀರಾ. ರಾಕ್ಷಸನಾಗಿದ್ದರೂ ರಾವಣ ಮಹಾನ್ ವಿಧ್ವಾಂಸ. ತನ್ನ ಭಕ್ತಿಯಿಂದ ಶಿವ ಶಂಕರನನ್ನ ಒಲಿಸಿ ಆತ್ಮಲಿಂಗವನ್ನೇ ಭೂಮಿಗೆ ತಂದ ಮಹಾನ್ ಭಕ್ತ. ಆದರೆ ಭಗವಾನ್ ಶ್ರೀರಾಮನ ಪತ್ನಿ ಸೀತಾ ಮಾತೆಯನ್ನ ಅ’ಪಹ’ರಣ ಮಾಡಿ ಅಧರ್ಮ ಮೆರೆದವನು. ಧರ್ಮಕ್ಕೆ ವಿರುದ್ಧವಾದ ಕೆಲಸಗಳನ್ನ ಮಾಡಿ ‘ಸೃಷ್ಟಿಸಿದವನು.. ಅಂತಹ ರಾಕ್ಷಸನನ್ನ ಪೂಜೆ ಮಾಡುತ್ತಾರೆಯೇ..

Advertisements

ಹೌದು, ಮಧ್ಯಪ್ರದೇಶದ ಉಜ್ಜಿಯಿನಿಯ ಚಿಖಾಲಿ ಎಂಬ ಗ್ರಾಮದಲ್ಲಿನ ಜನರು ವಿಚಿತ್ರವಾದ ಆಚರಣೆ ಮಾಡುತ್ತಾರೆ. ಇಲ್ಲಿನ ಜನರು ರಾಕ್ಷಸ ರಾಜನಾಗಿದ್ದ ರಾವಣಾಸುರನ ಪೂಜೆ ಮಾಡುತ್ತಾರೆ. ಒಂದು ವೇಳೆ ರಾವಣನಿಗೆ ಅಪಮಾನ ಮಾಡಿದ್ರೆ ಅದು ಆ ಊರಿಗೆ ಅಪಶಕುನ ಎಂಬುದು ಆ ಹಳ್ಳಿಗರ ನಂಬಿಕೆ. ನವರಾತ್ರಿಯಲ್ಲಿ ದುರ್ಗಾದೇವಿಯನ್ನ ಪೂಜೆ ಮಾಡಲಾಗುತ್ತದೆ. ಆದರೆ ಈ ಊರಿನವರ ಸಂಪ್ರದಾಯದ ಪ್ರಕಾರ ಈ ದಿನದಂದು ಗ್ರಾಮಸ್ಥರು ರಾಕ್ಷಸ ದಶಕಂಠನ ಪೂಜೆ ಮಾಡುತ್ತಾರೆ. ಇನ್ನು ವಿಶೇಷ ಎಂದರೆ ಇದೇ ಪೂಜೆಯ ರಾವಣೇಶ್ವರನ ಗೌರವಾರ್ಥವಾಗಿ ಜಾತ್ರೆ ಕೂಡ ಮಾಡಲಾಗುತ್ತದೆಯೆಂತೆ. ಇನ್ನು ರಾವಣಾಸುರನಗಾಗಿಯೇ ಇಲ್ಲಿ ದೇವಸ್ಥಾನವನ್ನು ಕೂಡ ಕಟ್ಟಲಾಗಿದ್ದು ಈ ಮಂದಿರಕ್ಕೆ ಪೂಜಾರಿ ಕೂಡ ಇದ್ದಾರೆ.

