Advertisements

ಸಿಎಂ ಯೋಗಿ ಮಾದರಿಗೆ ಫಿದಾ ಅದ ಅಮೆರಿಕಾ ಅಧ್ಯಕ್ಷ ಟ್ರಂಪ್ ! ವೈಟ್ ಹೌಸ್ ನಲ್ಲಿ ಸದ್ದು ಮಾಡಿ ಯೋಗಿ ಮಾದರಿ ?

News

ಸ್ನೇಹಿತರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾತ್ ಅವರ ಮಾದರಿಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫುಲ್ ಫಿದಾ ಆಗಿದ್ದಾರೆ. ಅಮೆರಿಕಾ ಟ್ರಂಪ್ ಗೂ ಯುಪಿಯ ಆದಿತ್ಯ ನಾತ್ ಗೂ ಏನಪ್ಪಾ ನಂಟು ಅಂತ ನೀವು ಅಂದುಕೊಳ್ಳಬಹುದು. ಯೋಗಿ ಆದಿತ್ಯನಾಥ್ ರವರ ಉತ್ತರಪ್ರದೇಶದಲ್ಲಿ ಪ್ರಯೋಗ ಮಾಡಿದ್ದ ಮಾದರಿಯೊಂದು ಅಮೇರಿಕಾದ ಅಧ್ಯಕ್ಷ ಟ್ರಂಪ್ ಗೆ ತುಂಬಾ ಮೆಚ್ಚುಗೆಯಾಗಿದ್ದು, ವೈಟ್ ಹೌಸ್ ನಲ್ಲಿ ಸದ್ದು ಮಾಡುತ್ತಿದೆ.

Advertisements

ಹೌದು, ನಮಗೆಲ್ಲಾ ಗೊತ್ತಿರುವಂತೆ ಕಳೆದ ವರ್ಷ ಅಂದರೆ ೨೦೧೯ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ, ಸಿಎಎ ವಿರುದ್ಧ ಭಾರತದಲ್ಲಿ ಬಾರಿ ಪ್ರತಿಭಟನೆ ಉಂಟಾಗಿತ್ತು. ಅಪಾರ ಸಾವು ನೋವು ಸಂಭವಿಸಿದ್ದು, ಅಪಾರ ಆಸ್ತಿಗೆ ಹಾನಿಯುಂಟಾಗಿತ್ತು. ಸರ್ಕಾರಿ ಆಸ್ತಿಗಳನ್ನ ಕೂಡ ಹಾಳು ಮಾಡಲಾಗಿತ್ತು. ಇದೆ ಸಂಧರ್ಭದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ನೇತೃತ್ವದ ಸರ್ಕಾರ ದಂಗೆಗಳನ್ನ ತಡೆಯುವ ಸಲುವಾಗಿ ಹೊಸ ಕಾನೂನು ಕ್ರಮವೊಂದನ್ನ ಜಾರಿಗೆ ತಂದಿತ್ತು.

ಪ್ರತಿಭಟನೆಯ ನೆಪದಲ್ಲಿ ಅಪಾರ ಆಸ್ತಿ ಪಾಸ್ತಿಯ ಹಾನಿಗೆ ಕಾರಣರಾದ, ಸಾವು ನೋವಿಗೆ ಕಾರಣರಾದ ೫೭ ಮಂದಿಯ ಹೆಸರು,, ಅವರು ಹೆಸರು ವಿಳಾಸ ಸೇರಿದಂತೆ, ಅವರಿಂದ ವಸೂಲಿ ಮಾಡಲಿರುವ ಹಣದ ಮಾಹಿತಿಯನ್ನು ಕೂಡ ಸುಮಾರು ೧೦೦ಕ್ಕೂ ಹೆಚ್ಚು ಸ್ಟಳಗಳಲ್ಲಿ ಅಂಟಿಸಿದ್ದರು. ಈಗ ಸಿಎಂ ಯೋಗಿಯವರ ಇದೆ ಮಾದರಿ ವೈಟ್ ಹೌಸ್ ನಲ್ಲಿ ಸದ್ದು ಮಾಡುತ್ತಿದೆ. ಅಲ್ಲಿ ಕೂಡ ದಂಗೆಯಲ್ಲಿ ಪಾಲ್ಗೊಂಡಿದ್ದ ೧೫ ಜನರ ಫೋಟೋಗಳನ್ನ ಹಾಕಲಾಗಿದ್ದು, ಅದರಲ್ಲಿ ಅವರ ವಿಳಾಸ ಕೂಡ ಇದೆ ಎಂದು ಹೇಳಲಾಗಿದೆ.