Advertisements

ಮಸೀದಿಯ ನಿರ್ಮಾಣ ಕಾರ್ಯಕ್ರಮಕ್ಕೆ ನೀವು ಹೋಗುತ್ತೀರಾ? ಎಂಬ ಪ್ರಶ್ನೆಗೆ ಯೋಗಿ ಆದಿತ್ಯನಾಥ್ ಕೊಟ್ಟ ಉತ್ತರವೇನು ಗೊತ್ತಾ?

News

ಕೋಟಿ ಕೋಟಿ ರಾಮ ಭಕ್ತರ ಕನಸು ಇಂದು ನನಸಾಗಿದೆ. ಶತಮಾನಗಳ ಆಯೋದ್ಯೆಯ ವಿವಾದ ಬಗೆಹರಿದು ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿಯ ಪೂಜೆ ಕಾರ್ಯಕ್ರಮ ಆಗಸ್ಟ್ 5 ರಂದು ನೆರವೇರಿದೆ. ಇನ್ನೂ ಆಯೋದ್ಯೆಯ ಶ್ರೀರಾಮ ಮಂದಿರ ಭೂಮಿಯ ಪೂಜೆಯ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈಗ ಮಂದಿರ ನಿರ್ಮಾಣ ಹಾಗೂ, ಅಯೋದ್ಯೆಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಹೆಚ್ಚು ಒತ್ತನ್ನು ನೀಡಿದ್ದಾರೆ‌. ಇನ್ನೂ ಮಂದಿರ ಭೂಮಿಯ ಪೂಜೆ ನಡೆದ ಬಳಿಕ ಈಗ ಮಸೀದಿಯ ನಿರ್ಮಾಣದ ಮಾತುಗಳು ಕೇಳಿ ಬರುತ್ತಿವೆ. ಈ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಸ್ವಷ್ಟ ಉತ್ತರವನ್ನು ಕೊಟ್ಟಿದ್ದಾರೆ.

Advertisements

ಹೌದು ಮಾಧ್ಯಮದವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಸೀದಿ ನಿರ್ಮಾಣದ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುತ್ತೀರಾ ಎಂದು ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉತ್ತರವನ್ನು ನೀಡಿದ ಯೋಗಿಯವರು. ಮಸೀದಿಯ ನಿರ್ಮಾಣ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ನಿಲುವಿನಲ್ಲಿ ನನಗೆ ಗೊಂದಲವೂ ಕೂಡ ಇಲ್ಲ. ನಾನು ಯಾವುದೇ ಜಾತಿ, ಧರ್ಮ, ಪಂಥ ಎಂದು ತಾರತಮ್ಯವನ್ನು ಮಾಡಿಲ್ಲ ಮುಂದೆಯೂ ಮಾಡುವುದು ಇಲ್ಲ, ನಾನೊಬ್ಬ ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಕೂಡ ಸಮಾನತೆಯಿಂದ ನೋಡುತ್ತಿದ್ದೇನೆ. ಆದರೆ ನಾನೊಬ್ನ ಯೋಗಿ ಹಿಂದೂ ಆಗಿರುವುದರಿಂದ ಮಸೀದಿಯ ನಿರ್ಮಾಣ ಕಾರ್ಯಕ್ರಮಕ್ಕೆ ನಾನು ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಇದೇ ಸಮಯದಲ್ಲಿ ರಾಮ ಜನ್ಮಬೂಮಿ ದಾವೆದಾರ ಇಕ್ಬಾಲ್ ಅನ್ಸಾರಿಯವರನ್ನು ಯೋಗಿ ಆದಿತ್ಯನಾಥ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಎಲ್ಲರೂ ಇಕ್ಬಾಲ್ ಅನ್ಸಾರಿಯಿಂದ ಪ್ರೇರಿತರಾಗಬೇಕು, ಕೋರ್ಟ್ ನೀಡಿದ ಆದೇಶವನ್ನು ಇಕ್ಬಾಲ್ ಅನ್ಸಾರಿಯವರು ಸ್ವೀಕರಿಸಿದ್ದಾರೆ. ಬಾಬ್ರಿ ಮಸೀದಿಗಾಗಿ ದಶಕಗಳಿಂದ ಆಯೋದ್ಯೆಯ ಕುರಿತು ಕಾನೂನು ಹೋರಾಟ ಮಾಡುತ್ತ ಬಂದಿದ್ದಾರೆ. ಆದರೆ ಇವರು ಒಬ್ಬ ಮುಸ್ಲಿಂ ಹಾಗಿ ಇಕ್ಬಾಲ್ ಅನ್ಸಾರಿಗೆ ಯಾವತ್ತೂ ಕೂಡ ಅಭದ್ರತೆ ಕಾಡಿಲ್ಲ. ಈ ಪರಿಸ್ಥಿತಿ ಏನಾದರೂ ಪಾಕಿಸ್ತಾನ ಆಫ್ಘಾನಿಸ್ತಾನದಲ್ಲಿ ಇದ್ದರೆ ಒಮ್ಮೆ ಆಲೋಚನೆ ಮಾಡಿ. ಹಿಂದೂ ಆ ದೇಶದಲ್ಲಿ ಸುರಕ್ಷಿತವಾಗಿ ಇರುತ್ತಿದ್ದನೆ ಎಂದು ಪ್ರಶ್ನಿಸಿದ್ದಾರೆ.

ಆಯೋದ್ಯೆಯ ರಾಮ ಜನ್ಮ ಭೂಮಿಯ ವಿವಾದವನ್ನು ಶತಮಾನಗಳ ಹಿಂದೆಯೇ ಮುಗಿಸಬಹುದಿತ್ತು. ಆದರೆ ಅಂದು ಕಾಂಗ್ರೆಸ್ ಸರ್ಕಾರ ರಾಜಕೀಯ ವಿಷಯಕ್ಕೆ ಬಳಸಿಕೊಂಡಿತ್ತು. ಇಂದು ಕ್ರೆಡಿಟ್ ಪಡೆಯಲು ಬಯಸುತ್ತಿದೆ. ಈಗ ಎಲ್ಲದಕ್ಕೂ ಕೂಡ ಕೊನೆಗೊಂಡಿದೆ ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.