Advertisements

ಮನೆಯ ಬಳಿ ಬರಬೇಡಿ ಎಂದ ರಾಧಿಕಾ ಪಂಡಿತ್ ಅವರಿಗೆ ಈ ಅಭಿಮಾನಿ ಖಡಕ್ ಆಗಿ ಕೇಳಿದ ಪ್ರಶ್ನೆ ಏನ್ ಗೊತ್ತಾ ?ಫ್ಯಾನ್ಸ್ ಗಳ ನಡುವೆಯೇ ಶುರುವಾಗಿದೆ ವಾದ ಪ್ರತಿವಾದ..

Cinema

ತಮ್ಮ ನೆಚ್ಚಿನ ನಟ ನಟಿಯರೆಂದರೆ ಅಭಿಮಾನಿಗಳಿಗೆ ಅದೇನೋ ಪ್ರೀತಿ. ಇನ್ನು ಅವರ ಸಿನಿಮಾಗಳು ಬಿಡುಗಡೆಯಾದಾಗ ಹೇಗೆ ಹಬ್ಬದಂತೆ ಸಂಭ್ರಮ ಪಟ್ಟು ಸಿನಿಮಾ ನೋಡುತ್ತಾರೋ ಹಾಗೆಯೇ ನೆಚ್ಚಿನ ನಟ ನಟಿಯರ ಹುಟ್ಟು ಹಬ್ಬ ಬಂದರೆ ಅವರ ಮನೆಗಳ ಬಳಿ ಹೋಗಿ ಅವರಿಗೆ ಶುಭಾಷಯಗಳನ್ನ ಹೇಳಿ ಕೇಕ್ ಕಟ್ ಮಾಡಿ ಸಂಭ್ರಮ ಪಡುತ್ತಾರೆ ಅಭಿಮಾನಿಗಳು. ಈಗ ಅದೇ ರೀತಿ ಇಂದು ಸ್ಯಾಂಡಲ್ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ಅವರ ೩೭ನೇ ವರ್ಷದ ಹುಟ್ಟು ಹಬ್ಬವಾಗಿದ್ದು, ತನ್ನ ಹುಟ್ಟುಹಬ್ಬದ ಆಚರಣೆಗಾಗಿ ಅಭಿಮಾನಿಗಳು ಮನೆಯ ಬಳಿ ಬರಬೇಡಿ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisements

ಎಂದಿನಂತೆ ವರ್ಷ ವರ್ಷ ಕೂಡ ಬೇರೆ ಬೇರೆ ಊರುಗಳಿಂದ ನನ್ನ ಹುಟ್ಟು ಹಬ್ಬ ಆಚರಣೆ ಮಾಡುವ ಸಲುವಾಗಿ ಮನೆಯ ಬಳಿ ಭೇಟಿ ಮಾಡಲು ಬರುತ್ತಿದ್ದೀರಿ. ಆದರೆ ಕಳೆದ ಎರಡು ವರ್ಷಗಳಿಂದ ನಿಮ್ಮನ್ನ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಈಗ ಎಲ್ಲಾ ಕಡೆ ಕೋವಿಡ್ ಇರುವ ಕಾರಣದಿಂದ, ನಿಮ್ಮ ಆರೋಗ್ಯದ ದೃಷ್ಟಿಯಿಂದ ಭೇಟಿ ಮಾಡಲಾಗುತ್ತಿಲ್ಲ. ಇನ್ನು ಕೊ’ರೋನಾ ಕಾರಣದಿಂದಾಗಿ ಮನೆಯ ಬಳಿ ಯಾವುದೇ ಸಂಭ್ರಮ ಆಚರಣೆ ಇರೋದಿಲ್ಲ. ದಯಮಾಡಿ ಅಭಿಮಾನಿಗಳು ಬೇಜಾರಾಗಬೇಡಿ. ಜಾಲತಾಣಗಳಲ್ಲಿ ಮೆಸೇಜ್ ಗಳನ್ನ ನೋಡುತ್ತಿದ್ದು ಎಷ್ಟಾಗುತ್ತೋ ಅಷ್ಟು ರಿಪ್ಲೇ ಕೊಡುತ್ತೇನೆ. ಎಲ್ಲಾ ಅಭಿಮಾನಿಗಳ ಪ್ರೀತಿಗೆ ಧನ್ಯವಾದಗಳು ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಅಭಿಮಾನಿಗಳು ಕೂಡ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕವೇ ರಾಧಿಕಾ ಪಂಡಿತ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಹೇಳುತ್ತಿದ್ದಾರೆ. ಆದರೆ ವ್ಯಕ್ತಿಯೊಬ್ಬರು ಬೇರೆ ರೀತಿಯೇ ಕಾಮೆಂಟ್ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ನೀವೆಲ್ಲಾ ಸೆಲೆಬ್ರೆಟಿಗಳು ಇದೇ ರೀತಿ ಹೇಳ್ತೀರಾ..ಹುಟ್ಟು ಹಬ್ಬದ ಆಚರಣೆಗೋಸ್ಕರ ಮನೆಯ ಬಳಿ ಬರಬೇಡ ಅಂತ ಹೇಳುವ ನೀವು ನಿಮ್ಮ ಸಿನಿಮಾಗಳನ್ನ ಏಕೆ ಬಿಡುಗಡೆ ಮಾಡುತ್ತೀರಾ..ಬಂದು ಸಿನಿಮಾ ನೋಡಿ ಎಂದು ಏಕೆ ಪ್ರಚಾರ ಮಾಡುತ್ತೀರಾ..ನಿಮ್ಮ ಸಿನಿಮಾಗಳನ್ನ ಬಂದು ನೋಡಿದಾಗ ನಮ್ಮ ಏನೂ ಆಗುವುದಿಲ್ಲವಾ..ಅರ್ಥ ಮಾಡಿಕೊಳ್ಳಿ ಮೇಡಂ ಎಂದು ಖಡಕ್ ಆಗಿ ರಾಧಿಕಾ ಪಂಡಿತ್ ಅವರಿಗೆ ರಿಪ್ಲೆ ಕೊಟ್ಟಿದ್ದಾನೆ. ಇನ್ನು ಇದೆ ವಿಚಾರವಾಗಿ ಅಭಿಮಾನಿಗಳ ನಡುವೆಯೇ ಪರ ವಿರೋಧದ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.