ಇನ್ನು ಅವರು ರಾವಣೇಶ್ವರನ ಪೂಜೆ ಮಾಡುವುದರಿಂದ ಆ ಅರ್ಚಕರಿಗೆ ರಾವಣ ಅಂತಲೂ ಕರೆಯುವುದು ವಾಡಿಕೆಯಾಗಿಬಿಟ್ಟಿದೆ. ಈ ಹಳ್ಳಿಯ ಜನರಿಗೆ ತಾವು ದೇವರೆಂದು ಪೂಜಿಸುವ ರಾವಣನ ಮೇಲೆ ಎಷ್ಟು ಭಕ್ತಿ ಇದೆ ಎಂದರೆ ತಮ್ಮ ಗ್ರಾಮಕ್ಕೆ ಏನಾದರೂ ತೊಂದರೆಯಾದಲ್ಲಿ ಇಲ್ಲಿಗೆ ಬರುವ ಊರಿನವರು ತಮ್ಮ ಬೇಡಿಕೆ ಈಡೇರುವ ತನಕ ದಶಕಂಠ ರಾವಣನ ವಿಗ್ರಹದ ಮುಂದೆ ಕುಳಿತು ಉಪವಾಸ ಮಾಡುತ್ತಾರೆ. ಹೀಗೆ ಮಾಡಲು ಅವರಿಗೆ ಕಾರಣ ಕೂಡ ಇದೆ. ಒಂದು ಬಾರಿ ಈ ಹಳ್ಳಿ ಸೇರಿದಂತೆ ಪಕ್ಕದ ಹಳ್ಳಿಗಳಿಗೆ ಬರಗಾಲ ಬಂದು ಕ್ಷಾಮ ಬಂದಾಗ ರಾವಣನ ದೇವಸ್ಥಾನದ ಮುಂದೆ ನಿಂತು ಪ್ರಾರ್ಥನೆ ಮಾಡಿದರಂತೆ. ಆದರೆ ಕಾಕತಾಳಿಯವೋ ಇಲ್ಲ ಪವಾಡ ಸದೃಶವೋ ಮುಂದಿನ ಎರಡೇ ದಿನಗಳಲ್ಲಿ ಬಾರಿ ಮಳೆಯಾಗಿದೆ.

ಇನ್ನೂ ಒಂದು ಈ ಹಳ್ಳಿಗರ ನಂಬಿಕೆಯ ಪ್ರಕಾರ ನವರಾತಿಯ್ರ ಸಮಯದಲ್ಲಿ ದಶಮಿಯೆಂದು ರಾವಣನ ಉತ್ಸವ ಮಾಡದ ಕಾರಣ ಅದೇ ವೇಳೆ ಇಡೀ ಗ್ರಾಮಕ್ಕೆ ಬೆಂ’ಕಿ ಬಿತ್ತು. ಇನ್ನು ಈ ಅವ’ಘಡದಲ್ಲಿ ಗ್ರಾಮದ ಮುಕ್ಕಾಲು ಭಾಗ ಬೆಂ’ಕಿಗೆ ಆಹುತಿಯಾಗಿತ್ತು ಎಂದು ಆ ಊರಿನ ಗ್ರಾಮಸ್ಥರು ಹೇಳುತ್ತಾರೆ. ಹೀಗೆ ಎರಡು ಮೂರೂ ಬಾರಿ ರಾವಣನ ಪೂಜೆ ಮಾಡದೆ ಇದ್ದಾಗ ಊರಿಗೆ ಬೆಂ’ಕಿ ಬಿದ್ದಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ. ಆದರೆ ಪೂಜೆ ಮಾಡದ ಕಾರಣ ಇಡೀ ಊರಿಗೆ ಬೆಂಕಿ ಬೀಳುತ್ತೆ ಎಂದರೆ ಇದು ನಂಬಲಾರ್ಹದ ಸಂಗತಿ ಎಂದೇ ಹೇಳಬಹುದು. ಇನ್ನು ನಮಗೆಲ್ಲಾ ಗೊತ್ತಿರುವಂತೆ ಪಕ್ಕದ ದೇಶ ಶ್ರೀಲಂಕಾದಲ್ಲಿಯೂ ಕೂಡ ರಾವಣನ ಪೂಜೆ ಮಾಡಲಾಗುತ್ತದೆ. ಏನೀ ಇದ್ದರೂ ಅದೆಲ್ಲಾ ಅವರವಾರ ನಂಬಿಕೆಗೆ ಬಿಟ್ಟ ವಿಚಾರ.