Advertisements

ಯಡಿಯೂರಪ್ಪನವರು ಮುಖ್ಯಮಂತ್ರಿ ಅಷ್ಟೇ ! ಇವರು ಮಾತ್ರ ನಮ್ಮ ನಾಯಕರು – ಬಸವನಗೌಡ ಪಾಟೀಲ್

News

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಉಲ್ಬಣವಾಗುತ್ತಿದೆ. ಆದರೆ ಇದರ ನಡುವೆಯೇ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ತಿರುವುಗಳು ಶುರುವಾಗಿದ್ದು, ಬಂಡಾಯದ ಬಾವುಟ ಗೋಚರವಾಗುವ ಲಕ್ಷಣಗಳು ಕಾಣಿಸುತ್ತಿವೆ.ಇದಕ್ಕೆ ಕಾರಣ ಶಾಸಕರಾಗಿರುವ ಬಸವನಗೌಡ ಪಾಟೀಲ್. ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿ ಅಮಿತ್ ಶಾ ಹಾಗೂ ಜೆಪಿ.ನಡ್ಡಾ ಮಾತ್ರ ನನ್ನ ನಾಯಕರ ಎಂದಿರುವ ಇವರು ಯಡಿಯೂರಪ್ಪನವರು ಮುಖ್ಯಮಂತ್ರಿಗಳು ಅಷ್ಟೇ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಅಚ್ಚರಿಗೆ ಕಾರಣವಾಗಿದೆ.

Advertisements

ಇನ್ನು ಎರಡು ದಿನಗಳ ಹಿಂದೆಯೇ ಶಾಸಕ ಬಸವನಗೌಡ ಪಾಟೀಲ್ ಅವರ ನೇತೃತ್ವದಲ್ಲಿ ೨೫ ಮಂದಿ ಶಾಸಕರೊಂದಿಗೆ ಸಭೆ ನಡೆಸಲಾಗಿದೆ ಎಂದು ಹೇಳಲಾಗಿದ್ದು, ಕೇಂದ್ರದ ನಾಯಕರು ಮುಂದಾದರೆ ಬದಾಲಾವಣೆಗೆ ಸೈ ಎಂದಿದ್ದಾರೆ ಎನ್ನಲಾಗಿದೆ.ಇನ್ನು ಇದರ ಅರ್ಥ ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಬಯಸುತ್ತಿದ್ದಾರೆಯೇ ಎಂಬುದಾಗಿದೆ.

ಇನ್ನು ಈ ಸಭೆಯಲ್ಲಿ ಅಂದು ಭಾಗವಹಿಸಿದ್ದ ರಾಜು ಗೌಡ ಅವ್ರು ಸಿಎಂ ಯಡಿಯೂರಪ್ಪನವರೇ ನಮ್ಮ ನಾಯಕರು.ಅವರ ನಾಯಕತ್ವದ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಉಮೇಶ್ ಕತ್ತಿ ಸೇರಿದಂತೆ ಕೆಲವರ ಬಗ್ಗೆ ಅಸಮಾಧಾನ ಹೊರಹಾಕಿರುವ ರಾಜುಗೌಡರು, ರಾಜ್ಯ ಕರೋನದಿಂದಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ನಾವು ಸಿಎಂ ಯಡಿಯೂರಪ್ಪನವರ ಸಹಾಯಕ್ಕೆ ನಿಲ್ಲಬೇಕಾಗಿದೆ ಎಂದು ಅವರು ಹೇಳಿದ್ದಾರೆ.