Advertisements

ಸ್ಟೇಜ್ ಮೇಲೆ ಆ್ಯಂಕರ್ ಅನುಶ್ರೀ ಮಾಡಿದ ಈ ಕೆಲಸಕ್ಕೆ ಎಲ್ಲರ ಮುಂದೆ ಮಂಗಳಾರತಿ ಮಾಡಿದ ರವಿಚಂದ್ರನ್! ಬೆಚ್ಚಿ ಬೆರಗಾದ ಅನುಶ್ರೀ..

Entertainment

ಪ್ರಿಯ ವೀಕ್ಷಕರೆ ಸೆಲೆಬ್ರೆಟಿಗಳು ಆಡಿದ್ದೆ ಮಾತು, ಹೇಳಿದ್ದೆ ಸುದ್ದಿ‌.. ಹೀಗೆ ದಿನಾ ಒಂದಲ್ಲ ಒಂದು‌ ಕಾರಣಕ್ಕಾಗಿ ಸುದ್ದಿಯಲ್ಲಿ ಟ್ರೋಲ್ ನಲ್ಲಿ ಇದ್ದೆ ಇರ್ತಾರೆ.. ‌ಸಿನಿಮಾಗಳನ್ನು ಹೊರತು ಪಡಿಸಿ ಜನರನ್ನು‌ ಮನರಂಜಿಸುವುದು ರಿಯಾಲಿಟಿ ಶೋಗಳು ಅದರಲ್ಲಿ ಮಜಾಭಾರತ, ಬಿಗ್ ಬಾಸ್ ಮತ್ತು ಸರಿಗಮಪ ಕೂಡ ಒಂದಾಗಿದೆ. ಮೊನ್ನೆ ಅಷ್ಟೆ ನಾದ ಬ್ರಹ್ಮ ಹಂಸಲೇಖ ನೀಡಿದ್ದ ಹೇಳಿಕೆಯು ಹಲವು ಗೊಂದಲಗಳನ್ನು ಸೃಷ್ಟಿಸಿ ಕೊನೆಗೆ ಕ್ಷಮೆಯಾಚಿಸುಂತಾಗಿತ್ತು. ಕಳೆದ ವಾರ ಸರಿಗಮಪದಲ್ಲಿ ರವಿಚಂದ್ರನ್ ಅನುಶ್ರೀ ಮಾಡಿದ ಆ ಕೆಲಸಕ್ಕೆ ಹೇಳಿದ್ದೇನು ಗೊತ್ತಾ.. ಕೆಲವೂಮ್ಮೆ ಘಟನೆಗಳು ಆನ್ ದಿ ಸ್ಕ್ರೀನ್ ನಡೆದು ಬಿಟ್ಟಾಗ ಎಡಿಟ್ ಮಾಡಲು ಸಾಧ್ಯವಾಗುವುದಿಲ್ಲ ಅಂತಹದ್ದೆ ಘಟನೆ ಈ ವಾರದ ಸರಿಗಮಪ ಶೋ ನಲ್ಲಿ ನಡೆದಿತ್ತು. ಕಳೆದ ವಾರ ಜೀ ಕನ್ನಡದ ಸರಿಗಮಪ ಶೋನಲ್ಲಿ ರವಿ ಹಂಸ ಲೋಕ ವೆಂಬ ಕಾನ್ಸೆಪ್ಟ್ ಜೊತೆಗೆ ರವಿಚಂದ್ರನ್ ಅವರ ಹಾಡುಗಳನ್ನು ಸ್ಪರ್ಧಿಗಳು ಹಾಡಿ ಮನರಂಜಿಸಿದರು..

[widget id=”custom_html-3″]

Advertisements

ಇನ್ನು ರವಿಚಂದ್ರನ್ ಅವರೂ ಸಹ ಕಾರ್ಯಕ್ರಮದಲ್ಲಿ ತಮ್ಮ ಹಳೆಯ ದಿನಗಳ ಅನೇಕ ನೆನಪುಗಳನ್ನು ಹಂಚಿಕೊಂಡರು.. ಇದಷ್ಟೆ ಅಲ್ಲದೆ ಆ ದಿನ ರವಿಚಂದ್ರನ್ ಅವರದ್ದೇ ಹಾಡುಗಳ ಸುರಿಮಳೆ ಶೊ ತುಂಬ ಮುಳುಗಿತ್ತು‌. ಇಡೀ ಸರಿಗಮಪ ಶೋ ಪ್ರೇಮಲೋಕವಾಗಿ ಬಿಟ್ಟಿತ್ತು‌‌. ಇನ್ನು ಶೋ ನಲ್ಲಿ ಅಥಿತಿಗಳಾಗಿ ಬಂದವರಿಗೆ ಮನರಂಜಿಸಲು ಕೆಲವೊಂದು ಪರಪಾಮೆನ್ಸ್ ಗಳನ್ನು ಮಾಡಲಾಗುತ್ತದೆ. ರವಿಚಂದ್ರನ್ ನೇರ ನುಡಿಯನ್ನಾಡುವ ವ್ಯೆಕ್ತಿ ಎಲ್ಲೆ ಹೋದರು ಅವರು ಯಾರ ಮುಲಾಜಿಲ್ಲದೆ‌ ಅನಿಸಿದ್ದನ್ನು ಹೇಳಿಬೀಡ್ತಾರೆ. ಈ ಶೋ ನಲ್ಲಿ ನಡೆದಿದ್ದು ಇದೆ. ರವಿಚಂದ್ರನ್ ಅವರನ್ನು ಮೆಚ್ಚಿಸುವ ಸಲುವಾಗಿ ಪ್ರೇಮಲೋಕ ಸಿನಿಮಾದಿಂದ ನೋಡಮ್ಮಾ ಹುಡುಗಿ ಕೇಳಮ್ಮಾ ಸರಿಯಾಗಿ ಹಾಡನ್ನು ಅನುಶ್ರೀ ಹಾಗೂ ಗಾಯಕರು ಮರು ಸೃಷ್ಟಿ ಮಾಡಿದ್ದರು.. ಅನುಶ್ರೀ ಅವರು ಪ್ರೇಮಲೋಕ ಸಿನಿಮಾದ ನಾಯಕಿ ಜೂಹಿ ಚಾವ್ಲಾ ಪಾತ್ರದಲ್ಲಿ ಕಾಣಿಸಿಕೊಂಡು ಹಾಗೂ ಅರ್ಜುನ್ ಜನ್ಯಾ ಅವರು ರವಿಚಂದ್ರನ್ ಅವರಾಗಿ ಕಾಣಿಸಿಕೊಂಡರು..

