ನಮಸ್ತೆ ಸ್ನೇಹಿತರೆ, ಕನ್ನಡ ಪ್ರಖ್ಯಾತ ರಿಯಾಲಿಟಿ ಶೋ ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 17 ಮೊನ್ನೆಯಷ್ಟೇ ಮುಕ್ತಾಯಗೊಂಡಿದೆ.. ಗ್ರಾಂಡ್ ಫಿನಾಲೆ ನಡೆದು ಈ ಬಾರಿ ವಿಜೇತರಾಗಿ ಶ್ರೀನಿಧಿಯವರು ಆಯ್ಕೆಯಾಗಿದ್ದಾರೆ.. ಈ ಬಾರಿ ಕಾರ್ಯಕ್ರಮ ಬಹಳ ದೊಡ್ಡ ವಿಶೇಷತೆ ಏನೆಂದರೆ ಅದು ರತ್ನಮ್ಮ ಮತ್ತು ಮಂಜಮ್ಮ.. ಹೌದು ಕಣ್ಣು ಕಾಣದ ಇಬ್ಬರು ಅಂಧ ಗಾಯಕಿಯರಿಗೆ ಜೀ ಕನ್ನಡ ವಾಹಿನಿಯಲ್ಲಿ ಹಾಡಲು ಅವಕಾಶ ಮಾಡಿಕೊಟ್ಟಿತ್ತು. ಇಷ್ಟೇ ಅಲ್ಲದೇ ಕಾರ್ಯಕ್ರಮದ ಕೊನೆಯವರೆಗೂ ವಿಶೇಷ ಸ್ಪರ್ಧಿಗಳಾಗಿ ಹಾಡಲು ಆಯ್ಕೆ ಮಾಡಿಕೊಟ್ಟು ಕೊನೆಯವರೆಗೂ ಜನರ ಸಹಾಯದಿಂದ ಎಷ್ಟು ದುಡ್ಡು ಕಲೆಕ್ಟ್ ಆಗುತ್ತೋ ಅಷ್ಟು ಕೊಡುತ್ತೇವೆ ಎಂದು ಹೇಳಿತ್ತು..

ಇದೀಗ ಸರಿಗಮಪ ಪೈನಲ್ ಕಾರ್ಯಕ್ರಮ ಮುಗಿದಿದ್ದು ಜೀ ಕನ್ನಡ ಕೊಟ್ಟ ಮಾತು ನಡೆದುಕೊಂಡಿದಿಯಾ.. ಈ ಇಬ್ಬರು ಅಂಧ ಸಹೋದರಿಯರಿಗೆ ಕೊಟ್ಟ ಹಣವೆಷ್ಟು ಎಂಬುದನ್ನ ತಿಳಿಯೋಣ ಬನ್ನಿ.. ವರ್ಷದ ಆರಂಭದಲ್ಲೇ ಶುರುವಾದ ಸರಿಗಮಪ ಶೋ ಈ ಬಾರಿ ಹತ್ತು ಹನ್ನೆರಡು ತಿಂಗಳ ಕಾಲ ನಡೆದಿದೆ.. ಏಕೆಂದರೆ ಕ’ರೋನ ಲಾಕ್ ಡೌನ್ ಕಾರಣದಿಂದದಾಗಿ ಶೂಟಿಂಗ್ ನಡೆಯದಿದ್ದ ಕಾರಣ ಈ ಕಾರ್ಯಕ್ರಮ ಪ್ರಸಾರವಾಗಿರಲಿಲ್ಲ.. ಆನಂತರ ಅವಕಾಶ ಸಿಕ್ಕ ಬಳಿಕ ಮತ್ತೆ ಸರಿಗಮಪ ಶೋ ಪ್ರಸಾರ ಶುರುಮಾಡಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಹಾಗೆ ರತ್ನಮ್ಮ ಮತ್ತು ಮಂಜಮ್ಮ ಅವರಿಗೂ ಸಹಾಯ ಮಾಡಿ ತನ್ನ ದೊಡ್ಡತನವನ್ನು ಜೀ ಕನ್ನಡ ಮೆರೆದಿದೆ.

