Advertisements

ಸ್ಟಾರ್ ನಿರ್ದೇಶಕ ಭಟ್ರು ತಮ್ಮ ಹುಟ್ಟಬ್ಬದ ಶುಭಾಶಯ ಹೇಳಿದವರಿಗೆ ಹೀಗ್ ಹೇಳೋದಾ!?

Cinema

ಪ್ರಿಯ ಓದುಗರೆ ನಿಮ್ಮೆಲ್ಲರಿಗೂ ನಮಸ್ಕಾರ. ಯೋಗರಾಜ್ ಭಟ್, ನಾವು..ನೀವು..ಎಲ್ಲರೂ ಈ ಹೆಸರು ಕೇಳಿಯೇ ಕೇಳಿರುತ್ತೇವೆ.
ಯೋಗ್ರಾಜ್ ಭಟ್ ಅಂದರೆ ಅಷ್ಟೊಂದು ವಿಶೇಷ. ನಮ್ಮ ಚಂದನವನದ ಬೆಸ್ಟ್ ಡೈರೆಕ್ಟರ್ ಸಾಲಿನಲ್ಲಿ ಇವರು ಮುಂಚೂಣಿ ಸ್ಥಾನದಲ್ಲಿ ನಿಲ್ಲುತ್ತಾರೆ.
ಇವರು ಒಬ್ಬ ನಿರ್ದೇಶಕ, ಬರಹಗಾರ, ಸಂಭಾಷಣೆಕಾರ ಗೀತೆರಚನೆಕಾರ ಹಾಗೂ ನಿರ್ಮಾಪಕ,ನಟನಾಗಿಯೂ ಸಹ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡವನ್ನು ಬೇರೆ ಭಾಷೆಯವರು ಕೂಡ ತಿರುಗಿ ನೋಡುವ ಹಾಗೆ ಅನೇಕ ಚಿತ್ರಗಳನ್ನು ನಮ್ಮ ಕನ್ನಡ ಚಲನಚಿತ್ರಕ್ಕೆ ನೀಡಿದ್ದಾರೆ ಎಂದರೆ ಬಹುಶಃ ಅತಿಶಯವಲ್ಲ. ಯೋಗರಾಜ್ ಭಟ್ಟರು ಇಷ್ಟ ಆಗೋದೇ ಅವರ ವಿಶಿಷ್ಟ ಸಂಭಾಷಣೆಗಳು.

ಅವು ಯಾವತರ ಇರುತ್ತವೆ ಅಂದ್ರೆ ಕೆಲಬಾರಿ, ನೇರವಾಗಿ ನಾನ್ ಫೀಲ್ಟರ್ ತರ, ಕೆಲವೊಮ್ಮೆ ಹಳ್ಳಿ ಸೊಗಡಿನ ಪಕ್ಕಾ ದೇಶಿ ಭಾಷೆಯಂತೆ, ಮೊಗದೊಮ್ಮೆ ದೊಡ್ಡ ಫಿಲಾಸಫರ್ ಮಾತಿನ ತರ, ಮನದಲ್ಲಿ ಉಳಿಯುವಂತೆ ಸಂಭಾಷಣೆಗಳು ಒಳಗೊಂಡಿರುತ್ತವೆ. ಇವರು ಗೀತರಚನೆಕಾರರಾಗಿಯೂ ಕೂಡ ತನ್ನದೇ ಆದಂತಹ ಆಯಾಮವನ್ನು ನೀಡಿದ್ದಾರೆ. ಭಟ್ಟರು ಬರೆದಿರುವ ಅನೇಕ ಚಿತ್ರಗೀತೆಗಳು ತುಂಬಾನೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿವೆ. ಈಗ ಹಾಡು ಬರೆಯೋದರಲ್ಲಂತೂ ತುಂಬಾ ಕಾರ್ಯನಿರತರಾಗಿದ್ದಾರೆ. ಅದು ಯಾವ ಪರಿಯಾಗಿ ಅಂತ ಹೇಳಿದ್ರೆ ಎಲ್ಲಾ ನಿರ್ದೇಶಕರು ಕೂಡ ಯೋಗರಾಜ್ ಸರ್ ಅತ್ರ ಒಂದು ಹಾಡದ್ರು ಬರೆಸಿಕೊಳ್ಳಬೇಕು ಎನ್ನಿವಷ್ಟು ಅವರು ಬಿಜಿಯಾಗಿದ್ದಾರೆ.

Advertisements

“ಮುಂಗಾರು ಮಳೆ ಏನು ನಿನ್ನ ಹನಿಗಳ ಲೀಲೆ”ಇಂತಹ ವೇದನೆಯ ಹಾಡಿಂದ ಹಿಡಿದು,”ಬಸಣ್ಣಿ ಬಾ” ಎನ್ನುವವರೆಗಿನ ಐಟಂ ಹಾಡಿನವರೆಗೂ ಇವರ ಬೇಕೇಬೇಕು. ಇನ್ನು ಎಣ್ಣೆ ಹಾಡಂತೂ ಇವರು ಬರೀಲೇಬೇಕು. ಏಕೆಂದ್ರೆ ಭಟ್ರು ಬರೆದಿರುವ ಪ್ರತಿ ಎಣ್ಣೆ ಹಾಡು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. ಯೋಗರಾಜ್ ಭಟ್ರು ಒಳಗೆ ಅದ್ಭುತವಾದಂತಹ ಒಬ್ಬ ಫಿಲಾಸಫರ್ ಇದ್ದಾನೆ ಅಂತ ಹೇಳಬಹುದು ಏಕೆಂದರೆ ಅವರ ಹಾಡುಗಳಲ್ಲಿ ಅಷ್ಟೇ ಮಜಬೂತಾಗಿ ಅನೇಕ ಅದ್ಭುತ ಸಾಲುಗಳನ್ನು ಇಟ್ಟಿರುತ್ತಾರೆ. ಇವರು “ಸೌಂದರ್ಯ ಸಮರ ಸೋತವನೆ ಅಮರ” “ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ” ಹೀಗೆ ರಸಮಯ ಗೀತೆಗಳನ್ನು ಸಹಾ ಅವರು ಬರುತ್ತಾರೆ.

ಇವರು ಮುಗುಳುನಗೆ,ಮುಂಗಾರು ಮಳೆ,ಗಾಳಿಪಟ ಮನಸಾರೆ,ದನ ಕಾಯೋನು,ಪಂಚತಂತ್ರ ಹೀಗೆ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಸದ್ಯಕ್ಕೆ “ಪದವಿಪೂರ್ವ” ಸಿನೆಮಾವನ್ನು ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಾಳಿಪಟ-2 ಎನ್ನುವ ಸಿನಿಮಾ ಅವರ ನಿರ್ದೇಶನದ ಮುಂಬರಲಿರುವ ಸಿನೆಮಾ. ಮೊನ್ನೆಯಷ್ಟೇ ಅವರ ಜನ್ಮದಿನ ವಾಯಿತು. ಅವರ ಜನ್ಮದಿನ ಅದರಿಂದ ಅನೇಕ ನಿರ್ದೇಶಕರು ,ನಟರು, ನಿರ್ಮಾಪಕರು, ಗೀತೆರಚನೆಕಾರರು ಹೀಗೆ ಅನೇಕ ಮಂದಿ ಅವರ ಜನ್ಮದಿನಕ್ಕೆ ಶುಭಾಶಯವನ್ನು ಕೋರಿದರು. ಜನ್ಮದಿನಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಕೂಡ ಅವರೊಂದು ಮಾತು ಹೇಳಿದ್ದಾರೆ. ಅದು ಏನಪ್ಪಾ ಹೇಳಿದ್ರು ಅಂದ್ರೆ..

“ನನ್ನ ಹುಟ್ಟುಹಬ್ಬ ಎಷ್ಟು ಕತ್ತೆ ವಯಸ್ಸಾಯ್ತು ಗೊತ್ತಿಲ್ಲ. ಸಂತಸ, ಆನಂದ, ಧಾವಂತ,ಗಡಿಬಿಡಿ, ವಿಪರೀತ ಕೆಲಸ, ಏನೋ ನೆಮ್ಮದಿ..ಎಲ್ಲರಿಗೂ ನಮನ + ಧನ್ಯವಾದ” ಹೀಗೆ ಅವರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಜನ್ಮದಿನಕ್ಕೆ ಶುಭಾಶಯ ಕೋರಿದ ಸರ್ವರಿಗೂ ಧನ್ಯವಾದವನ್ನು ಅರ್ಪಿಸಿದ್ದಾರೆ. ಎಲ್ಲದರಲ್ಲೂ ಭಿನ್ನ ಅನಿಸಿಕೊಳ್ಳುವ ನಮ್ಮ ಭಟ್ರು. ಅವರ ಜನ್ಮದಿನಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಕೂಡ ವಿಭಿನ್ನವಾಗಿ ತಮ್ಮ ಧನ್ಯವಾದವನ್ನು ಅರ್ಪಿಸಿದ್ದಾರೆ. ಯೋಗರಾಜ್ ಭಟ್ಟರ ಮುಂದಿನ ಎಲ್ಲಾ ಯೋಜನೆಗಳು ಒಳ್ಳೆದಾಗಲಿ.ಧನ್ಯವಾದ.