[widget id=”custom_html-3″]

ಇತ್ತ ಹಾಡಿನಲ್ಲಿ ಬರುವ ಪ್ರೊಫೆಸರ್ ಪಾತ್ರದ ವಿಷ್ಣುವರ್ಧನ್ ಅವರಾಗಿ ಗಾಯಕ ಹರ್ಷ ಅಭಿನಯಿಸಿ ಹಾಡಿದರು.. ಪರ್ಫಾರ್ಮೆನ್ಸ್ ಏನೋ ಮುಗಿಯಿತು.. ರವಿಚಂದ್ರನ್ ಅವರಿಂದ ಹೊಗಳಿಕೆಯ ಬರಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಅನುಶ್ರೀ ನಮ್ಮ ಪರ್ಫಾರ್ಮೆನ್ಸ್ ಹೇಗಿತ್ತು ಎಂದು ಕೇಳಿದಾಗ ತಕ್ಷಣ ನೇರವಾಗಿ ತಮ್ಮ ಅಭಿಪ್ರಾಯ ಹೇಳಿದ ರವಿಚಂದ್ರನ್ “ಅದಕ್ಕೇ ಹೇಳೋದು ಪ್ರೇಮಲೋಕವನ್ನು ಮತ್ತೆ ಯಾರೂ ಮಾಡೋಕಾಗಲ್ಲ ಅಂದಿದ್ದು ಅಂತ ಯಾವುದೇ ಮುಲಾಜಿಲ್ಲದೇ ಹೇಳಿದರು.. ಅಷ್ಟೇ ಅಲ್ಲದೇ ಕಾಪಿ ಮಾಡಿದರೆ ನೀಟಾಗಿ ಕಾಪಿ‌ ಮಾಡ್ಬೇಕು.. ಕಾಲ್ ಕೊಟ್ಟು ಬೀಳ್ಸಿದ್ ಮೇಲೆ ಟೇಬಲ್ ಮೇಲೆ ಬಿದ್ದಾಗ ಹೀರೋ ತುಟಿಗೆ ತುಟಿ ಟಚ್ ಆಗಿ ಪ್ರೀತಿ ಹುಟ್ಬೇಕು.. ಅದನ್ನ ಬಿಟ್ಟು ಏನೇನೋ ಮಾಡಿದ್ರೆ ಅದು ಪ್ರೇಮ ಲೋಕ ಆಗಲ್ಲ ಎಂದರು.

[widget id=”custom_html-3″]

ಇದನ್ನು ಗಮನಿಸಿದ ಹಂಸಲೇಖ ಸಿಚುವೇಷನ್ ಅರ್ಥ ಮಾಡಿಕೊಂಡು ಸೂಪರ್ ಪರಫಾರಮೇನ್ಸ್ ಎಂದು ಹೊಗಳಿದರು. ಆಗ ರವಿಚಂದ್ರನ್ ಸಂದರ್ಭದ ಅರಿತು ಮಾಡಿದ್ದು ಎನೇ ಇರಲಿ ಮನಸ್ಪೊರ್ತಿಯಿಂದ ಮಾಡಿದಿರೆಂದು ಮುಗುಳುನಗೆ ಬಿರಿದರು. ಹಂಸಲೇಖ ಗೋಲ್ಡನ್ ಬಜರ್ ಒತ್ತಿ ಸಂದರ್ಭವನ್ನು ಮತ್ತಷ್ಟು ತಿಳಿಮಾಡಿದರು. ಇನ್ನು ವಿಜಯ ಪ್ರಕಾಶ್ ಪ್ರೇಮಲೋಕವನ್ನು ಮತ್ತೊಮ್ಮೆ ನೋಡಿದಂತಾಯಿತು ಎಂದರೂ. ಈ ಮಾತಿಗೆ ಆ ತಕ್ಷಣ ರವಿಚಂದ್ರನ್ ಅವರು ಮತ್ತೆ ವಿಜಯ್ ಪ್ರಕಾಶ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ “ವಿಜಯ್ ಪ್ರಕಾಶ್ ಹೇಳೋ ಮಾತು ಕೇಳಿದರೆ ಇವರು ನಿಜವಾಗ್ಲೂ ನಿಜವಾದ ಪ್ರೇಮಲೋಕವನ್ನ ನೋಡಿದ್ದಾರಾ ಅಂತ ಡೌಟ್ ಆಗ್ತಿದೆ” ಎಂದು ನಕ್ಕರು.. ಒಟ್ಟಾರೆ ಆಂದು ನೇರವಾಗಿ ಪ್ರಸಾರವಾದ ಈ ಶೋನ ಈ ಭಾಗ ನಿಜಕ್ಕೂ ಎಲ್ಲರಿಗೂ ಒಂದು ಕ್ಷಣ ದಿಗಿಲು ಮೂಡಿಸಿತ್ತು.

[widget id=”custom_html-3″]