Advertisements

ನಾನು ಕಪ್ಪಗಿದೀನಿ ನೋಡೊಕೆ ಚೆನ್ನಾಗಿಲ್ಲ ಅನ್ನೋರು ಇವರ ಬಗ್ಗೆ ತಿಳ್ಕೊಬೇಕು.. ದಿನಕ್ಕೆ ಈತನ ಪೇಮೆಂಟ್ ಎಷ್ಟು ಲಕ್ಷ ಗೊತ್ತಾ?

Cinema

ದೇವರು ಎಲ್ಲರಿಗೂ ಒಂದು ರೂಪವನ್ನು ನೀಡಿರುತ್ತಾನೆ. ಕೆಲವರು ಬೆಳ್ಳಗಿದ್ದರೆ, ಇನ್ನು ಕೆಲವರು ಕಪ್ಪಾಗಿದ್ದು, ಜನರ ನಿಂದನೆಗೆ ಗುರಿಯಾಗಿರುತ್ತಾರೆ. ಮೈಬಣ್ಣ ಯಾವುದೇ ಇರಲಿ ಆತ್ಮಬಲ ಒಂದಿದ್ದರೆ ಅವರು ಎತ್ತರಕ್ಕೆ ಎರುತ್ತಾರೆ. ಇದಕ್ಕೆ ತಮಿಳಿನ ಯೋಗಿ ಬಾಬು ಅವರ ಜೀವನವೇ ಒಂದು ಉದಾಹರಣೆ. ತಮಿಳು ಭಾಷೆಗಳಲ್ಲಿ ಯೋಗಿ ಬಾಬು ಅವರ ಹೆಸರು ಇದೀಗ ರಾರಾಜಿಸುತ್ತಿದೆ. ಆದ್ರೆ ಅದೊಂದು ಕಾಲದಲ್ಲಿ ತುತ್ತು ಅನ್ನಕ್ಕೆ ಪರದಾಡಿದವರು ಯೋಗಿ ಬಾಬು. ಹೌದು.. ಯೋಗಿ ಬಾಬು ಅವರು ನೋಡಲು ಕಪ್ಪಾಗಿದ್ದವರು. ನೋಡಲು ಸುಂದರವಲ್ಲದ ಮುಖದವರು. ಇವರ ತಲೆಗೂದಲು ಗುಂಗುರು ವಾಗಿದ್ದರಿಂದ ಇವರನ್ನು ಕಂಡವರು ಇವನೊಬ್ಬ ಸೈ’ಕೋ, ಕ’ಳ್ಳ, ಡಕಾಯಿತ, ಹು’ಚ್ಚ ಇರಬಹುದು ಎನ್ನುತ್ತಿದ್ದರಂತೆ. ಅದೆಷ್ಟೋ ಜನ ಇವರನ್ನು ಅವಮಾನಿಸಿದ್ದು ಇದೆ. ತನ್ನ ಹೊಟ್ಟೆಪಾಡಿಗಾಗಿ ಕಲಾವಿದರಾದ ಯೋಗಿ ಬಾಬು ಒಂದು ದಿನಕ್ಕೆ ಎರಡು ನೂರರಿಂದ ಮುನ್ನೂರು ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ.

[widget id=”custom_html-3″]

Advertisements

ಹೀಗಿರುವಾಗ ಒಬ್ಬ ಪ್ರೊಡ್ಯೂಸರ್ ನಿನಗೆ ದಿನಕ್ಕೆ 300 ರೂಪಾಯಿ ಸಂಭಾವನೆ ನೀಡುತ್ತೇನೆ. ಸಿನಿಮಾದಲ್ಲಿ ಕಾಮಿಡಿ ಪಾತ್ರ ಮಾಡುವೆಯ ಎಂದು ಕೇಳಿದರಂತೆ. ಇದಕ್ಕೆ ಯೋಗಿ ಬಾಬು ಆಯ್ತು ಎನ್ನುತ್ತಾರೆ. ಹತ್ತು ದಿನ ಶೂಟಿಂಗ್ ಇದ್ದು, ಅಷ್ಟು ದಿನದ ಪೇಮೆಂಟ್ ಅನ್ನು ಒಂದೇ ಬಾರಿಗೆ ಕೊನೆಯಲ್ಲಿ ನೀಡುವುದಾಗಿ ತಿಳಿಸುತ್ತಾರಂತೆ. ಅದರಂತೆ ಹತ್ತು ದಿನ ಆದಮೇಲೆ ಯೋಗಿ ಬಾಬು ಅವರಿಗೆ ಕೇವಲ 1500 ರೂಪಾಯಿ ಮಾತ್ರ ನೀಡುತ್ತಾರೆ. ಅರ್ಧ ಮಾತ್ರ ನೀಡಿದ್ದೀರಿ ಇನ್ನುಳಿದ ಅರ್ಧ ಹಣ ನೀಡಿ ಎಂದು ಯೋಗಿ ಬಾಬು ಕೇಳಿದಾಗ ನಿನ್ನ ಮುಖಕ್ಕೆ ಇದೆ ಹೆಚ್ಚು ಇದನ್ನು ತೆಗೆದುಕೊಂಡು ಇಲ್ಲಿಂದ ಹೋಗಯ್ಯ ಎಂದು ಅವಮಾನಿಸುತ್ತಾರೆ ಅಂತೆ. ಅವಮಾನಿಸಿದರು ಮತ್ತೆ ಮತ್ತೆ ಉಳಿದ ಹಣಕ್ಕಾಗಿ ಕೇಳಿದಾಗ ನಿರ್ಮಾಪಕರನ್ನೇ ಕೇಳುವಂತೆ ಹೇಳುತ್ತಾರೆ. ಅವರನ್ನು ಕೇಳಲೆಂದು ಅವರ ಮನೆಗೆ ಹೋದಾಗ, ಅವರ ಪತ್ನಿ ಈತನನ್ನು ಕಂಡು ಈತನೊಬ್ಬ ಕಳ್ಳ ಇರಬಹುದು ಎಂದು ಭಾವಿಸಿ ತನ್ನ ನಾಯಿಯನ್ನು ಬಿಟ್ಟು ಕಚ್ಚಿಸಿಸುತ್ತಾಳೆ. ಆದರೆ ಮನೆಯೊಳಗೆ ಸೇರಿಸುವುದಿಲ್ಲ. ಉಳಿದ ಹಣವನ್ನು ನೀಡುವುದಿಲ್ಲ.

[widget id=”custom_html-3″]

ಹೀಗೆ ಇವರ ಮುಖ ನೋಡಿದ ಯಾರೊಬ್ಬರೂ ಯೋಗಿ ಬಾಬು ಅವರಿಗೆ ಸರಿಯಾದ ಪಾತ್ರ ನೀಡುವುದಿಲ್ಲ. ಇದರಿಂದ ಮನನೊಂದು ಯೋಗಿ ಬಾಬು ದಿನಕ್ಕೆ 50 ರೂಪಾಯಿಯಂತೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾರೆ. ಆದ್ರೂ ಅಲ್ಲಿಯೂ ಅವಮಾನಿಸಿ ಹಾಕುತ್ತಾರೆ. ಇದಾದ ನಂತರ ಮನನೊಂದ ಯೋಗಿ ಬಾಬು ಒಬ್ಬ ನಿರ್ಮಾಪಕರ ಬಳಿ ಹೋಗಿ ತನ್ನ ಜೀವನದಲ್ಲಿ ನಡೆದ, ಅನುಭವಿಸಿದ ಪ್ರತಿ ಅವಮಾನಗಳನ್ನು, ಘಟನೆಗಳನ್ನು ಹೇಳಿಕೊಳ್ಳುತ್ತಾರೆ. ಆಗ ನಿರ್ಮಾಪಕರು ಸಂತೈಸಿ ನೀನು ಹೀಗೆ ಇರು ಕಾಮಿಡಿ ಪಾತ್ರವೇ ಮಾಡು ಎಂದು ಹೇಳುತ್ತಾರೆ. ಮುಂದೊಂದು ದಿನ ಇದೇ ನಿನ್ನ ಮುಖಕ್ಕೆ ಲಕ್ಷಾಂತರ ರೂಪಾಯಿ ಸುರಿಯುತ್ತಾರೆ ನೆನಪಿರಲಿ ಎಂದು ಹೇಳಿದರಂತೆ. ಅದರಂತೆ ತಮಿಳಿನಲ್ಲಿ ಮೂಡಿಬಂದ “ಪೆಣ್ಣಿಮುಂಜಿ” ಎಂದರೆ ‘ಹಂದಿ ಮುಖದವನು’ ಎಂಬ ಕಾಮಿಡಿ ಪಾತ್ರದಲ್ಲಿ ಮಿಂಚಿದ ಇವರು ಅಪಾರ ಅಭಿಮಾನಿಗಳ ಜೊತೆಗೆ ಹಣವನ್ನು ಹಾಗೂ ಹೆಸರನ್ನು ಗಳಿಸುತ್ತಾರೆ.

[widget id=”custom_html-3″]

ಆದರೆ ಇವರ ತಾಯಿ ಮಾತ್ರ ನಿನಗೆ ಜನರು ಹಂದಿ ಮುಖದವನು ಎಂದು ಹೇಳಿದ್ದು ನನಗೆ ಬೇಸರ ತಂದಿದೆ ಎಂದು ದುಃಖಿಸುತ್ತಾರೆ. ನೋವು ಪಡುತ್ತಾರೆ. ಆದ್ರೆ, ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಯೋಗಿ ಅವರು ಮಾತ್ರ ಹಂತಹಂತವಾಗಿ ಕಾಮಿಡಿಯನ್ ಪಾತ್ರಗಳಲ್ಲಿ ಫೇಮಸ್ ನಟನಾಗಿ ಮುಂದುವರಿಯುತ್ತಾರೆ. ನಂತರದ ಚಿತ್ರಗಳಲ್ಲಿ ವಿಲನ್ಗಳ ಜೊತೆಗೆ, ಕಾಮಿಡಿ ಯನ್ನಾಗಿ, ಕಳ್ಳರ ಗುಂಪಿನಲ್ಲಿ ಹೀಗೆ ಸಿಕ್ಕ ಪಾತ್ರಗಳನ್ನು ಅಭಿನಯಿಸುತ್ತಾ ತಮ್ಮ ಅಭಿನಯದಲ್ಲಿ ತಲ್ಲೀನರಾಗಿದ್ದಾರೆ ಯೋಗಿ ಬಾಬು ಅವರು. ಒಂದು ದಿನಕ್ಕೆ 300 ರೂಪಾಯಿ ನೀಡದ ನಿರ್ಮಾಪಕರು ಇಂದು ದಿನಕ್ಕೆ 5 ರಿಂದ 6 ಲಕ್ಷ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆ. ಹೀಗೆ ಯೋಗಿ ಬಾಬು ಅವರು ತಮ್ಮ ಆತ್ಮಬಲದಿಂದ ಬೆಳೆದು ನಿಂತು ತನ್ನಂತಹ ಕಲಾವಿದರಿಗೆ ಧೈರ್ಯ ಮತ್ತು ಆತ್ಮಬಲ ತುಂಬಿದ್ದಾರೆ. ತುಂಬುತ್ತಲೇ ಇದ್ದಾರೆ.