ನಮಸ್ತೆ ಸ್ನೇಹಿತರೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ಎರಡು ಧಾರವಾಹಿಗಳು ಪ್ರೇಕ್ಷಕರಿಗೆ ಅತಿ ಅಚ್ಚುಮೆಚ್ಚು. ಅತಿಯಾಗಿ ಹೆಣ್ಣುಮಕ್ಕಳು ನೋಡುತ್ತಿದ್ದ ಈ ಧಾರವಾಹಿಗಳನ್ನು ನೋಡಲು ಈಗ ಹುಡುಗರು ಸಹ ಪ್ರಾರಂಭ ಮಾಡಿದ್ದಾರೆ ಅಷ್ಟರ ಮಟ್ಟಿಗೆ ಈ ಎರಡು ಸೀರಿಯಲ್ ಗಳು ಪೇಮಸ್ ಆಗಿದೆ. ಆ ಸೀರಿಯಲ್ ಗಳು ಯಾವುದು ಎಂದರೆ ಮೊದಲಿಗೆ ಜೊತೆ ಜೊತೆಯಲಿ, ಈ ಸೀರಿಯಲ್ ಬಂದ ನಂತರ ಜೊತೆ ಜೊತೆಗೆ ಅತಿಯಾದ ಹಿಟ್ ತಂದುಕೊಟ್ಟು ನೋಡುವ ಪ್ರೇಕ್ಷಕರಿಗೆ ಅತಿ ಅತ್ತಿರವಾಗಿದೆ ಇನ್ನೂ ಗಟ್ಟಿಮೇಳ ಸೀರಿಯಲ್ ನಲ್ಲಿ ತುಂಟಾಟ ಕಾಮಿಡಿ ಹಾಗೂ ನಟ ನಟಿಯರ ನಡುವಿನ ವಾಗ್ವಾದ, ಪ್ರೀತಿ ಎಲ್ಲವೂ ಇದ್ದು ಜನರಿಗೆ ಒಂದೇ ಸೀರಿಯಲ್ ನಲ್ಲಿ ಇವೆಲ್ಲವನ್ನೂ ನೋಡಲು ಕೂತುಹಲವನ್ನು ಉಂಟು ಮಾಡಿ ಗಟ್ಟಿಮೇಳ ಪ್ರೇಕ್ಷಕರಿಗೆ ಅತ್ತಿರವಾಗಿದೆ.

ಈಗ ಈ ಎರಡು ಟಾಪ್ ಸೀರಿಯಲ್ ಗಳ ಕುಟುಂಬ ಒಂದೇ ಕಡೆ ಬೇಟಿಯಾಗಲಿದ್ದು ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ಪ್ರೇಕ್ಷಕರಿಗೆ ಸಂತಸವನ್ನು ತಂದಿದೆ. ಹೌದು ಸ್ನೇಹಿತರೆ ಅನು ಸಿರಿಮನೆ ಹಾಗೂ ಗಟ್ಡಮೇಳದ ಅಮೂಲ್ಯ ಒಂದೇ ಕಡೆ ಗಣೇಶ ಹಬ್ಬವನ್ನು ಆಚರಿಸಲಿದ್ದಾರೆ. ಈಗಾಗಲೇ ಈ ಎರಡು ದಾರಾವಾಹಿಗಳ ನಟ ನಟಿಯರು ಪಾತ್ರಗಳಲ್ಲಿ ಬೇಟಿಯಾಗಿದ್ದಾರೆ. ಜೊತೆ ಜೊತೆಯಲಿ ಅನುಸಿರಿಮನೆ ಅವರ ಅಮ್ಮ ರಸ್ತೆಯಲ್ಲಿ ನಡೆಯುತ್ತ ಬರುತ್ತಿರುತ್ತಾರೆ ಇದೇ ಸಮಯಕ್ಕೆ ಅನು ಅಮ್ಮನನ್ನು ಬೇಟಿ ಮಾಡುತ್ತಾರೆ ತದನಂತರ ಒಬ್ಬ ಕಳ್ಳಿ ಅನು ಅಮ್ಮನ ಬ್ಯಾಗ್ ಅನ್ನು ಕಳವು ಮಾಡಿಕೊಂಡು ಹೊಡುತ್ತಿರುತ್ತಾಳೆ. ಇದರ ಹಿಂದೆ ಇವರು ಕೂಡ ಕಳ್ಳಿಯನ್ನು ಇಡಿಯಲು ಹೋಡುತ್ತಿರುತ್ತಾರೆ, ಇದೆ ವೇಳೆ ಗಟ್ಟಿಮೇಳ ರೌಡಿ ಬೇಬಿ ಅಮೂಲ್ಯ ಎಂಟ್ರಿಕೊಟ್ಟು ಕಳ್ಳಿಯನ್ನು ಹಿಡಿದು ಬ್ಯಾಗ್ ಕಿತ್ತುಕೊಂಡು ಇವರಿಗೆ ಕೊಡುತ್ತಾಳೆ ಇಲ್ಲಿ ಎರಡೂ ಧಾರವಾಹಿಯ ಪಾತ್ರಗಳು ಪರಿಚಯವಾಗುತ್ತದೆ.

ಕಡೆಗೂ ಅನು ಸಿರಿಮನೆ ಗಟ್ಟಿಮೇಳ ಅಮೂಲ್ಯ ಮನೆಗೆ ಬಂದಿದ್ದಾಯ್ತು. ಇನ್ನೇನಿದ್ದರೂ ಗಣೇಶನ ಹಬ್ಬದಂದು ಮಂಜುನಾಥ ಹಾಗೂ ಅನು ಸಿರಿಮನೆ ಕುಟುಂಬದವ್ರು ಹಬ್ಬವನ್ನು ಗ್ರ್ಯಾಂಡ್ ಹಾಗು ಆಚರಸೊದೊಂದೆ ಬಾಕಿ. ಇನ್ನೂ ಪುಷ್ಪ ಅವರು ಕೂಡ ಗಣೇಶ ಹಬ್ಬಕ್ಕೆ ವಿಶೇಷವಾದ ಪಾರ್ಟಿಯನ್ನು ಕೊಡಲಿದ್ದಾರೆ. ಈ ಪಾರ್ಟಿಗೆ ಬೇಬಿ ಅಮೂಲ್ಯ,ಅದಿತಿ, ಬರುತ್ತಾರೆ. ಎಲ್ಲರೂ ಸೇರಿ ಗಣಪನಿಗೆ ಆರತಿಯನ್ನು ಬೆಳಗಿ ಪೂಜೆಯನ್ನು ಸಲ್ಲಿಸುತ್ತಾರೆ. ಆಗಸ್ಟ್ 20 ರಂದು ಗಣೇಶ ಹಬ್ಬದ ಮಹಾ ಸಂಗ್ರಮ ನಡೆಯಲಿದೆ. ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ ದಾರವಾಹಿಗಳ ಈ ಮಹಾಸಂಗ್ರಮವನ್ನು ನೋಡಲು ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