ಹೌದು ತುಮಕೂರಿನ ದೇವಸ್ತಾನದಲ್ಲಿ ಹಾಡು ಹೇಳಿ ಜನರಿಂದ ಹಣ ಪಡೆದು ಜೀವನ ಸಾಗಿಸುತ್ತಿದ್ದ ಈ ಇಬ್ಬರು ಗಾಯಕಿಯರನ್ನು ಜೀ ಕನ್ನಡ ಕಾರ್ಯಕ್ರಮಕ್ಕೆ ಆಹ್ವಾನಿಸಿ ಇಬ್ಬರನ್ನು ಸ್ಪರ್ಧೆಯಿಂದ ಹೊರಗಿಟ್ಟು ವಿಶೇಷ ಸ್ಪರ್ಧಿಗಳಾಗಿ ಕೊನೆಯವರೆಗೂ ಹಾಡಲು ಅವಕಾಶ ಮಾಡಿಕೊಟ್ಟಿತ್ತು.. ಮೊದಲ ಸಂಚಿಕೆಯಲ್ಲಿ ಇವರ ಕಷ್ಟಗಳನ್ನು ಕಂಡಿದ್ದ ಇಡೀ ಕರ್ನಾಟಕ ಜನತೆ ಇವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದರು.. ಆಗಿನಿಂದ ಬಂದ ದುಡ್ಡನ್ನು ಒಟ್ಟುಗೂಡಿಸಿ ಸುಮಾರು ಐದು ಲಕ್ಷ ರೂಪಾಯಿಯನ್ನು ಮೊನ್ನೆಯ ಫಿನಾಲೆಯಲ್ಲಿ ಇಬ್ಬರು ಅಂಧ ಸಹೋದರಿಯರಿಗೆ ನೀಡಲಾಗಿದೆ..

ಇದರಲ್ಲಿ ಎರಡೂವರೆ ಲಕ್ಷ ಜನರ ಸಹಾಯವಾದರೆ, ಇನ್ನೂ ಎರಡೂವರೆ ಲಕ್ಷ ಹಣ ಜೀ ಕನ್ನಡದ ಕೊಡುಗೆ.. ಈ ದುಡ್ಡು ಇವರ ಕೈ ಸೇರಿ ಹಾಳಾಗದಂತೆ ಬ್ಯಾಂಕ್ ನಲ್ಲಿ ಎಪ್.ಡಿ ಮಾಡಲಾಗಿದ್ದು ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಸ್ವಲ್ಪ ದುಡ್ಡು ಇವರ ಜೀವನ ನಿರ್ವಹಣೆಗೆ ಹೋಗಲಿದೆ.. ಈಗಾಗಲೇ ಇವರಿಗೆ ಜಗ್ಗೇಶ್ ಅವರ ಕಡೆಯಿಂದ ಹೊಸ ಮನೆ ಸಿಕ್ಕಿದ್ದು.. ಇನ್ನೂ ಅರ್ಜುನ್ ಜನ್ಯಾ ಅವರು ಒಪ್ಪಿಕೊಂಡತೆ ಪ್ರತಿ ತಿಂಗಳು ರೇಷನ್ ಸಪ್ಲೈ ಮಾಡುತ್ತಿದ್ದಾರೆ. ಹಾಗೆಯೇ ಹಂಸಲೇಖ ಅವರಿಂದಲೂ ಆರ್ಕೇಸ್ಟ್ರಾ ಸೆಟ್ ಸಿಕ್ಕಿದ್ದು ಇನ್ನು ಮುಂದೆ ಇವರಿಬ್ಬರೂ ಸೇರಿ ಆರ್ಕೆಸ್ಟ್ರಾ ಕೂಡ ನಡೆಸಬಹುದು.. ಒಟ್ಟಿನಲ್ಲಿ ಇಬ್ಬರು ಅಂಧ ಗಾಯಕರು ಬಾಳು ಜೀ ಕನ್ನಡದಿಂದ ಬೆಳಗಿದೆ ಎನ್ನಬಹುದು.. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ.