Advertisements

ಯಡಿಯೂರಪ್ಪ ಹೆಂಡತಿ.. 5 ಮಕ್ಕಳು, ಮೊಮ್ಮಕ್ಕಳನ್ನು ಮೊದಲ ಬಾರಿಗೆ ನೋಡಿ! ಯಡಿಯೂರಪ್ಪ ಲೈಪ್ ಸ್ಟೋರಿ..

Kannada Mahiti

ಪ್ರಸ್ತುತ ಆಡಳಿತಾರೂಢ ಬಿಜೆಪಿಯ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸುತ್ತಾ ಇರುವ ಸಿಎಂ ಯಡಿಯೂರಪ್ಪ ಅವರ ಬಗ್ಗೆ ನಿಮಗೆಷ್ಟು ಗೊತ್ತು? ಬಿ ಎಸ್ ಯಡಿಯೂರಪ್ಪ ಅವರು ಫೆಬ್ರವರ 27, 1943 ರಲ್ಲಿ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಜನಿಸಿದ್ರು. ಇವರ ತಂದೆ ಸಿದ್ಧಲಿಂಗಪ್ಪ, ತಾಯಿ ಪುಟ್ಟ ತಾಯಮ್ಮ. ಎಲ್ಲರಂತೆ ಸಾಮಾನ್ಯನಂತೆ ಬೆಳೆದು ಯಡಿಯೂರಪ್ಪ ಅವರು ಬಿಎ ಪದವಿಯನ್ನು ಮುಗಿಸ್ತಾರೆ. ಕಾಲೇಜು ದಿನಗಳಲ್ಲಿಯೇ ಆರ್ ಎಸ್ ಎಸ್ ಸಂಘ ಸಂಸ್ಥೆಗಳ ಕೆಲಸದಲ್ಲಿ ಸಕ್ರೀಯರಾಗಿದ್ದ ಬಿಎಸ್ವೈ ಮುಂದೊಂದು ದಿನ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡೀತಾರೆ ಅಂತ ಯಾರು ಊಹಿಸಿರಲಿಲ್ಲ..

[widget id=”custom_html-3″]

Advertisements


ಪದವಿ ಮುಗಿಸಿದ ತಕ್ಷಣ 1965ರಲ್ಲಿ ಯಡಿಯೂರಪ್ಪ ಅವರಿಗೆ ಫಸ್ಟ್ ಡಿವಿಷನ್ ಕ್ಲರ್ಕ್ ಆಗಿ ಕೆಲಸ ಸಿಗುತ್ತದೆ..ಆದರೆ ಇದನ್ನ ತಿರಸ್ಕರಿಸಿದ ಅವ್ರು, ಶಿಕಾರಿಪುರದ ವೀರಭದ್ರ ಶಾಸ್ತ್ರಿ ಅವರ ರೈಸ್ ಮಿಲ್ ನಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರ ಶಾಸ್ತ್ರಿಗಳ ವಿಶ್ವಾಸವನ್ನ ಗಳಿಸಿ ಅವರದೇ ಮಗಳಾದ ಮಿತ್ರ ದೇವಿಯವರನ್ನು ಮದುವೆಯಾಗಿ ಶಿವಮೊಗ್ಗದಲ್ಲಿ ಹಾರ್ಡ್ವೇರ್ ಶಾಪನ್ನು ಪ್ರಾರಂಭಿಸುತ್ತಾರೆ. ಯಡಿಯೂರಪ್ಪನವರಿಗೆ ಐದು ಜನ ಮಕ್ಕಳಿದ್ದು ಇಬ್ಬರು ಗಂಡು ಮಕ್ಕಳು ಮೂವರು ಹೆಣ್ಣುಮಕ್ಕಳಿದ್ದಾರೆ. ಗಂಡು ಮಕ್ಕಳಾದ ರಾಘವೇಂದ್ರ ಹಾಗೂ ವಿಜಯೇಂದ್ರ ಇಬ್ಬರೂ ಸಹ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.

[widget id=”custom_html-3″]

ಆದರೆ ಹೆಣ್ಣು ಮಕ್ಕಳಾದ ಅರುಣಾದೇವಿ ಉಮಾದೇವಿ ಪದ್ಮಾದೇವಿ ರಾಜಕೀಯದಿಂದ ದೂರ ಉಳಿದಿದ್ದಾರೆ.
ಹಂತಹಂತವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಬಿಎಸ್ವೈ ಪಾಲ್ಗೊಂಡು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿ ಗೆದ್ದು ಶಾಸಕರಾಗ್ತಾರೆ. ಇನ್ನು ಯಡಿಯೂರಪ್ಪನವರು ಶಾಸಕರಾದ ಸಂದರ್ಭದಲ್ಲಿ ಬಿಜೆಪಿ ರಾಜ್ಯದಲ್ಲಿ ನೆಲೆಕಂಡು ಕೊಂಡಿರಲಿಲ್ಲ. ತದನಂತರ 2008ರಲ್ಲಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಗೆಲುವಿನ ನಗೆ ಬೀರಿತು.

[widget id=”custom_html-3″]

ಆಮೇಲೆ 2008ರ ಮೇ 30ರಂದು ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ 4ಸಲ ಮುಖ್ಯಮಂತ್ರಿಯಾಗಿ ಮೂರು ಸಲ ಕರ್ನಾಟಕ ವಿಧಾನಸಭಾ ಪ್ರತಿಪಕ್ಷ ನಾಯಕನಾಗಿ ಯಡಿಯೂರಪ್ಪನವರು ಗುರುತಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪ ಅವರ ಆಡಳಿತ ವೈಖರಿ ಬಗ್ಗೆ ನೀವೇನು ಹೇಳ್ತೀರಾ..